ಹೊಸ ಕಾಂಕ್ರೀಟ್ ರಸ್ತೆ: ಒಂದು ಭಾಗ ಸಂಚಾರಕ್ಕೆ ಮುಕ್ತ
Team Udayavani, Jan 3, 2021, 12:09 PM IST
ಮಹಾನಗರ, ಜ. 2: ಹಂಪನಕಟ್ಟೆ ಜಂಕ್ಷನ್‌ನಲ್ಲಿ ಒಂದು ಭಾಗದ ರಸ್ತೆ ಕಾಮ ಗಾರಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಹಂಪನಕಟ್ಟೆ ಜಂಕ್ಷನ್‌ನಿಂದ ಮೂಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ(ಲೈಟ್ ಹೌಸ್ ಹಿಲ್) ಕಡೆಗೆ ಹೋಗುವ ವಾಹನಗಳು ಈಗ ಹೊಸ ರಸ್ತೆಯಲ್ಲೇ ಸಂಚರಿಸಲು ಅವಕಾಶ ನೀಡಲಾಗಿದೆ.
ಹಂಪನಕಟ್ಟೆ ಜಂಕ್ಷನ್- ಬಾವುಟಗುಡ್ಡೆ ರಸ್ತೆಯ ಕಾಂಕ್ರೀಟ್, ಫುಟ್‌ಪಾತ್ ಹಾಗೂ ಒಳಚರಂಡಿ ಕಾಮಗಾರಿಯನ್ನು ನ. 8ರಂದು ಆರಂಭಿಸಿ, ಭರದಿಂದ ನಡೆಸ ಲಾಗಿತ್ತು. ಇದೀಗ 180 ಮೀ. ಉದ್ದದ ರಸ್ತೆಯ ಒಂದು ಭಾಗದ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದೆ.
ಕಾಮಗಾರಿ ಹಿನ್ನೆಲೆ ನ. 8ರಿಂದಲೇ ಹಂಪನಕಟ್ಟೆ ಪರಿಸರದಲ್ಲಿ ಸಂಚಾರ ಬದಲಾವಣೆ ಮಾಡಲಾಗಿತ್ತು. ಲೈಟ್‌ಹೌಸ್ ಹಿಲ್ – ಬಾವುಟಗುಡ್ಡೆ – ಜ್ಯೋತಿ ವೃತ್ತ ಕಡೆಗೆ ಸಂಚರಿಸುವ ವಾಹನ ಗಳು ಕೆ.ಎಸ್. ರಾವ್ ರಸ್ತೆಯಾಗಿ ಹಳೆ ಬಸ್ ನಿಲ್ದಾಣದೊಳಗಿಂದ ತೆರಳಲು ಪರ್ಯಾಯ ವ್ಯವಸ್ಥೆ ಮಾಡಿಕೊಡ ಲಾಗಿತ್ತು. ಈಗ ಹಂಪನಕಟ್ಟೆ ಜಂಕ್ಷನ್ ಮುಖಾಂತರವೇ ಸಂಚರಿಸಬಹುದು. ಇನ್ನೊಂದು ಭಾಗದ ರಸ್ತೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಜ್ಯೋತಿ – ಮಿಲಾಗ್ರಿಸ್ ಮೂಲಕ ಹಂಪನಕಟ್ಟೆ ಜಂಕ್ಷನ್ ಕಡೆಗೆ ಬರಲು ಅವಕಾಶ ಸದ್ಯಕ್ಕಿಲ್ಲ.
ಪರ್ಯಾಯ ವ್ಯವಸ್ಥೆಯಂತೆ ಜ್ಯೋತಿ ವೃತ್ತ ಕಡೆಯಿಂದ ಬರುವ ವಾಹನಗಳು ಮಿಲಾಗ್ರಿಸ್ ರಸ್ತೆ-ವೆನಾÉಕ್ ಆಸ್ಪತ್ರೆ ಸಮೀಪದ ರಸ್ತೆ-ರೈಲು ನಿಲ್ದಾಣ ರಸ್ತೆಯಾಗಿ ಸ್ಟೇಟ್‌ಬ್ಯಾಂಕ್ ಕಡೆಗೆ ಸಂಚರಿಸಬೇಕಾಗಿದೆ.
ರಥಬೀದಿ: ಹೊಸ ರಸ್ತೆ ಬಿರುಕು : ರಥಬೀದಿಯಲ್ಲಿ ಇತ್ತೀಚೆಗೆ ನಿರ್ಮಾ ಣಗೊಂಡ ನೂತನ ಕಾಂಕ್ರೀಟ್ ರಸ್ತೆಯ ಕೆಲವೆಡೆ ಬಿರುಕು ಕಾಣಸಿಕೊಂಡ ಹಿನ್ನೆಲೆ ಯಲ್ಲಿ ಅದನ್ನು ಅಗೆದು ತೇಪೆ ಹಾಕಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಹಂಪನಕಟ್ಟೆ ಜಂಕ್ಷನ್ ರಸ್ತೆಯ ಒಂದು ಭಾಗದ ಕಾಮಗಾರಿ ಪೂರ್ಣಗೊಂಡು ಅದರಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನೊಂದು ಭಾಗದ ಕಾಮಗಾರಿ ಬಾಕಿ ಇದೆ. ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಈಗ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ನಡೆಯುತ್ತಿಲ್ಲ. ಕಾಮಗಾರಿ ಮತ್ತೆ ಶೀಘ್ರ ಆರಂಭವಾಗುವ ನಿರೀಕ್ಷೆ ಇದೆ. ರಥಬೀದಿಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಸಮೀಕ್ಷೆ ನಡೆಸಲು ಎನ್‌ಐಟಿಕೆ ತಜ್ಞರಿಗೆ ತಿಳಿಸುತ್ತೇನೆ. –ವೇದವ್ಯಾಸ ಕಾಮತ್, ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.