ದೇಶದಲ್ಲೀಗ ಅಭಿವೃದ್ಧಿಯ ಹೊಸ ಶಕೆ: ಡಿ.ವಿ.ಎಸ್.
Team Udayavani, Jan 21, 2019, 12:50 AM IST
ಮಂಗಳೂರು: ಮಹೋನ್ನತ ಪರಿಕಲ್ಪನೆಗಳ ಮೂಲಕ ಭಾರತದಲ್ಲಿ ಪರಿವರ್ತನೆಗೆ ನಾಂದಿ ಹಾಡಿ ಅದಕ್ಕೆ ವೇಗ ನೀಡಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಮಹಾನ್ ನಾಯಕ ನರೇಂದ್ರ ಮೋದಿಯವರು. ಇದರ ಫಲವಾಗಿ ಭಾರತ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥಿಕತೆಯ 5 ರಾಷ್ಟ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
“ಸಿಟಿಜನ್ ಕೌನ್ಸಿಲ್’ ಮಂಗಳೂರು ಚಾಪ್ಟರ್ ಮತ್ತು ಪಂಚಾಯತ್ ತಂಡ ಸಹಯೋಗದಲ್ಲಿ ನಗರದ ಟಿ.ವಿ. ರಮಣ್ ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ರವಿವಾರ ಆಯೋಜಿಸಿದ್ದ “ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ’ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೆರವಿಗಾಗಿ ಇತರ ರಾಷ್ಟ್ರಗಳತ್ತ ನೋಡುತ್ತಿದ್ದ ಭಾರತವನ್ನು ಇಂದು ವಿಶ್ವದ ನಿರ್ಣಾಯಕ ಶಕ್ತಿಗಳಲ್ಲೊಂದಾಗಿ ಪರಿವರ್ತಿಸಿದ ಸಾಧನೆ ಪ್ರಧಾನಿ ಮೋದಿಯವರದ್ದಾಗಿದೆ. ಇಂತಹ ಪರಿವರ್ತನೆಗಳು ಮುಂದುವರಿಯಬೇಕು. ಅದಕ್ಕಾಗಿ ಮೋದಿಯವರ ಆಡಳಿತ ದೇಶಕ್ಕೆ ಇನ್ನಷ್ಟು ಕಾಲ ಬೇಕಾಗಿದೆ ಎಂದರು.
ಮೋದಿಯವರು ಆಡಳಿತಕ್ಕೆ ಬರುವ ಸಂದರ್ಭ ನೀಡಿದ ಆಶ್ವಾಸನೆಗಳ ಅನುಷ್ಠಾನದ ಬದ್ಧತೆಯನ್ನು ಮೆರೆದಿದ್ದಾರೆ. ಇದಕ್ಕಾಗಿ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಮೊತ್ತಮೊದಲ ಬಾರಿಗೆ “ರಿಪೋರ್ಟ್ ಕಾರ್ಡ್’ ವ್ಯವಸ್ಥೆಯನ್ನು ಜಾರಿಗೆ ತಂದರು. ಆಡಳಿತ ಪಕ್ಷದ ಪ್ರತಿಯೋರ್ವ ಸಂಸದನನ್ನು ಪ್ರತಿವರ್ಷ ಒಂದೊಂದು ಲೋಕಸಭಾ ಕ್ಷೇತ್ರಕ್ಕೆ ಕಳುಹಿಸಿ ಅಲ್ಲಿ ಸಮಾಜದ ವಿವಿಧ ವರ್ಗಗಳ ಜನರು ಮತ್ತು ರಾಜ್ಯದ ಆಡಳಿತ ವ್ಯವಸ್ಥೆಯ ಜತೆಗೆ ಸಂವಹನ ನಡೆಸಿ ಕಾರ್ಯಕ್ರಮಗಳ ಅನುಷ್ಠಾನ ಪ್ರಗತಿ ಮತ್ತು ಮುಂದಿನ ಆವಶ್ಯಕತೆಗಳ ಬಗ್ಗೆ ರಿಪೋರ್ಟ್ ಕಾರ್ಡ್ ನಲ್ಲಿ ವರದಿ ನೀಡಲಾಗುತ್ತದೆ. ಮುಂದಿನ ಬಜೆಟ್‌ನಲ್ಲಿ ಅದನ್ನು ಸೇರಿಸಿ ಅದನ್ನು ಅನುಷ್ಠಾನಗೊಳಿಸುವ ಕಾರ್ಯ ಮಾಡಿದರು. ಈ ಮೂಲಕ ಪ್ರಜಾತಂತ್ರ ವ್ಯವಸ್ಥೆಯ ಅನುಷ್ಠಾನದಲ್ಲಿ ಹೊಸ ಮಜಲೊಂದನ್ನು ಅವರು ಪರಿಚಯಿಸಿದರು ಎಂದರು.
ನರೇಂದ್ರ ಮೋದಿಯವರು ಮೇಕ್‌ಇನ್ ಇಂಡಿಯಾ, ರೂಪಾಯಿ ಅಪನಗದೀಕರಣ, ಆಯುಷ್ಮಾನ್ ಭಾರತ್, ಉಜ್ವಲ ಯೋಜನೆ, ಮುದ್ರಾ ಯೋಜನೆ, ಜನಧನ, ಬೇಟಿ ಬಚಾವೋ ಬೇಟಿ ಪಡಾವೋ, ಸ್ವತ್ಛ ಭಾರತ್, ಜಿಎಸ್‌ಟಿ ಸೇರಿದಂತೆ ಆನೇಕ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿ ದೇಶದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭಿಸಿದರು. ಇದರಿಂದ ಭಾರತ ಒಂದು ಪ್ರಮುಖ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ದೇಶದ ಜಿಡಿಪಿ ಶೇ. 7.2ಕ್ಕೆ ತಲುಪಿದೆ. ಚೀನದ ಜಿಡಿಪಿ ಪ್ರಮಾಣ ಶೇ. 5.8 ಆಗಿದೆ ಎಂದರು.
ಮೋದಿಯವರ ಯೋಜನೆಗಳ ಪ್ರಗತಿ ವಿಶ್ಲೇಷಣೆ ಮತ್ತು ಜನರಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ ವಿಚಾರಸಂಕಿರಣ ಉಪಯುಕ್ತವಾಗಿದೆ ಎಂದರು.
ನಳಿನ್ ಕುಮಾರ್ ಕಟೀಲು, ವಿಲಾಸ್ ನಾಯಕ್, ಚಿದಾನಂದ ಕೆದಿಲಾಯ, ಗೌತಮ್ ಪೈ, ಶಕ್ತಿ ಸಿನ್ಹಾ, ಅಶುತೋಷ್ ಮುಗ್ಲಿಕರ್ ವಿಚಾರ ಸಂಕಿರಣದಲ್ಲಿ ಉಪಸ್ಥಿತರಿದ್ದರು.
“ಆಯುಷ್ಮಾನ್ ಭಾರತ್’: 10 ಕೋಟಿ ಕುಟುಂಬಗಳಿಗೆ ನೆರವು
ವಿಶ್ವ ಆರೋಗ್ಯ ಸಂಸ್ಥೆಯಿಂದ ಶ್ಲಾಘಿಸಲ್ಪಟ್ಟಿರುವ, ಜಗತ್ತಿನ ಅತೀ ದೊಡ್ಡ ಆರೋಗ್ಯ ರಕ್ಷಾ ಕವಚ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕ್ರಾಂತಿಕಾರಿ ಯೋಜನೆ “ಆಯುಷ್ಮಾನ್ ಭಾರತ್’ ಆರೋಗ್ಯ ವಿಮೆಯಿಂದ ದೇಶ 10 ಕೋಟಿ ಕುಟುಂಬಗಳಿಗೆ ಆರೋಗ್ಯ ವಿಮೆ ಒದಗಿಸಲಿದೆ. ಸುಮಾರು 50 ಕೋಟಿ ಜನರಿಗೆ ಪ್ರಯೋಜನವಾಗಲಿದ್ದು ಕಳೆದ 100 ದಿನಗಳಲ್ಲಿ 17 ಲಕ್ಷ ಮಂದಿ ಇದರ ಉಪಯೋಗ ಪಡೆದಿದ್ದಾರೆ. ಅಂದಾಜಿನ ಪ್ರಕಾರ ಪ್ರತಿಯೋರ್ವ ವ್ಯಕ್ತಿಯ ಆದಾಯದಲ್ಲಿ ಶೇ. 16ರಷ್ಟು ಪ್ರಮಾಣ ವೈದ್ಯಕೀಯ ಚಿಕಿತ್ಸೆಗಾಗಿ ವೆಚ್ಚವಾಗುತ್ತಿದೆ ಎಂದು ಸಚಿವ ಡಿ.ವಿ. ಸದಾನಂದ ಗೌಡ ವಿವರಿಸಿದರು.
ದೇಶದ ಅಭಿವೃದ್ಧಿಗೆ ಮೋದಿ ಅಗತ್ಯ: ಪ್ರತಾಪ
ಮಂಗಳೂರು, ಜ. 20: ಪ್ರಧಾನಿ ನರೇಂದ್ರ ಮೋದಿ ಮುಂದಿನ ಪೀಳಿಗೆಯನ್ನು ಗಮ® ದಲ್ಲಿರಿಸಿಕೊಂಡು ಯೋಜನೆ ಗಳನ್ನು ಅನುಷ್ಠಾನ ಗೊಳಿಸುತ್ತಿದ್ದಾರೆ. ಅವರನ್ನು ಮುಂದಿನ ಬಾರಿ ಅಧಿಕಾರಕ್ಕೆ ಏರಿಸುವ ಮೂಲಕ ಈ ಯೋಜನೆಗಳು ಯಶಸ್ವಿಯಾಗಿ ಮುಂದುವರಿಯಲು ಎಲ್ಲರೂ ಜತೆಯಾಗಬೇಕು ಎಂದು ಮೈಸೂರು ಸಂಸದ ಪ್ರತಾಪಸಿಂಹ ಹೇಳಿದರು.
“ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ’ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು “ಮೋದಿ ಗಮವರ್ನಮೆಂಟ್ಸ್ ರೋಲ್ ಇನ್ ಡೆವಲಪ್‌ಮೆಂಟ್ ಆಫ್ ಕರ್ನಾಟಕ’ ವಿಷಯದ ಕುರಿತು ವಿಚಾರ ಮಂಡಿಸಿದರು.
ಕೇಂದ್ರದ ಅನುದಾನದಿಂದ ಗ್ರಾ.ಪಂ.ಗಳಲ್ಲಿ ನಿರಂತರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. 14ನೇ ಹಣಕಾಸು ಆಯೋಗದಲ್ಲಿ ಅನುದಾನ ಕೊಡಿಸುವ ಮೂಲಕ ಗ್ರಾ.ಪಂ.ಗಳ ಬಲವರ್ಧನೆಗೆ ಮೋದಿ ಕಾರಣರಾಗಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೇರಿದ ಬಳಿಕ ರಸಗೊಬ್ಬರ ಮಾರಾಟ ವ್ಯವಸ್ಥೆಯಲ್ಲಿ ದಲ್ಲಾಳಿಗಳಿಗೆ ಅವಕಾಶಗಳಿಲ್ಲದಂತಾಗಿದೆ. ರಸ್ತೆ ಅಭಿವೃದ್ಧಿ, ವಿಮಾನಯಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆಯನ್ನು ದೇಶ ಕಂಡಿದೆ. ದೇಶದಲ್ಲಿ 12 ಕೋಟಿ ಗ್ಯಾಸ್ ಸಂಪರ್ಕ ನೀಡಲಾಗಿದ್ದು, 2020 ರನಿಗದಿತ ಗುರಿಗಿಂತ ಮೊದಲೇ ಶೇ. 90ರಷ್ಟು ಸಂಪರ್ಕ ಪೂರೈಸಲಾಗಿದೆ. ಹಿಂದಿನ ಕೇಂದ್ರ ಸರಕಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಆದ್ಯತೆ ನೀಡುತ್ತಿರಲಿಲ್ಲ. ಆಗ ಕೇವಲ 6 ಸಾವಿರ ಕಿ.ಮೀ. ದೂರ ಕಾಮಗಾರಿ ನಡೆಯುತ್ತಿತ್ತು. ಕಳೆದ ನಾಲ್ಕೂವರೆ ವರ್ಷಗಳಲ್ಲಿ 13,500 ಕಿ.ಮೀ. ದೂರದ ಕಾಮಗಾರಿ ನಡೆದಿದೆ. ಬೆಂಗಳೂರು-ಮೈಸೂರು ಎಕ್ಸ್ ಪ್ರಸ್ ಹೈವೇಗೆ ಸಾರ್ವಜನಿಕರ ವಿರೋಧವಿಲ್ಲದೆ ಭೂಸ್ವಾಧೀನ ಕೈಗೊಳ್ಳಲಾಗಿದೆ. 2014ಕ್ಕೆ ಮೊದಲು ಆಡಳಿತ ನಡೆಸಿದ ಸರಕಾರಗಳು ಈ ರೀತಿಯ ಕೆಲಸ ಮಾಡಿರಲಿಲ್ಲ ಎಂದು ಪ್ರತಾಪ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.