Mangaluru “ಭಾರತ್ ಜೋಡೋ ಯಾತ್ರೆ’ಯಿಂದ ಹೊಸ ಶಕ್ತಿ: ಸೆಂಥಿಲ್
Team Udayavani, Sep 4, 2024, 6:50 AM IST
ಮಂಗಳೂರು: ರಾಹುಲ್ ಗಾಂಧಿ ಕೈಗೊಂಡ ಭಾರತ್ ಜೋಡೋ ಯಾತ್ರೆ 2029 ರ ಚುನಾವಣೆಯನ್ನು ಹೊಸ ಭರವಸೆ ಯೊಂದಿಗೆ ಎದುರಿಸುವ ಶಕ್ತಿ ನೀಡಿದೆ ಎಂದು ತಿರುವಳ್ಳೂರು ಸಂಸದ ಸಸಿಕಾಂತ್ ಸೆಂಥಿಲ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ, ಮಂಗ ಳೂರು ನಗರ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಆಯೋ ಜಿಸಲಾದ ಕಾರ್ಯಕರ್ತರೊಂದಿಗೆ ಸಂವಾದದಲ್ಲಿ ಅವರು ಮಾತನಾಡಿದರು.
ಸಂವಿಧಾನವನ್ನು ಉಳಿಸಲು ಸಾಧ್ಯವಾಗು ವುದಿದ್ದರೆ ಅದು ಕಾಂಗ್ರೆಸ್‌ನಿಂದ ಮಾತ್ರ. ಗ್ರಾಮ ಮಟ್ಟದಿಂದಲೇ ಪಕ್ಷವನ್ನು ವ್ಯವಸ್ಥಿತವಾಗಿ ಮೇಲೆತ್ತುವ ಕೆಲಸ ಆಗಬೇಕು. ಆ ಕಾರ್ಯ ಈ. ಜಿಲ್ಲೆಯಿಂದಲೇ ಆರಂಭವಾಗಲಿ ಎಂದರು.
ಸಂಘಟನೆಗಾಗಿ ಕೆಲಸ
ಕಾರ್ಯಕರ್ತರ ಧ್ವನಿ ಪಕ್ಷದ ಮುಖಂಡರಿಗೆ ತಲುಪಿಸುವ ಕೆಲಸ ನಡೆಯಲಿದೆ. ಬ್ಲಾಕ್ ಮಟ್ಟಕ್ಕಿಂತ ಕೆಳಗಿ ನವರ ಜತೆಗೆ ಮಾತುಕತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪಕ್ಷದಲ್ಲಿ ಸಿದ್ಧಾಂತ, ಸಂಘಟನೆ ಮತ್ತು ನಾಯಕತ್ವ ಎನ್ನುವ ಮೂರು ವಿಭಾಗವಿದೆ. ಸಂಘಟನೆ ಸಂಬಂಧ ಕಾರ್ಯ ಕರ್ತರು ಮತ್ತು ಮುಖಂಡರಲ್ಲಿ ಇರುವ ಆಂತರವನ್ನು ಸರಿಪಡಿಸಬೇಕು. ಆದ್ದರಿಂದ ನಾನು ಸಂಘಟನೆ ಸಂಬಂಧ ಕೆಲಸ ಮಾಡುವೆ ಎಂದರು.
ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮುಖಂಡರಾದ ಪದ್ಮರಾಜ್ ಆರ್., ಕಣಚೂರು ಮೋನು, ರಕ್ಷಿತ್ ಶಿವರಾಮ್, ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ದಕ್ಷಿಣ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಂ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಶಾಸಕ ಜೆ.ಆರ್. ಲೋಬೋ ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ನಿರೂಪಿಸಿದರು.
ಮೋದಿ ಪ್ರಧಾನಿಯಾದಾಗ ಬೆಚ್ಚಿಬಿದ್ದೆ !
2002ರಿಂದಲೇ ರಾಜಕೀಯವನ್ನು ಹತ್ತಿರದಿಂದ ನೋಡುತ್ತಿದ್ದೆ. ಗೋದ್ರಾ ಗಲಭೆಗೆ ನೇರ ಕಾರಣರಾದ ವ್ಯಕ್ತಿಯೇ 2014 ರಲ್ಲಿ ಪ್ರಧಾನಿಯಾದಾಗ ಭಯ ಶುರುವಾಯಿತು. 2019ರ ಚುನಾವಣೆಯಲ್ಲಿ ಮತ್ತೆ ಬಹುಮತದಲ್ಲಿ ಆಯ್ಕೆಯಾದಾಗ ಬೆಚ್ಚಿಬಿದ್ದೆ. ಈ ರಾಜಕೀಯವನ್ನು ನಿಲ್ಲಿಸಬೇಕು ಎಂದು ಮನಸ್ಸಿನಲ್ಲಿತ್ತು. ಆದರೆ ಕಚೇರಿಯಲ್ಲಿ ರಾಜಕೀಯ ಮಾಡಿಲ್ಲ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಪಡಿಸಿದಾಗ ನನ್ನೊಳಗಿನ ಆಕ್ರೋಶ ಹೆಚ್ಚಾಯಿತು. ಈ ವೇಳೆ ಪತ್ನಿ ಮಂಗಳೂರಿಗೆ ಬಂದಿದ್ದಳು. ಅವಳಲ್ಲಿ ಈ ಸಂಬಂಧ ಚರ್ಚಿಸಿ ರಾಜೀನಾಮೆ ಕೊಟ್ಟೆ. ಇದನ್ನು ರಾಜಕೀಯವಾಗಿ ಎದುರಿಸಬೇಕೆಂದು ಇಷ್ಟಪಟ್ಟು ಕಾಂಗ್ರೆಸ್ ಸೇರಿದೆ. ಪಕ್ಷವು ಹಲವು ದೊಡ್ಡ ಹೊಣೆಗಳನ್ನು ನೀಡಿದೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಚನೆ ಬಂದಾಗ 15 ದಿನ ಮಾತ್ರ ಕ್ಷೇತ್ರದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ನಾನೇನು ಮಾಡಿಲ್ಲ ಜನರೇ ಅತೀ ಹೆಚ್ಚು ಬಹುಮತದಿಂದ ಗೆಲ್ಲಿಸಿದರು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.