New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’
"ಚಡ್ಡಿ ಗ್ಯಾಂಗ್'ನಂತೆ ಕಳ್ಳತನವಲ್ಲ; ಇಲ್ಲಿ ಯಾಮಾರಿಸಿ ವಂಚಿಸೋ ಆಟ
Team Udayavani, Jul 27, 2024, 6:45 AM IST
ಬಜಪೆ: ಜನರಿಗೆ ಈಗ ಹೊಸ ಹೊಸ ಗ್ಯಾಂಗ್ ಪರಿಚಯವಾಗುತ್ತಿರುವುದು ಅಚ್ಚರಿಯಾಗುತ್ತಿದೆ. ಕಳ್ಳತನ, ಮೋಸ-ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದಕ್ಕೊಂದು ಹೊಸ ಗ್ಯಾಂಗ್ ಒಂದು ಸೇರಿಕೊಂಡಿದೆ. ಅದುವೇ “ಆರ್ಡರ್ ಗ್ಯಾಂಗ್’.
ಈ “ಆರ್ಡರ್ ಗ್ಯಾಂಗ್’ ಈ ಹಿಂದೆ ಮಂಗಳೂರಿನಲ್ಲಿ ಬೆಳಕಿಗೆ ಬಂದ ಕಳ್ಳತನದ “ಚಡ್ಡಿ ಗ್ಯಾಂಗ್’ನಂತಹ ಗ್ಯಾಂಗ್ ಅಲ್ಲ. ಅವರದ್ದು ಮನೆಗಳಲ್ಲಿ ಕಳ್ಳತನ ನಡೆಸುವುದು. ಆದರೆ ಈ “ಆರ್ಡರ್ ಗ್ಯಾಂಗ್’ನ ಕಥೆವೇ ಭಿನ್ನವಾದುದು. ಇವರದ್ದು ಅಂಗಡಿಗಳಲ್ಲಿ ಭಾರೀ ಪ್ರಮಾಣದ “ಆರ್ಡರ್’ಗಳನ್ನು ನೀಡಿ ಅವರನ್ನೇ ಯಾಮಾರಿಸಿ ಹಣ ದೋಚುವುದು. ಅದರಲ್ಲೂ ಈ ಗ್ಯಾಂಗ್ ಬರುವುದು ಹಗಲಿನಲ್ಲೇ, ಅದೂ ಕಾರಿನಲ್ಲಿ! ಈ ಗ್ಯಾಂಗ್‌ಗೆ ಹೆಚ್ಚು ಮೋಸ ಹೋದವರು ಪ್ರಮುಖ ವ್ಯಾಪಾರಿಗಳು.
“ಆರ್ಡರ್ ಗ್ಯಾಂಗ್’
ವ್ಯಾಪಾರಿಗಳೇ ಇಟ್ಟ ಹೆಸರಿದು
ಬೇರೆ ಜಿಲ್ಲೆಗಳಿಂದ ಬಂದು ಚಡಿª ಹಾಕಿ ಮನೆಗಳ ಕಿಟಿಕಿ, ಬಾಗಿಲುಗಳನ್ನು ತುಂಡರಿಸಿ ಮನೆಯೊಳಗೆ ನುಗ್ಗಿ ಬೆದರಿಸಿ ನಗ-ನಗದು ದೋಚುವ “ಚಡ್ಡಿ ಗ್ಯಾಂಗ್’ ಹೆಸರು ಪ್ರಚಲಿತದಲ್ಲಿ ಇದ್ದಂತೆ ವ್ಯಾಪಾರಿಗಳನ್ನು ದೋಚುವ “ಆರ್ಡರ್ ಗ್ಯಾಂಗ್’ಗೆ ಈ ಹೆಸರನ್ನು ಇಟ್ಟವರೇ ವ್ಯಾಪಾರಿಗಳು. ಈ ಗ್ಯಾಂಗ್‌ನಲ್ಲಿ ಸುಮಾರು ನಾಲ್ಕೈದು ಮಂದಿ ಇರುತ್ತಾರೆ. ಕಾರಿನಲ್ಲಿ ಬರುವ ಈ ಗ್ಯಾಂಗ್, ಪರಿಸರವನ್ನೊಮ್ಮೆ ಅವಲೋಕನ ಮಾಡಿ ವ್ಯಾಪಾರಿಗಳಿಂದ ಹಣವನ್ನು ದೋಚಲು ಯೋಜನೆ ರೂಪಿಸುತ್ತಾರೆ.
“ದೊಡ್ಡ ಆರ್ಡರ್’ನಿಂದಲೇ
ನಡೆಯಿತು ಮೋಸ
ಕಾರಿನಲ್ಲಿ ಬಂದವರಲ್ಲವೇ ಹಾಗೆಲ್ಲ ವ್ಯಾಪಾರ-ವಹಿವಾಟಿನಲ್ಲಿ ಚಿಲ್ಲರೆ ಮೋಸ ಮಾಡುತ್ತಾರೆಯೇ ಎನ್ನುವ ಆಲೋಚನೆಯೂ ವ್ಯಾಪಾರಿಗಳಿಗೆ ಬಂದಂತಿಲ್ಲ. ಇದರಿಂದಲೇ ಮೋಸ ಹೋಗಿದ್ದಾರೆ.
ಹೇಗೆ ಮೋಸ
ಮಾಡುತ್ತಾರೆ ಅಂದರೆ…
ಗ್ಯಾಂಗ್‌ನ ಒಬ್ಟಾತ ಅಂಗಡಿಗೆ ಬಂದು ದೊಡ್ಡ ಪ್ರಮಾಣದಲ್ಲಿ ಸೊತ್ತುಗಳನ್ನು ಆರ್ಡರ್ ಮಾಡುತ್ತಾನೆ. ಅನಂತರ ದೊಡ್ಡ ಮೊತ್ತದ ಹಣವನ್ನು ಪಾವತಿ ಮಾಡುವುದಾಗಿಯೂ ತಿಳಿಸುತ್ತಾನೆ. ಗೂಗಲ್/ಫೋನ್ ಪೇ ಮಾಡುವುದಾಗಿ ಹೇಳುತ್ತಾನೆ. ಈ ಸಂದರ್ಭ ನನ್ನಲ್ಲಿ ಹಾರ್ಡ್‌ಕ್ಯಾಶ್ ಇಲ್ಲ. ಒಂದು ಸಾವಿರ ರೂ. ಕೊಡಿ. ಒಟ್ಟಿಗೇ ಗೂಗಲ್ ಪೇ ಮಾಡುವುದಾಗಿ ಹೇಳುತ್ತಾನೆ. ಗೂಗಲ್ ಪೇ ಮಾಡಿರುವುದಾಗಿ ಹೇಳಿ ಕಾಲ್ಕಿàಳುತ್ತಾನೆ. ಆದರೆ ಹಣ ಮಾತ್ರ ವ್ಯಾಪಾರಿಯ ಅಕೌಂಟ್‌ಗೆ ಬಂದಿರೋದಿಲ್ಲ. ಮಾತಿನಲ್ಲಿ ಯಾಮಾರಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಮೋಸಗಾರರ ತಂಡ ಈ ಕೃತ್ಯವೆಸಗುತ್ತಿದೆ ಎನ್ನ ಬಹುದು.
ಪೊಲೀಸ್ ಇಲಾಖೆ
ನಿಗಾ ಇಡಬೇಕಿದೆ
ಸಣ್ಣ ಪ್ರಮಾಣದ ಮೊತ್ತವಾದ ಕಾರಣ ಯಾರೂ ಪೊಲೀಸ್ ದೂರು ಕೊಟ್ಟಿಲ್ಲ. ಆದರೂ, ಸ್ಥಳೀಯ ಸಿಸಿ ಕೆಮರಾಗಳ ದೃಶ್ಯಗಳನ್ನಾಧರಿಸಿ ಪೊಲೀಸ್ ಇಲಾಖೆ ಈ ಕೃತ್ಯದ ಮೇಲೆ ನಿಗಾ ಇಡಬೇಕಿದೆ. ಇಲ್ಲವಾದರೆ ಮುಂದಕ್ಕೆ ಈ ಮೋಸದಾಟ ಹೆಮ್ಮರವಾಗಿ ಬೆಳೆಯಬಹುದು.
ಬೆಳಕಿಗೆ ಬಂದ ಪ್ರಕರಣಗಳಿವು.
– ಮೂಡಬಿದಿರೆಯಲ್ಲಿ 20 ಬಿರಿಯಾನಿಗೆ ಆರ್ಡರ್ ಮಾಡಿ ಗೂಗಲ್ ಪೇ ಮಾಡಲು ಈಗ ನೆಟ್‌ವರ್ಕ್ ಸಮಸ್ಯೆ ಇದೆ. ಆಗುತ್ತಿಲ್ಲ, ನಾನು ಈಗ ಬರುತ್ತೇನೆ ಎಂದು ತಾನು ಬಂದಿದ್ದ ಕಾರನ್ನು ತೋರಿಸಿ ಯಾಮಾರಿಸಿ 500 ರೂ. ವ್ಯಾಪಾರಿಯ ಕೈಯಿಂದಲೇ ಪಡೆದುಕೊಂಡು ಹೋಗಿ ಮರಳಿ ಬರಲೇ ಇಲ್ಲ.
– ಕಾವೂರಿನಲ್ಲಿ ತರಕಾರಿಯ ಆರ್ಡ್‌ರ್ ಮಾಡಿ ಅಲ್ಲಿಯೂ ಮೊಬೈಲ್ ಹಿಡಿದು ಗೂಗಲ್ ಪೇ ಮಾಡುವ ನಾಟಕ ಮಾಡಿದ್ದ. ಇಲ್ಲಿ ಸೊತ್ತುಗಳನ್ನೆಲ್ಲ ಪ್ಯಾಕ್ ಮಾಡಿ ಇಡಿ ಎಂದು ಹೇಳಿ ವ್ಯಾಪಾರಿಯಂದಲೇ ಹಣ ಪಡೆದುಕೊಂಡು ತೆರಳಿದ್ದಾತ ಮರಳಿ ಬಂದಿಲ್ಲ.
– ಕಿನ್ನಿಗೋಳಿಯಲ್ಲಿ 25 ಕೆ.ಜಿ. ಕೋಳಿ ಮಾಂಸ ರೆಡಿ ಮಾಡಿ ಎಂದು ಅಂಗಡಿಯವರಿಂದಲೇ 1,000 ರೂ. ಪಡೆದು ಪರಾರಿಯಾಗಲು ಯತ್ನಿಸಿದ್ದ. ಆದರೆ ಸಂಶಯಗೊಂಡ ವ್ಯಾಪಾರಿ ಆತನನ್ನು ಹಿಡಿದು ಧರ್ಮದೇಟು ನೀಡಿದ್ದಾನೆ.
ಗ್ರಾಹಕನಿಂದ ವ್ಯಾಪಾರಿಗೆ ವಂಚನೆ: ಆರೋಪ
ಸುಳ್ಯ: ಸುಳ್ಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನ ಕಚೇರಿ ಮುಂಭಾಗದ ರಸ್ತೆಯಲ್ಲಿ ಬಟರ್‌ಫ್ರುಟ್ಸ ಮಾರಾಟ ಮಾಡುವ ವ್ಯಾಪಾರಿಗೆ ಗ್ರಾಹಕರೊಬ್ಬರು ಮೋಸ ಮಾಡಿರುವ ಘಟನೆ ನಡೆದಿದೆ.
ಗುರುವಾರ ಸಂಜೆ ಕಾರಿನಲ್ಲಿ ಬಂದ ಗ್ರಾಹಕರೊಬ್ಬರು ಅಂಗಡಿಗೆ ಬಂದು 2 ಕೆ.ಜಿ. ಬಟರ್‌ಫ್ರುಟ್ಸ್ ಖರೀದಿಸಿದ್ದು, ಈ ವೇಳೆ ಆ ಗ್ರಾಹಕ ತನ್ನಲ್ಲಿ ಕ್ಯಾಶ್ ಇಲ್ಲ. ಗೂಗಲ್ ಪೇ ಮಾಡುವೆ. ನನಗೆ ನೀವು ಇನ್ನೂ 1,000 ರೂ. ಕೊಡಿ, ಫ್ರುಟ್ಸ್ ಹಣ ಸೇರಿ ಒಟ್ಟು 1,200 ಗೂಗಲ್ ಪೇ ಮಾಡುತ್ತೇನೆ ಎಂದು ಹೇಳಿದ್ದಾರೆ. ಗ್ರಾಹಕನ ಮಾತು ನಂಬಿದ ವ್ಯಾಪಾರಿ ಅವರಿಗೆ 1,000 ರೂ. ನೀಡಿದ್ದಾರೆ. ಗ್ರಾಹಕ ಗೂಗಲ್ ಪೇ ಮಾಡಿ ಕಾರು ಹತ್ತಿ ಹೋಗಿದ್ದು, ಸಮಯ ಕಳೆದರೂ ವ್ಯಾಪಾರಿಯ ಅಕೌಂಟ್‌ಗೆ ದುಡ್ಡು ಬರಲೇ ಇಲ್ಲ. ಬಳಿಕ ತನಗೆ ಗ್ರಾಹಕ ವಂಚಿಸಿ ಮೋಸ ಮಾಡಿರುವುದು ವ್ಯಾಪಾರಿಗೆ ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.