New Mangalore Port 3ನೇ ಕ್ರೂಸ್ ಬಂದರಿನಲ್ಲಿ ಲಂಗರು
Team Udayavani, Dec 16, 2023, 11:43 PM IST
ಪಣಂಬೂರು: ನವಮಂಗಳೂರು ಬಂದರಿಗೆ ಐಷಾರಾಮಿ ಮಾರ್ಷೆಲ್ ಐಲ್ಯಾಂಡ್ 3ನೇ ಪ್ರವಾಸಿ ಹಡಗಿನಲ್ಲಿ 501 ಪ್ರವಾಸಿಗರು ಆಗಮಿಸಿ ದ.ಕ. ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಸಂದರ್ಶಿಸಿದರು.
ಈ ಸಂದರ್ಭ ಜಿಲ್ಲೆಯ ಚೆಂಡೆ, ಯಕ್ಷಗಾನ, ಭರತನಾಟ್ಯ ಮತ್ತಿತರ ಸಾಂಪ್ರದಾಯಿಕ ನೃತ್ಯ, ಕಲೆಯನ್ನು ಪ್ರವಾಸಿಗರ ಸಮ್ಮುಖ ಪ್ರದರ್ಶಿಸಲಾಯಿತು. ತುಳುನಾಡಿನ ವಿಶಿಷ್ಟ ಕಲೆಗಳ ಕುರಿತು ವಿದೇಶಿ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದರು.
ಕಾರ್ಕಳ, ಮೂಡುಬಿದಿರೆ ಜೈನಬಸದಿ, ಗೋಕರ್ಣನಾಥ ದೇವಸ್ಥಾನ, ಸೇಂಟ್ ಅಲೋಶಿಯಸ್ ಚಾಪೆಲ್ ಮತ್ತು ಸ್ಥಳೀಯ ಮಾರುಕಟ್ಟೆ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.