ಅಳಕೆ ಹೊಸ ಮಾರುಕಟ್ಟೆ; ಕೋಟಿ ರೂ. ಕರಗಿದರೂ ಸದ್ಯ ಶೂನ್ಯ ಸಂಪಾದನೆ !

Team Udayavani, Apr 9, 2021, 3:30 AM IST

ಅಳಕೆ ಹೊಸ ಮಾರುಕಟ್ಟೆ; ಕೋಟಿ ರೂ. ಕರಗಿದರೂ ಸದ್ಯ ಶೂನ್ಯ ಸಂಪಾದನೆ !

ಮಹಾನಗರ: ಹಳೆಯ ಮಾರುಕಟ್ಟೆಗಳಲ್ಲಿ ಒಂದಾದ ಕುದ್ರೋಳಿ ಅಳಕೆಯ ಮಾರುಕಟ್ಟೆಗೂ ಹೊಸ ಕಟ್ಟಡ ನಿರ್ಮಿಸಲಾಗಿದೆ. ಆದರೆ ಇಲ್ಲಿಯೂ ಪೂರ್ಣ ಪ್ರಮಾಣ ದಲ್ಲಿ  ವ್ಯಾಪಾರ- ವಹಿವಾಟು ಆರಂಭವಾಗಿಲ್ಲ.

ಕುದ್ರೋಳಿ ಮುಖ್ಯ ರಸ್ತೆಗೆ ಹೊಂದಿಕೊಂಡಂತಿದ್ದ ಹಳೆಯ ಮಾರುಕಟ್ಟೆಗಿಂತ ಸ್ವಲ್ಪ ಹಿಂದಕ್ಕೆ ಹೊಸ ಕಟ್ಟಡ ನಿರ್ಮಾಣವಾಯಿತು. 2016-17ರಲ್ಲಿ ಆರಂಭಗೊಂಡಿದ್ದ ಕಾಮಗಾರಿ ಒಂದು ವರ್ಷದ ಹಿಂದೆಯೇ ಪೂರ್ಣ ಗೊಂಡಿತ್ತು. ಆದರೂ ನೀರು, ಶೌಚಾಲಯ ಮತ್ತಿತರ ಮೂಲಸೌಕರ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಕಲ್ಪಿಸ ದ್ದರಿಂದ ವಹಿವಾಟಿಗೆ ಸೂಕ್ತವಾಗಿರಲಿಲ್ಲ. ಅನಂತರ ಮತ್ತೆ 30 ಲ.ರೂ. ವೆಚ್ಚದ ಕಾಮಗಾರಿ ನಡೆಸಿ,  ಕಳೆದ ಅಕ್ಟೋಬರ್‌ ವೇಳೆಗೆ ಉದ್ಘಾಟಿಸಲಾಯಿತು. ಆದರೂ ವ್ಯಾಪಾರಿಗಳು ಅತ್ತ ಸುಳಿಯಲಿಲ್ಲ. ಜ.18 ರ ವೇಳೆಗೆ ಕೆಲವೇ ಮಂದಿ ವ್ಯಾಪಾರಿ ಗಳು ಪಾಲಿಕೆಯವರ ಆಗ್ರಹಕ್ಕೆ ಮಣಿದು ಹೊಸ ಕಟ್ಟಡದಲ್ಲಿ ವ್ಯಾಪಾರ ಆರಂಭಿಸಿದರು. ಆದರೂ ಮಾರುಕಟ್ಟೆ ಗ್ರಾಹಕರಿಗೆ, ನಮಗೆ ಅನುಕೂಲವಾಗುವಂತೆ ನಿರ್ಮಾಣವಾಗಿಲ್ಲ ಎಂಬುದು ವ್ಯಾಪಾರಸ್ಥರ ಆರೋಪ. ಅಲ್ಲದೆ ಎಲ್ಲ ಮಳಿಗೆಗಳು ಕಾರ್ಯಾರಂಭ ಮಾಡದ್ದರಿಂದ ಜನರೂ ಬರುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

1.20 ಲಕ್ಷ ರೂ. ಆದಾಯ ನಿರೀಕ್ಷೆ :  

ಒಂದೊಂದು ಮಳಿಗೆಯಿಂದ ತಿಂಗಳಿಗೆ ಸರಾಸರಿ 5 ಸಾವಿರ ರೂ. ಗಳಂತೆ ಸುಮಾರು 1.20 ಲ.ರೂ. ಆದಾಯ ವನ್ನು ಪಾಲಿಕೆ ನಿರೀಕ್ಷಿಸಿದೆ. ಎಲ್ಲ ಮಳಿಗೆಗಳು ಪೂರ್ಣ ಗೊಂಡರೆ ಮಾತ್ರ ಇದು ಸಾಧ್ಯ. ಆದರೆ, ಎಲ್ಲ 24 ಮಳಿಗೆ ಗಳನ್ನೂ ವ್ಯಾಪಾರಸ್ಥರಿಗೆ ವಹಿಸಲು ಪಾಲಿಕೆಯೂ ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ಅಂಶ.

ರಸ್ತೆಗೆ ಹೊಂದಿಕೊಂಡಿಲ್ಲ  :

ಕುದ್ರೋಳಿ ಮುಖ್ಯರಸ್ತೆಯಿಂದ ಸ್ವಲ್ಪ ಒಳಭಾಗದಲ್ಲಿ ಮಾರುಕಟ್ಟೆ ಇರುವ ಕಾರಣ ರಸ್ತೆ ಬದಿ ಓಡಾಡುವವರು ಬರುತ್ತಿಲ್ಲ. ಹಾಗಾಗಿ ವ್ಯಾಪಾರವೂ ಕಡಿಮೆ. ಮಾರುಕಟ್ಟೆ ರಸ್ತೆಯ ಪಕ್ಕದಲ್ಲೇ ಇದ್ದಿದ್ದರೆ ಹೆಚ್ಚು ಅನು ಕೂಲವಾಗುತ್ತಿತ್ತು ಎನ್ನುತ್ತಾರೆ ವ್ಯಾಪಾರಸ್ಥರು.

ಪಾರ್ಕಿಂಗ್‌ ಜಾಗವಿದ್ದರೂ ಗ್ರಾಹಕರಿಗಿಲ್ಲ :

ಮಾರುಕಟ್ಟೆಯಲ್ಲಿ  ಉತ್ತಮ ಪಾರ್ಕಿಂಗ್‌ ಸ್ಥಳಾವಕಾಶವಿದೆ. ಆದರೆ ಮಾರುಕಟ್ಟೆಗೆ ಬರುವ ಗ್ರಾಹಕರಿಗಿಂತ ಬೇರೆಯವರವಾಹನಗಳೇ ತುಂಬಿ ರುತ್ತವೆ. ಈ ಬಗ್ಗೆಯೂ ಪಾಲಿಕೆ ಗಮನಹರಿಸಬೇಕಿದೆ.

 ವ್ಯಾಪಾರಸ್ಥರು-  ಗ್ರಾಹಕ ಸ್ನೇಹಿಗೊಳಿಸಿ   :

ಅಳಕೆ ಮಾರುಕಟ್ಟೆಯನ್ನೂ ವ್ಯಾಪಾರಸ್ಥರು, ಗ್ರಾಹಕ ಸ್ನೇಹಿಯಾಗಿ ನಿರ್ಮಿಸದಿರುವುದು ಸ್ಪಷ್ಟ. ವ್ಯಾಪಾರಸ್ಥರಿಗೆ ಸ್ವತ್ಛತೆ ಕಾಪಾಡಿಕೊಳ್ಳುವುದಕ್ಕೂ ಪೂರಕವಾಗಿ ಕಟ್ಟಡವನ್ನು ನಿರ್ಮಿಸಿಲ್ಲ ಎನ್ನುವ ಆರೋಪವಿದೆ. ನೀರಿನ ಲಭ್ಯತೆ ಕೊರತೆ ಇನ್ನೂ ಬಗೆಹರಿದಿಲ್ಲ ಎನ್ನುವುದು ಕೆಲವು ವ್ಯಾಪಾರಿಗಳ ದೂರು. ಎಲ್ಲ ಮಳಿಗೆಗಳನ್ನು ಭರ್ತಿ ಮಾಡಬೇಕು. ಹೆಚ್ಚಿನ ಸಾಮಗ್ರಿಗಳು ಒಂದೇ ಕಡೆ ದೊರೆತರೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆ ಇದೆ. ಹಾಗಾಗಿ ಎಲ್ಲ ಮಳಿಗೆಗಳಲ್ಲಿ ವ್ಯಾಪಾರ ಆರಂಭವಾಗುವಂತೆ ಪಾಲಿಕೆಯವರು ಕ್ರಮ ಕೈಗೊಳ್ಳಬೇಕು ಎಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

24ರಲ್ಲಿ 10 ಮಳಿಗೆ ಮಾತ್ರ  ಭರ್ತಿ!  :

ಈ ಕಟ್ಟಡದಲ್ಲಿ ಮೀನು ಮಾರುಕಟ್ಟೆ  ಸೇರಿದಂತೆ ಮಾಂಸ, ತರಕಾರಿ ಮಾರಾಟಕ್ಕೆ ಒಟ್ಟು 24 ಮಳಿಗೆಗಳಿವೆ. ಆದರೆ ಪ್ರಸ್ತುತ 10 ಮಳಿಗೆಗಳು ಮಾತ್ರ ಭರ್ತಿಯಾಗಿವೆ. ಈ ಹಿಂದೆ ಇಲ್ಲಿ ಹಳೆ ಕಟ್ಟಡದಲ್ಲಿದ್ದ 6 ಮಂದಿ ವ್ಯಾಪಾರಸ್ಥರಿಗೂ ಇಲ್ಲಿ ಅವಕಾಶ ನೀಡಲಾಗಿದೆ. ಉಳಿದ ಮಳಿಗೆಗಳಿಗೆ ಇತ್ತೀಚೆಗಷ್ಟೇ ಟೆಂಡರ್‌ ಕರೆಯಲಾಗಿದ್ದು, ಬೇಗ ಇತ್ಯರ್ಥಗೊಳ್ಳ ಬೇಕೆಂಬುದು ನಾಗರಿಕರ ಆಗ್ರಹ.

-  ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕಾರ್ನಾಡಿನಲ್ಲಿ ನಡೆದ ಕೊ*ಲೆ ಪ್ರಕರಣ ಇಬ್ಬರಿಗೆ ಜೀವಾವಧಿ ಶಿಕ್ಷೆ

Mangaluru: ಕಾರ್ನಾಡಿನಲ್ಲಿ ನಡೆದ ಕೊ*ಲೆ ಪ್ರಕರಣ ಇಬ್ಬರಿಗೆ ಜೀವಾವಧಿ ಶಿಕ್ಷೆ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.