ಮೂಲರಪಟ್ಣದಲ್ಲಿ ಕೆಟ್ಟು ಹೋದ ನೂತನ ರಸ್ತೆ
ಮಳೆಗಾಲದಲ್ಲಿ ಎದುರಾಗಲಿದೆ ಸಂಕಷ್ಟ
Team Udayavani, May 19, 2019, 6:00 AM IST
ತೂಗುಸೇತುವೆ ಸಮೀಪದ ಬಸ್ ನಿಲ್ದಾಣ ಕೆಟ್ಟುಹೋಗಿರುವುದು.
ಎಡಪದವು: ಮೂಲರಪಟ್ಣದಲ್ಲಿ ತೂಗುಸೇತುವೆಯವರೆಗೆ ನಿರ್ಮಿಸಿದ ನೂತನ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು, ಕಳೆದ ವರ್ಷದಂತೆ ಈ ಬಾರಿಯೂ ರಸ್ತೆ ಸಂಚಾರ ದುಸ್ತರವಾಗಿದೆ. ಸೇತುವೆ ಕುಸಿದು ಬಿದ್ದ ಸ್ಥಳದ ಸಮೀಪ ಸ್ಥಳೀಯರು ನಿರ್ಮಿಸಿದ್ದ ತಾತ್ಕಾಲಿಕ ಮಣ್ಣಿನ ರಸ್ತೆ ಮಳೆಗಾಲದಲ್ಲಿ ಕೊಚ್ಚಿ ಹೋಗಲಿದ್ದು ಸಂಚಾರಕ್ಕೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ಕಳೆದ ವರ್ಷ ಮೂಲರಪಟ್ಣ ಸೇತುವೆ ದಿಢೀರ್ ಕುಸಿತ ಗೊಂಡ ಪರಿಣಾಮ ಎಡಪದವು,ಮುತ್ತೂರು, ಕುಪ್ಪೆಪದವು, ನೋಣಲ್ ಪ್ರದೇಶಗಳಿಂದ ಬಂಟ್ವಾಳ-ಬಿ.ಸಿ.ರೋಡ್ ಸಂಪರ್ಕ ಕಡಿತಗೊಂಡಿತ್ತು. ಪರಿಣಾಮ ಮುತ್ತೂರು ಶಾಲೆಯ ಸಮೀಪದ ತೂಗುಸೇತುವೆಯಿಂದ ಸಂಪರ್ಕ ಕಲ್ಪಿಸಲಾಗಿತ್ತು. ಕಡಿದಾದ ಭೂಮಿಯನ್ನು ಸಮತಟ್ಟುಗೊಳಿಸಿ ಜಲ್ಲಿ ತುಂಬಿಸಿ ನೂತನ ರಸ್ತೆ ನಿರ್ಮಿಸಿದ್ದೇ ಅಲ್ಲದೇ ತೂಗುಸೇತುವೆಯ ಸಮೀಪ ಬಸ್‌ಗೆ ತಂಗುದಾಣ ನಿರ್ಮಿಸಲಾಗಿತ್ತು.ಈ ರಸ್ತೆಯನ್ನು ಮಣ್ಣು,ಜಲ್ಲಿ ತುಂಬಿಸಿ ಸಮತಟ್ಟುಗೊಳಿಸಲಾಗಿತ್ತು.ಆದರೆ ಕಾಲಕ್ರಮೇಣ ಈ ರಸ್ತೆಯ ಕೆಟ್ಟುಹೋಗಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಬೇಸಗೆಯಲ್ಲೇ ವಾಹನ ಸಂಚಾರ ಕಷ್ಟವಾಗಿದ್ದು, ಮಳೆಗಾಲದಲ್ಲಿ ಇದು ಮತ್ತಷ್ಟು ಗಂಭೀರ ಸ್ವರೂಪ ತಾಳುವ ಲಕ್ಷಣಗಳಿವೆ.
ಸೇತುವೆ ಪೂರ್ಣಗೊಳ್ಳಲು 3- 4 ವರ್ಷ
ನೂತನ ಸೇತುವೆ ನಿರ್ಮಾಣವಾಗುವವರೆಗೆ ಇದೇ ರಸ್ತೆಯನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಈ ಸೇತುವೆ ಪೂರ್ಣಗೊಳ್ಳಬೇಕಾದರೆ ಕನಿಷ್ಠ 3- 4 ವರ್ಷಗಳು ಬೇಕಾಗ ಬಹುದು. ಆದ್ದರಿಂದ ಅಲ್ಲಿ ತನಕ ಈ ರಸ್ತೆಯನ್ನು ಉಪಯೋಗಿಸ ಬೇಕಾಗಿರುವುದರಿಂದ ಈ ರಸ್ತೆಗೆ ಡಾಂಬರು ಅಥವಾ ಕಾಂಕ್ರೀಟ್ ಹಾಕಬೇಕಿತ್ತು. ಆದರೆ ಸೇತುವೆ ಮುರಿದು ಒಂದು ವರ್ಷ ಕಳೆದರೂ ಈ ಕಾರ್ಯ ನಡೆದಿಲ್ಲ.
ವಿದ್ಯಾರ್ಥಿಗಳಿಗೆ ಸಂಕಷ್ಟ
ಮುತ್ತೂರು ಶಾಲೆಗೆ ನೂರಾರು ಮಂದಿ ವಿದ್ಯಾರ್ಥಿಗಳು ಬರುತ್ತಿದ್ದು, ರಸ್ತೆ ಉತ್ತಮವಾಗಿಲ್ಲದೇ ಇರುವುದರಿಂದ ಮಳೆ ಗಾಲದಲ್ಲಿ ಅವರಿಗೂ ಸಂಕಷ್ಟ ಎದುರಾಗಲಿದೆ.ಇನ್ನು ತೂಗುಸೇತುವೆಯ ಇನ್ನೊಂದು ಭಾಗದ ರಸ್ತೆಯನ್ನೂ ಸರಿಪಡಿಸದ ಕಾರಣ ಅಲ್ಲಿಯೂ ಇದೇ ಪರಿಸ್ಥಿತಿ ಉಂಟಾ ಗಲಿದೆ. ಮಳೆಗಾಲದ ಭೀಕರ ಪ್ರವಾಹ ಮತ್ತೆ ಅವ್ಯವಸ್ಥೆಯಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ.
ಮಳೆ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಪಲ್ಗುಣಿ ನದಿಯೂ ಭರ್ತಿಗೊಳ್ಳಲಿದೆ. ಇದರ ಜತೆಗೆ ಮಳೆಗಾಲದ ನೀರಿನಿಂದಲೂ ಇಲ್ಲಿನ ರಸ್ತೆ ಮತ್ತಷ್ಟು ಕೆಟ್ಟುಹೋಗಲಿದೆ.ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟವರು ಗಂಭೀರ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ.ಅದ್ದರಿಂದ ಈ ಬಾರಿ ಸಂಚಾರಕ್ಕೆ ಅಡಚಣೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಯಾಣಿಕರ ತಂಗುದಾಣ
ಮುತ್ತೂರು ಶಾಲಾ ಸಮೀಪ ಬಸ್ ನಿಲ್ಲುವ ಸ್ಥಳದಲ್ಲಿ ಇದುವರೆಗೂ ಪ್ರಯಾಣಿಕರ ತಂಗುದಾಣ ನಿರ್ಮಿಸದ ಕಾರಣ ಇದುವರೆಗೆ ಪ್ರಯಾಣಿಕರು ಬಿಸಿಲಲ್ಲೇ ಬಸ್ ಕಾಯಬೇಕಾದ ಸ್ಥಿತಿ ಇದೆ.
ಇನ್ನು ಮಳೆಗಾಲದಲ್ಲಿ ಗಾಳಿ- ಮಳೆಗೆ ಕೊಡೆ ಹಿಡಿದು ಕಾಯ ಬೇಕು.ಆದ್ದರಿಂದ ಇಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಬೇಕು ಎನ್ನುವ ಆಗ್ರಹವೂ ಕೇಳಿಬಂದಿದೆ.
25 ಲಕ್ಷ ರೂ. ಬಿಡುಗಡೆ
ರಸ್ತೆ ಕಾಂಕ್ರೀಟ್‌ಗೊಳಿಸಲು ಶಾಸಕ ಡಾ|ವೈ.ಭರತ್ ಶೆಟ್ಟಿ ಅವರ ಮುತುವರ್ಜಿಯಿಂದ ಅಲ್ಪಸಂಖ್ಯಾಕ ಅಭಿವೃದ್ಧಿ ನಿ ಧಿಯಿಂದ 25 ಲಕ್ಷ ರೂ.ಬಿಡುಗಡೆಗೊಂಡಿದೆ. ಆದರೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಲಿಲ್ಲ. ಕಾಮಗಾರಿ ಶೀಘ್ರ ಆರಂಭಗೊಳ್ಳಲಿದ್ದು, ಮಳೆಗಾಲದಲ್ಲಿ ರಸ್ತೆಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಲಾಗುವುದು.
– ನಾಗೇಶ್ ಶೆಟ್ಟಿ ಮುತ್ತೂರು,
ತಾಲೂಕು ಪಂಚಾಯತ್ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.