ಸೂಕ್ಷ್ಮ ಪ್ರದೇಶಗಳಿಗೆ ಹೊಸ ಮಾದರಿಯ ಬ್ಯಾರಿಕೇಡ್ಗಳು
Team Udayavani, Jul 10, 2017, 3:45 AM IST
ಬಜಪೆ: ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆಯ ಅನುಕೂಲಕ್ಕಾಗಿ ಈಗ ಪೊಲೀಸರಿಗೆ ಹೊಸ ವಿಸ್ತರಣ ಬ್ಯಾರಿಕೇಡ್ಗಳ ಸಹಾಯ ಸಿಕ್ಕಿವೆ. ಬಜಪೆ ಪೊಲೀಸ್ ಠಾಣೆಗೆ ಇಂತಹ ಮೂರು ಬ್ಯಾರಿಕೇಡ್ಗಳು ತಲುಪಿದ್ದು, ವಾಹನ ತಪಾಸಣೆಗೆ ತುಂಬಾ ಅನುಕೂಲವಾಗಿದೆ.
ಈಗಾಗಲೇ ರಾಜ್ಯ ಹೆದ್ದಾರಿ 67ರ ಬಜಪೆ ಚೆಕ್ ಪೋಸ್ಟ್ನಲ್ಲಿ ಎರಡು ಹಾಗೂ ಭಟ್ರಕರೆಯಲ್ಲಿ ಈ ವಿಸ್ತರಣಾ ಬ್ಯಾರಿಕೇಡ್ಗಳನ್ನು ಇಡಲಾಗಿದೆ.
ಬಜಪೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 10 ಕಡೆ ಚೆಕ್ಪೋಸ್ಟ್ ಗಳಲ್ಲಿ ಬ್ಯಾರಿಕೇಡ್ಗಳನ್ನು ಇಟ್ಟು ವಾಹನಗಳ ತಪಾಸಣೆ ನಡೆಯುತ್ತಿದೆ.
ಇದನ್ನು ಸುಮಾರು 5 ಮೀಟರ್ನಷ್ಟು ಎಳೆಯಬಹುದು. ಜತೆಗೆ ಒಂದು ಕಡೆ ಯಿಂದ ಇನ್ನೊಂದು ಕಡೆಗೆ ಕೊಂಡೊಯ್ಯಲು ಕೂಡ ಅನುಕೂಲಕರವಾಗಿದೆ. ಇದರಲ್ಲಿ ರಿಫ್ಲೆಕ್ಟರ್ ವ್ಯವಸ್ಥೆಯೂ ಇದ್ದು, ರಾತ್ರಿ ವೇಳೆಯಲ್ಲಿ ಇದನನ್ನು ದೂರದಿಂದಲೇ ಗಮನಿಸಲು ಸಾಧ್ಯವಾಗುತ್ತದೆ.
ಜಿಲ್ಲೆಯಲ್ಲಿ ಉಂಟಾಗಿರುವ ಗಲಭೆ ಹಿನ್ನೆಲೆಯಲ್ಲಿ ಬಜಪೆಗೆ ಶಿವಮೊಗ್ಗ, ತುಮಕೂರಿನಿಂದ ಪೊಲೀಸರು ಆಗಮಿಸಿದ್ದಾರೆ. ಡಿವೈಎಸ್ಪಿ, ಇನ್ಸ್ಪೆಕ್ಟರ್ಗಳು ಆಗಮಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಗಸ್ತು ತಿರುಗುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.