ಮಂಗಳೂರು : ಹುಟ್ಟುವಾಗಲೇ ನವಜಾತ ಶಿಶುವಿನಲ್ಲಿ ಹಲ್ಲು! ವೈದ್ಯರು ಹೇಳಿದ್ದೇನು ಗೊತ್ತೆ ?
Team Udayavani, Jul 7, 2022, 7:30 AM IST
ಮಂಗಳೂರು: ಮಗು ಹುಟ್ಟಿದಾಗಲೇ ಹಲ್ಲುಗಳು ಕಾಣಿಸಿಕೊಳ್ಳುವುದು ಅಪರೂಪ. ಆದರೆ ಮಂಜೇಶ್ವರ ಮೂಲದ ದಂಪತಿಯ ಮಗುವಿಗೆ ಹುಟ್ಟುವಾಗಲೇ ಎರಡು ಹಲ್ಲು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
ಮಂಜೇಶ್ವರದ ಮೀಯಪದವಿನ ರಾಜೇಶ್-ಧನ್ಯಾ ದಂಪತಿಗೆ ಜು. 4ರಂದು ಕುಂಬಳೆಯ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಆ ವೇಳೆಗಾಗಲೇ ಮಗುವಿನ ಬಾಯಲ್ಲಿ ಎರಡು ಹಲ್ಲು ಕಾಣಿಸಿಕೊಂಡಿದ್ದು, ಹೆಚ್ಚಿನ ಮಾಹಿತಿಗೆ ದಂತ ವೈದ್ಯರನ್ನು ಸಂಪರ್ಕಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಹೊಸಂಗಡಿಯ ಸುರಕ್ಷ ದಂತ ಚಿಕಿತ್ಸಾಲಯದಲ್ಲಿ ಡಾ| ಮುರಳಿ ಮೋಹನ ಚೂಂತಾರು ಅವರನ್ನು ಈ ದಂಪತಿ ಸಂಪರ್ಕಿಸಿ ಸಮಾಲೋಚನೆ ನಡೆಸಿದರು.
ಡಾ| ಚೂಂತಾರು ಅವರು ಉದಯವಾಣಿಗೆ ಪ್ರತಿಕ್ರಿಯಿಸಿ, “ಹುಟ್ಟುವಾಗಲೇ ಮಗುವಿನಲ್ಲಿ ಹಲ್ಲು ಇರುವುದು ಅತಿವಿರಳ. ಒಂದು ವೇಳೆ ಇದ್ದರೂ ಮೃದುವಾಗಿರುವ ಅದು ತಾಯಿ ಹಾಲುಣಿಸುವ ಸಂದರ್ಭ ತುಂಡಾಗಿ ಗಂಟಲಿನಲ್ಲಿ ಸಿಕ್ಕಿ ಹಾಕುವ ಸಾಧ್ಯತೆ ಇರುವುದರಿಂದ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ. ಆದರೆ ಈ ಶಿಶುವಿನ ಹಲ್ಲು ಗಟ್ಟಿ ಇದ್ದು, ಶಸ್ತ್ರಚಿಕಿತ್ಸೆಯ ಆವಶ್ಯಕತೆ ಇಲ್ಲ ಎಂದರು.
ಹುಟ್ಟುವಾಗಲೇ ಇರುವ ಹಲ್ಲುಗಳಿಗೆ ಜನ್ಮಜಾತ ಹಲ್ಲುಗಳು ಎನ್ನುತ್ತಾರೆ. “ನೇಟಲ್‌ಟೂತ್’ “ಭ್ರೂಣದ ಹಲ್ಲುಗಳು’ “ಹುಟ್ಟು ಹಲ್ಲುಗಳು’ ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಜನಿಸಿದ ಒಂದು ತಿಂಗಳೊಳಗೆ ಬಾಯಲ್ಲಿ ಹಲ್ಲುಗಳು ಮೂಡುವ ಸಾಧ್ಯತೆ ಇರುತ್ತದೆ. ಈ ಹಲ್ಲುಗಳಿಗೆ “ನವಜಾತ ಶಿಶು ಹಲ್ಲುಗಳು’ “ನಿಯೋನೇಟಲ್ ಟೂತ್’ ಎಂದು ಕರೆಯುತ್ತಾರೆ’ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.