Rain: ಈಗ ಮುಂಗಾರಿನಲ್ಲೇ ಹಿಂಗಾರು ರೀತಿಯ ಮಳೆ! ಗಾಳಿಯ ಪಥ ಬದಲಾಗಿ ಈ ಅಸಹಜ ವಿದ್ಯಮಾನ

ಪೂರ್ವದಿಂದ ಮೋಡ ದಟ್ಟೈಸಿ ದಿಢೀರ್‌ ಮಳೆ

Team Udayavani, Aug 19, 2024, 7:22 AM IST

Rain: ಈಗ ಮುಂಗಾರಿನಲ್ಲೇ ಹಿಂಗಾರು ರೀತಿಯ ಮಳೆ! ಗಾಳಿಯ ಪಥ ಬದಲಾಗಿ ಈ ಅಸಹಜ ವಿದ್ಯಮಾನ

ಮಂಗಳೂರು: ಮುಂಗಾರು ಮಳೆ ಅದಾಗಲೇ ಮುಗಿಯಿತೇ- ಹೀಗೊಂದು ಪ್ರಶ್ನೆ ರೈತರ ಸಹಿತ ಜನ ಸಾಮಾನ್ಯರನ್ನು ಕಾಡುತ್ತಿದೆ.
ಕೆಲವು ದಿನಗಳಿಂದ ಹವಾಮಾನ ದಲ್ಲಿ ಇದನ್ನು ಪುಷ್ಟೀಕರಿಸುವ ಬದಲಾ ವಣೆ ಗೋಚರವಾಗಿದೆ. ಮುಂಗಾರು ಮಳೆಯ ಅಬ್ಬರ ಕಡಿಮೆ ಆಗಿ ನಾಲ್ಕೈದು ದಿನ ಬಿಸಿಲು ಕಾಣಿಸಿ ಕೊಂಡ ಬೆನ್ನಲ್ಲೇ ಹಿಂಗಾರು ರೀತಿ ಮೋಡವಾಗಿ ಮಳೆ ಸುರಿಯಲಾರಂಭಿಸಿದೆ. ಮುಂಗಾರು ವೇಳೆ ಪಶ್ಚಿಮದಿಂದ ಬರುವ ಮೋಡಗಳು ಮಳೆ ಸುರಿಸುತ್ತವೆ ಎಂಬುದು ಇದುವರೆಗಿನ ಲೆಕ್ಕಾಚಾರ ವಾಗಿತ್ತು. ಈಗ ಕೆಲವು ದಿನಗಳಿಂದ ಪೂರ್ವದಿಂದ ಮೋಡ ಸೃಷ್ಟಿಯಾಗಿ ಮಳೆಯಾಗುತ್ತಿದೆ.

ಯಾವುದೇ ಮುನ್ಸೂಚನೆ ಇಲ್ಲದೆ ಕೆಲವು ಕಡೆಗಳಲ್ಲಿ ಸ್ಥಳೀಯವಾಗಿ ಮೋಡಗಳು ದಟ್ಟೈಸಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಮಧ್ಯಾಹ್ನ ಬಳಿಕ ಹೆಚ್ಚು. ಸಿಡಿಲಿನ ಆರ್ಭಟವೂ ಇರುತ್ತದೆ. ಉದಾಹರಣೆಗೆ ಹೇಳುವುದಾದರೆ, ಕೆಲವು ದಿನಗಳಿಂದ ಪಂಜ, ಕೊಲ್ಲಮೊಗರು, ಸುಬ್ರಹ್ಮಣ್ಯ ಭಾಗ ದಲ್ಲಿ ಸಂಜೆ-ರಾತ್ರಿ ಧಾರಾಕಾರ ಮಳೆಯಾಗಿದೆ. ಶನಿ ವಾರ ಉಡುಪಿಯಲ್ಲಿ ಸಂಜೆ ಸಿಡಿಲು ಸಹಿತ ಮಳೆಯಿತ್ತು.

ಏಕೆ ಹೀಗಾಗುತ್ತದೆ?
ಹವಾಮಾನದಲ್ಲಿ ಬದಲಾವಣೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಮಳೆ ಮಾರುತ ನೈಋತ್ಯ ಭಾಗದಿಂದ ಬಂದು ರಾಜ್ಯ ಕರಾವಳಿ ತೀರದಿಂದ ದಕ್ಷಿಣ ತರಂಗಾಂತರ ವಾಗಿ ಶ್ರೀಲಂಕಾ ಮೂಲಕ ಬಂಗಾಲಕೊಲ್ಲಿಗೆ ಸೇರುತ್ತಿದೆ.

ಅಲ್ಲಿಂದ ತಿರುವು ಪಡೆದು ತಮಿಳುನಾಡಿನ ಮೂಲಕಕರ್ನಾಟಕಕ್ಕೆ ಪ್ರವೇಶಿಸುತ್ತಿದೆ. ಬಂಗಾಲಕೊಲ್ಲಿಯಿಂದ ಬರುವ ಮೋಡಗಳ ಜತೆ ಸ್ಥಳೀಯ ಮೋಡ ಸೃಷ್ಟಿಯಾದ ಕಾರಣ ಮೇಘಸ್ಫೋಟದಂತಹ ಭಾರೀ ಮಳೆ ಅಲ್ಲಲ್ಲಿ ಆಗು ತ್ತಿದೆ. ಕರ್ನಾಟಕದ ಕೆಲವು ಭಾಗ ಸೇರಿದಂತೆ ಕೇರಳದಲ್ಲಿ ಹೆಚ್ಚು ಮಳೆಯಾಗಿ ತೇವಾಂಶ ಹೆಚ್ಚಾಗಿದೆ. ಇದರಿಂದ ಉಷ್ಣಾಂಶ ಕಡಿಮೆಯಾಗಿ ಅಲ್ಲಿ ಒತ್ತಡ ಹೆಚ್ಚಾಗುತ್ತದೆ. ಅರಬಿ ಸಮುದ್ರ ದಿಂದ ಬರುವ ಮೋಡ ಹೆಚ್ಚು ಒತ್ತಡ ಇರುವ ಪ್ರದೇಶವನ್ನು ತಪ್ಪಿಸಿ, ಕಡಿಮೆ ಒತ್ತಡ ಇರುವ ಪ್ರದೇಶಕ್ಕೆ ಚಲಿಸುತ್ತದೆ.

ಸುಳ್ಯದಲ್ಲಿ ನೆರೆ, ಮಂಗಳೂರು, ಉಡುಪಿಯಲ್ಲಿ ಬಿಸಿಲು!

ಸಾಮಾನ್ಯವಾಗಿ ಮುಂಗಾರು ಮಳೆ ಎಂದರೆ ಕರಾವಳಿಯಾದ್ಯಂತ ಒಂದೇ ರೀತಿ ಇರುತ್ತದೆ. ಆದರೆ ಈ ಬಾರಿ ಸುಳ್ಯ ಆಸುಪಾಸಿನಲ್ಲಿ ನೆರೆ ಬಂದರೆ ಮಂಗಳೂರು, ಉಡುಪಿಯಲ್ಲಿ ಬಿಸಿಲು ಇರುತ್ತದೆ. ಆ. 14ರಿಂದ 17ರ ವರೆಗೆ ಸುಳ್ಯ ಭಾಗದಲ್ಲಿ ಇದ್ದ ಮಳೆಯ ಪ್ರಮಾಣ ಮಂಗಳೂರು, ಉಡುಪಿಯಲ್ಲಿ ಇರಲಿಲ್ಲ.

ಹಿಂಗಾರಿನ ಮೇಲೆ ಪರಿಣಾಮವಾದೀತೇ?

ಈ ಮಳೆ ಹಿಂಗಾರಿನ ಮೇಲೆ ಪರಿಣಾಮ ಬೀರೀತೇ ಎಂದು ಈಗಲೇ ಹೇಳಲಾಗದು. ಹವಾಮಾನ ಈಗ ಹಿಂದಿನಂತೆ ನಿರ್ದಿಷ್ಟವಾಗಿ ಇಲ್ಲ. ಆಗಾಗ ಬದಲಾಗುತ್ತದೆ ಎನ್ನುತ್ತಾರೆ ಹವಾಮಾನ ತಜ್ಞರು.

ಗಾಳಿಯ ದಿಕ್ಕಿನ ಆಧಾರದಲ್ಲಿ ಮೋಡ ಗಳು ಚಲಿಸುತ್ತವೆ. ಹವಾಮಾನ ವೈಪರೀತ್ಯ ಉಂಟಾದಾಗ ಕೆಲವೊಮ್ಮೆ ಮೋಡಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಗಳೂ ಇರುತ್ತವೆ. ಸಾಮಾನ್ಯವಾಗಿ ನೈಋತ್ಯ ಮಾನ್ಸೂನ್‌ ಸಂದರ್ಭ ನೈಋತ್ಯ ದಿಕ್ಕಿನಿಂದಲೇ ಮೋಡಗಳು ಚಲಿಸುತ್ತವೆ. ಕೆಲವೊಮ್ಮೆ ಮುಂಗಾರು ಕರಾವಳಿಯಲ್ಲಿ ದುರ್ಬಲಗೊಂಡಾಗ ಮೋಡಗಳ ದಿಕ್ಕು ವಿರುದ್ಧವಾಗುವ ಸಾಧ್ಯತೆಗಳಿರುತ್ತವೆ. ಪಶ್ಚಿಮದ ಬದಲು ಪೂರ್ವದಲ್ಲೂ ಮೋಡ ಚಲಿಸಬಹುದು.
– ಸಿ.ಎಸ್‌. ಪಾಟೀಲ್‌, ನಿರ್ದೇಶಕ ಹಾಗೂ ವಿಜ್ಞಾನಿ, ಭಾರತೀಯ ಹವಾಮಾನ ಇಲಾಖೆ (ಐಎಂಡಿ), ಬೆಂಗಳೂರು ವಿಭಾಗ

ಸೀಮಿತ ವ್ಯಾಪ್ತಿಯಲ್ಲಿ ದಿಢೀರ್‌ ಮಳೆ
ಇತ್ತೀಚೆಗೆ 30ರಿಂದ 40 ಕಿ.ಮೀ. ವ್ಯಾಪ್ತಿಯಲ್ಲಿ ಹವಾಮಾನ ಬದಲಾವಣೆಯಾ ಗುತ್ತಿದೆ. ಇದನ್ನು “ಲೋಕಲೈಸ್ಡ್ ಎಫೆಕ್ಟ್’ ಎನ್ನಬಹುದು. ಒಂದು ಕಡೆ ಗಾಳಿಯಲ್ಲಿ ತೇವಾಂಶ ಹೆಚ್ಚಾಗಿದ್ದರೆ, ಮತ್ತೂಂದು ಕಡೆ ಕಡಿಮೆ ಇರುತ್ತದೆ. ತೇವಾಂಶ ಹೆಚ್ಚಿ ರುವಲ್ಲಿ ಮೋಡ ಸೃಷ್ಟಿಯಾಗುತ್ತವೆ. ಆಗ ಮಳೆಯ ಬಿರುಸು ಹೆಚ್ಚು ತ್ತದೆ. ಇನ್ನು ಇತ್ತೀಚೆಗೆ ಒಂದೇ ನಗರದ ವಿವಿಧ ಭಾಗಗಳಲ್ಲಿಯ ತಾಪಮಾನದಲ್ಲಿ ಏರಿಳಿತ ಕಂಡು ಬರುತ್ತದೆ’ ಎನ್ನುತ್ತಾರೆ ಹವಾಮಾನ ಇಲಾಖೆ ಅಧಿಕಾರಿಗಳು.

ಟಾಪ್ ನ್ಯೂಸ್

1-trfff

PM Modi ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದ ಟ್ರಂಪ್

Auction of more than 600 gifts received by Modi has started

Auction; ಮೋದಿಗೆ ಸಿಕ್ಕ 600ಕ್ಕೂ ಅಧಿಕ ಉಡುಗೊರೆಗಳ ಹರಾಜು ಶುರು

Panamburu

Mangaluru: ಕಿರಿದಾಗುತ್ತಿದೆ‌ ಪಣಂಬೂರು ಬೀಚ್‌! ಇನ್ನೂ ಖಚಿತವಾಗದ ಕಾರಣ

Pililkula

Biological Park: ಪಿಲಿಕುಳಕ್ಕೆ ಪೆಂಗ್ವಿನ್‌, ಅನಕೊಂಡ ತರಿಸುವ ಮಹತ್ವದ ನಿರ್ಧಾರ

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

Cap-Brijesh-Chowta

MSEZ: ಜೆಬಿಎಫ್‌ಗೆ ಭೂಮಿ ಕೊಟ್ಟವರಿಗೆ ಜಿಎಂಪಿಎಲ್‌ನಲ್ಲಿ ಉದ್ಯೋಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Panamburu

Mangaluru: ಕಿರಿದಾಗುತ್ತಿದೆ‌ ಪಣಂಬೂರು ಬೀಚ್‌! ಇನ್ನೂ ಖಚಿತವಾಗದ ಕಾರಣ

Pililkula

Biological Park: ಪಿಲಿಕುಳಕ್ಕೆ ಪೆಂಗ್ವಿನ್‌, ಅನಕೊಂಡ ತರಿಸುವ ಮಹತ್ವದ ನಿರ್ಧಾರ

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ

Cap-Brijesh-Chowta

MSEZ: ಜೆಬಿಎಫ್‌ಗೆ ಭೂಮಿ ಕೊಟ್ಟವರಿಗೆ ಜಿಎಂಪಿಎಲ್‌ನಲ್ಲಿ ಉದ್ಯೋಗ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-trfff

PM Modi ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಘೋಷಿಸಿದ ಟ್ರಂಪ್

Auction of more than 600 gifts received by Modi has started

Auction; ಮೋದಿಗೆ ಸಿಕ್ಕ 600ಕ್ಕೂ ಅಧಿಕ ಉಡುಗೊರೆಗಳ ಹರಾಜು ಶುರು

Panamburu

Mangaluru: ಕಿರಿದಾಗುತ್ತಿದೆ‌ ಪಣಂಬೂರು ಬೀಚ್‌! ಇನ್ನೂ ಖಚಿತವಾಗದ ಕಾರಣ

Pililkula

Biological Park: ಪಿಲಿಕುಳಕ್ಕೆ ಪೆಂಗ್ವಿನ್‌, ಅನಕೊಂಡ ತರಿಸುವ ಮಹತ್ವದ ನಿರ್ಧಾರ

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.