ಕ್ಷಯ ಮುಕ್ತ ಭಾರತಕ್ಕಾಗಿ ನಿ-ಕ್ಷಯ ಮಿತ್ರ
Team Udayavani, Dec 22, 2022, 5:05 AM IST
ಬಂಟ್ವಾಳ : ಪ್ರಧಾನಿ ನರೇಂದ್ರ ಮೋದಿಯವರು 2025ರ ವೇಳೆಗೆ ಕ್ಷಯ (ಟಿಬಿ) ರೋಗ ನಿರ್ಮೂಲನೆ ಉದ್ದೇಶದಿಂದ ಆರಂಭಿಸಿರುವ “ಪ್ರಧಾನಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನ’ದ ಭಾಗವಾಗಿ ಸೆಪ್ಟಂಬರ್‌ನಿಂದ “ನಿ-ಕ್ಷಯ ಮಿತ್ರ’ ಯೋಜನೆ ಮೂಲಕ ರೋಗಿಗಳಿಗೆ ಆಹಾರದ ಕಿಟ್ ನೀಡಲಾಗುತ್ತಿದೆ.
ಕರ್ನಾಟಕದ ಆರೋಗ್ಯ ಇಲಾಖೆಯು “ಕ್ಷಯ ಮುಕ್ತ ಕರ್ನಾಟಕ-2025′ ಕಾರ್ಯತಂತ್ರವನ್ನು ಅಳವಡಿಸಿಕೊಂಡು ಸಂಘ-ಸಂಸ್ಥೆಗಳು, ಕಂಪೆನಿ ಗಳು, ಎನ್‌ಜಿಒಗಳು ಕ್ಷಯ ರೋಗಿಗಳನ್ನು ದತ್ತು ಪಡೆದು ಅವರಿಗೆ ಅಗತ್ಯ ಪೌಷ್ಟಿಕಾಂಶ ಪೂರೈಸಲಾರಂಭಿಸಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 645 ಮಂದಿಗೆ ಕಿಟ್ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ.
ಏನಿದು ನಿ-ಕ್ಷಯ ಮಿತ್ರ?
ಕ್ಷಯ ರೋಗಿಗಳು ಮತ್ತು ದಾನಿಗಳ ವಿವರ ಗಳನ್ನು ನಿ-ಕ್ಷಯ ತಂತ್ರಾಂಶದಲ್ಲಿ ದಾಖಲಿಸಿ ದಾನಿ ಗಳು ರೋಗಿಗಳನ್ನು ದತ್ತು ಪಡೆಯಲು ಅವ ಕಾಶ ಕಲ್ಪಿಸಲಾಗುತ್ತಿದೆ. ಈ ತಂತ್ರಾಂಶದಿಂದ ದೇಶದಲ್ಲಿ ಎಷ್ಟು ರೋಗಿಗಳಿಗೆ ಯಾವ ದಾನಿಗಳು ಕಿಟ್ ಒದ ಗಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತದೆ.
ಅಧಿಕೃತ ಜ್ಞಾಪನ ಪತ್ರ
ಕ್ಷಯ ರೋಗಿಗಳಿಗೆ ಕನಿಷ್ಠ 6 ತಿಂಗಳು ಪೌಷ್ಟಿಕ ಆಹಾರ ಲಭಿಸಿದಾಗ ಅವರ ಜೀವ ನಿರೋಧಕ ಶಕ್ತಿ ಹೆಚ್ಚಳಗೊಂಡು ರೋಗ ನಿವಾರಣೆಗೆ ದೇಹ ಸ್ಪಂದಿಸಲು ಆರಂಭಿಸುತ್ತದೆ. ಆರೋಗ್ಯ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ವಿಭಾಗದಿಂದ ಪ್ರತೀ ತಿಂಗಳಿಗೆ ಯಾವ ಆಹಾರಗಳನ್ನು ನೀಡ ಬೇಕು ಎಂಬ ಅಧಿಕೃತ ಜ್ಞಾಪನ ಪತ್ರವನ್ನು ಸಂಬಂಧ ಪಟ್ಟವರಿಗೆ ಕಳುಹಿಸಿದೆ.
ದ.ಕ., ಉಡುಪಿಯ ವಿವರ
ದ.ಕ. ಜಿಲ್ಲೆಯಲ್ಲಿ 1 ಸಾವಿರದಷ್ಟು ಕ್ಷಯ ರೋಗಿಗಳಿದ್ದು, ಈಗಾಗಲೇ 517 ಮಂದಿಗೆ ಪ್ರತೀ ತಿಂಗಳು ಕಿಟ್ ನೀಡಲಾಗುತ್ತಿದೆ. ಆರ್ಥಿಕವಾಗಿ ಶಕ್ತರಿರುವ ರೋಗಿಗಳು ಕಿಟ್ ನಿರಾಕರಿಸುತ್ತಿದ್ದು, ಅಗತ್ಯ ಉಳ್ಳವರು ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆ ಯಲ್ಲಿ ಇನ್ನೂ ಹೆಚ್ಚಿನ ರೋಗಿಗಳಿಗೆ ಕಿಟ್‌ನ ಆವಶ್ಯಕತೆ ಇದೆ.
ಉಡುಪಿ ಜಿಲ್ಲೆಯಲ್ಲಿ ಸುಮಾರು 550 ಕ್ಷಯ ರೋಗಿಗಳಿದ್ದು, ಸದ್ಯಕ್ಕೆ 128 ಮಂದಿಗೆ ಕಿಟ್ ನೀಡ ಲಾಗುತ್ತಿದೆ. ಈ ಸಂಖ್ಯೆಗಳಲ್ಲಿ ವ್ಯತ್ಯಾಸಗಳಾಗುತ್ತಿದ್ದು, ದಾನಿಗಳು ಮುಂದೆ ಬಂದಂತೆ ರೋಗಿಗಳನ್ನು ಅವರಿಗೆ ಲಿಂಕ್ ಮಾಡಲಾಗುತ್ತದೆ. ಪ್ರತೀ ಕಿಟ್‌ಗೆ ಅಲ್ಲಿರುವ ಆಹಾರದ ಆಧಾರದಲ್ಲಿ 800ರಿಂದ 1,200 ರೂ.ಗಳವರೆಗೆ ವೆಚ್ಚ ತಗಲುತ್ತದೆ.
ದ.ಕ. ಜಿಲ್ಲೆಯಲ್ಲಿ ಇನ್ನುಳಿದ ರೋಗಿಗಳಿಗೆ ಆಹಾರ ಕಿಟ್ ನೀಡಲು ದಾನಿಗಳ ಆವಶ್ಯಕತೆ ಇದೆ. ಕೆಲವೊಂದು ಸಂಘ-ಸಂಸ್ಥೆಗಳು, ಕಂಪೆನಿಗಳು ಕಿಟ್‌ಗಳನ್ನು ನೀಡುವ ಭರವಸೆ ಈಗಾಗಲೇ ನೀಡಿವೆ.
– ಡಾ| ಬದ್ರುದ್ದೀನ್ ಕ್ಷಯ ರೋಗ ನಿಯಂತ್ರಣಾಧಿಕಾರಿ, ದ.ಕ. ಜಿಲ್ಲೆ
ಉಡುಪಿ ಜಿಲ್ಲೆಯಲ್ಲಿ ಸದ್ಯಕ್ಕೆ 568 ಕ್ಷಯ ರೋಗಿಗಳಲ್ಲಿ 128 ಮಂದಿಗೆ ಆಹಾರದ ಕಿಟ್ ನೀಡಲಾಗುತ್ತಿದ್ದು, ನಾವು ರೋಗಿಗಳು ಮತ್ತು ದಾನಿಗಳನ್ನು ಪರಸ್ಪರ ಸಂಪರ್ಕಿಸುವ ಕಾರ್ಯ ಮಾಡುತ್ತಿದ್ದೇವೆ. ಕೆಲವೊಂದು ಸಂಸ್ಥೆಗಳು ಸ್ಥಳೀಯ ರೋಗಿಗಳನ್ನೇ ಕೇಳುತ್ತವೆ. ಕೆಲವು ಸಂಸ್ಥೆಗಳು ನಾವು ಹೇಳಿದಕ್ಕಿಂತ ಹೆಚ್ಚಿನ ಆಹಾರ ಸಾಮಗ್ರಿಗಳನ್ನು ನೀಡುತ್ತಿವೆ.
– ಡಾ| ಚಿದಾನಂದ ಸಂಜು, ಕ್ಷಯ ರೋಗ ನಿಯಂತ್ರಣಾಧಿಕಾರಿ, ಉಡುಪಿ ಜಿಲ್ಲೆ
ಸೂಚಿಸಿದ ಆಹಾರ ಸಾಮಗ್ರಿಗಳು
1. ಗೋಧಿ ನುಚ್ಚು- 3 ಕೆಜಿ
2. ಶೇಂಗಾ/ಕಡಲೆ- 1 ಕೆಜಿ
3. ಹೆಸರು ಕಾಳು, ತೊಗರಿ ಬೇಳೆ-ತಲಾ 1 ಕೆಜಿ
4. ಬೆಲ್ಲ- 1 ಕೆಜಿ
– ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.