ಮಂಗಳೂರಿನ ಶ್ವಾನದಳದ ನಾಯಿಗೆ “ಚಾರ್ಲಿ’ ಎಂದು ನಾಮಕಾರಣ
Team Udayavani, Jun 11, 2022, 7:15 AM IST
ಮಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ “ಚಾರ್ಲಿ’ ಚಲನಚಿತ್ರ ಶುಕ್ರವಾರ ಬಿಡುಗಡೆಗೊಂಡಿದ್ದು, ಮನುಷ್ಯ ಮತ್ತು ಶ್ವಾನದ ನಡುವಿನ ಭಾವನಾತ್ಮಕ ಸಂಬಂಧವನ್ನು ಕಥೆಯಲ್ಲಿ ಚಿತ್ರಿಸಲಾಗಿದೆ. ಇದರಿಂದ ಸ್ಫೂರ್ತಿಗೊಂಡು ಮಂಗಳೂರು ಪೊಲೀಸ್ ಶ್ವಾನದಳದ ನಾಯಿಮರಿಗೂ “ಚಾರ್ಲಿ’ ಎಂಬ ಹೆಸರಿಡಲಾಗಿದೆ.
ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಈ ಶ್ವಾನಕ್ಕೆ ನಾಮಕರಣ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಳೆದ ಮಾರ್ಚ್‌ನಲ್ಲಿ ಹುಟ್ಟಿದ ಲ್ಯಾಬ್ರಡಾರ್ ರಿಟ್ರಿವರ್ ಶ್ವಾನವನ್ನು ಮಂಗಳೂರು ಪೊಲೀಸ್ ಇಲಾಖೆ ಖರೀದಿಸಿತ್ತು. ಮುಂದಿನ ಸುಮಾರು 4 ತಿಂಗಳ ಬಳಿಕ ಬೆಂಗಳೂರಿನ ಸೌತ್ ಸಿಆರ್‌ನಲ್ಲಿ ಆರು ತಿಂಗಳ ಕಾಲ ಈ ಶ್ವಾನಕ್ಕೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಬಳಿಕ ಈ ಶ್ವಾನ ಬಾಂಬ್ ನಿಷ್ಕ್ರಿàಯ ಹಾಗೂ ಪತ್ತೆ ಮಾಡಲು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ರಕ್ಷಿತ್ ಶೆಟ್ಟಿ ಟ್ವೀಟ್
ಮಂಗಳೂರು ಪೊಲೀಸರು ಶ್ವಾನದಳದ ನಾಯಿಗೆ “ಚಾರ್ಲಿ’ ಎಂಬ ಹೆಸರಿಟ್ಟಿದ್ದು, ಈ ಪೋಸ್ಟ್ ಅನ್ನು ನಟ ರಕ್ಷಿತ್ ಶೆಟ್ಟಿ ಅವರು ರೀ ಟ್ವೀಟ್ ಮಾಡಿ “ವ್ಹಾವ್’ ಎಂದು ತಮ್ಮ ಟ್ವಿಟ್ಟರ್ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.