ಜಾಗ ಸಮತಟ್ಟು :ನಿಟ್ಟುಸಿರು ಬಿಟ್ಟ ಹೆದ್ದಾರಿ ಪ್ರಯಾಣಿಕರು

Team Udayavani, Feb 7, 2018, 10:50 AM IST

7-Feb-6.jpg

ಬೆಳ್ತಂಗಡಿ: ಮಂಗಳೂರು – ಚಿಕ್ಕಮಗಳೂರು ರಾ.ಹೆ. ಮಧ್ಯೆ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್‌ ಸೇತುವೆಗೆ ಅನುದಾನ ಮಂಜೂರಾಗಿ ಕಾಮಗಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಮೃತ್ಯುಂಜಯ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುವ ಜಾಗವನ್ನು ಸಮತಟ್ಟು ಮಾಡುವ ಕಾರ್ಯ ನಡೆಯುತ್ತಿದೆ.

ಸುಮಾರು 76 ವರ್ಷಗಳ ಹಳೆ ಸೇತುವೆ ಸಂಪೂರ್ಣ ಶಿಥಿಲ ಗೊಂಡಿದ್ದು, ಸೇತುವೆ ಮೇಲಿನ ರಸ್ತೆಯ ಡಾಮರು ಕಿತ್ತು ಹೋಗಿ, ವಾಹನ ಸಂಚಾರಕ್ಕೆ ತೀವ್ರ ತೊಡ ಕಾಗುತ್ತಿದೆ. ಶಿರಾಡಿ ಘಾಟಿ ರಸ್ತೆಯ ಕಾಮಗಾರಿ ನಡೆಯುತ್ತಿರುವ ಕಾರಣ ಎಲ್ಲ ವಾಹನಗಳು ಚಾರ್ಮಾಡಿ ರಸ್ತೆಯನ್ನೇ ಅವಲಂಬಿಸಿದ್ದು, ಅಗಲ ಕಿರಿದಾಗಿರುವ ನಿಡಿಗಲ್‌ ಸೇತುವೆ ಮೇಲೆ ದಿನಂಪ್ರತಿ ಬ್ಲಾಕ್‌ ಆಗುತ್ತಿದೆ. ಸೇತುವೆ ಬದಿಯ ತಡೆಬೇಲಿಯೂ ತುಂಡಾಗಿರುವ ಕಾರಣ ಅಪಾಯ ಆಹ್ವಾನಿಸುತ್ತಿದೆ. ಸೇತುವೆ ಮೇಲಿನ ಗುಂಡಿಗೆ ತೇಪೆ ಕಾರ್ಯ ನಡೆಸಲಾಗಿದೆ.

ಆತಂಕದಲ್ಲಿ ಪ್ರಯಾಣಿಕರು
ಬೆಂಗಳೂರು ಸಹಿತ ಹಲವು ಜಿಲ್ಲೆಗಳಿಂದ ಧರ್ಮಸ್ಥಳ, ಕಟೀಲು, ಉಡುಪಿ ಇತ್ಯಾದಿ ಕ್ಷೇತ್ರಗಳಿಗೆ ಆಗಮಿಸುವ ಯಾತ್ರಿಕರಿಗೆ ನಿಡಿಗಲ್‌ ಸೇತುವೆ ಪ್ರಮುಖ ಕೊಂಡಿಯಾಗಿದ್ದು, ಇದು ಹಲವು ದಶಕಗಳ ಹಿಂದಿನ ನಿರ್ಮಾಣವಾಗಿದ್ದರಿಂದ ಕುಸಿತ ಭೀತಿ ಪ್ರಯಾಣಿಕರನ್ನು ಕಾಡುತಿತ್ತು.

19 ಕೋ.ರೂ. ಮಂಜೂರು
ಬಂಟ್ವಾಳ- ಚಾರ್ಮಾಡಿ ರಾ.ಹೆ.ಯ ಮಣಿಹಳ್ಳ, ನಿಡಿಗಲ್‌ ಮತ್ತು ಚಾರ್ಮಾಡಿಯ 3 ಸೇತುವೆ ನಿರ್ಮಾಣಕ್ಕೆ 19 ಕೋ.ರೂ. ಅನುದಾನ ಮಂಜೂರುಗೊಂಡಿದ್ದು, ನಿಡಿಗಲ್‌ ಸೇತುವೆ ಕಾಮಗಾರಿಗೆ ಚಾಲನೆ ದೊರಕಿದೆ.

ಉದಯವಾಣಿ ವರದಿ
ಉದಯವಾಣಿ ಪತ್ರಿಕೆ ಹಲವು ವರ್ಷಗಳಿಂದ ಸರಕಾರದ ಗಮನ ಸೆಳೆದಿತ್ತು. ಶಾಸಕರು ಅನೇಕ ಬಾರಿ ಈ ಸೇತುವೆ ರಚನೆಗೆ ಅನುದಾನ ಒದಗಿಸುವಂತೆ ಮನವಿ ಮಾಡಿದ್ದರು. ಈಗ ಕೊನೆಗೂ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ಅನುದಾನ ಮಂಜೂರುಗೊಂಡು ಕಾಮಗಾರಿಗೆ ಚಾಲನೆ ದೊರಕಿದೆ. ಮರಗೋಡಿ ಕನ್‌ಸ್ಟ್ರಕ್ಷನ್ಸ್‌ ಸಂಸ್ಥೆ ಇದರ ಗುತ್ತಿಗೆ ವಹಿಸಿಕೊಂಡಿದ್ದು, ಮಳೆಗಾಲ ಹೊರತುಪಡಿಸಿ 11 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ.

ಗುರು ಮುಂಡಾಜೆ

ಟಾಪ್ ನ್ಯೂಸ್

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.