ಪಿಲಿಕುಳಕ್ಕೆ ಬಂತು ನೀರಾನೆ
Team Udayavani, Mar 17, 2017, 12:45 PM IST
ಮಂಗಳೂರು: ಕರಾವಳಿಯ ಪ್ರವಾಸೋದ್ಯಮದ ಪ್ರಮುಖ ಸ್ಥಳ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಒಂದು ನೀರಾನೆ (ಹಿಪ್ಪೋಪೊಟಮಸ್)ಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ತರಿಸಲಾಗಿದ್ದು, ಇನ್ನೆರಡು ನೀರಾನೆಗಳು ಒಂದು ವಾರದೊಳಗೆ ಪಿಲಿಕುಳಕ್ಕೆ ಆಗಮಿಸಲಿವೆ.
ಈಗ ಬಂದಿರುವ “ಕಾವೇರಿ’ ಹೆಸರಿನ ಹೆಣ್ಣು ನೀರಾನೆ ಮೂಲತಃ ಆಫ್ರಿಕಾದ್ದಾಗಿದ್ದು, 10.5 ವರ್ಷ ಪ್ರಾಯ ಹಾಗೂ 2 ಟನ್ ಭಾರವಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ 3 ನೀರಾನೆಗಳು (1 ಗಂಡು, 2 ಹೆಣ್ಣು), 1 ಹೆಣ್ಣು ಹುಲಿ, 1 ಹನುಮಾನ್ ಕೋತಿ ಹೆಣ್ಣು, 10 ನೈಟ್ ಹರಾನ್ ಹಕ್ಕಿ ಪಿಲಿಕುಳ ಉದ್ಯಾನವನಕ್ಕೆ ವಿನಿಮಯ ರೂಪದಲ್ಲಿ ಬರಲಿವೆ. ಇದಕ್ಕೆ ಪ್ರತಿಯಾಗಿ ಪಿಲಿಕುಳದಿಂದ 1 ಗಂಡು ಹುಲಿ, 1 ಹನುಮಾನ್ ಕೋತಿ ಗಂಡು, 8 ಚಿನ್ನದ ನರಿಗಳು, 2 ಮರಬಾತು ಹಕ್ಕಿ, ಕಾಡುಕೋಳಿ, ಕಾಡುಕುರಿಗಳನ್ನು ಬನ್ನೇರುಘಟ್ಟಕ್ಕೆ ಕಳುಹಿಸಲಾಗುತ್ತದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಅವರು ತಿಳಿಸಿದ್ದಾರೆ.