Nitte Institute of Communication; ಮೇ 31ರಂದು ನಿಟ್ಟೆ ಕ್ರಿಯೇಟಿವಿಟಿ ಫೆಸ್ಟಿವಲ್
Team Udayavani, May 29, 2024, 3:24 PM IST
ಮಂಗಳೂರು: ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ವತಿಯಿಂದ ಮೇ 31 ಸಂಸ್ಥೆಯ ಆವರಣದಲ್ಲಿ ‘ನಿಟ್ಟೆ ಕ್ರಿಯೇಟಿವಿಟಿ ಫೆಸ್ಟಿವಲ್‘‘ ಅನ್ನು ಹಮ್ಮಿಕೊಂಡಿದೆ. ದಿನವಿಡೀ ನಡೆಯುವ ಈ ಕಾರ್ಯಕ್ರಮದಲ್ಲಿ ಉಪನ್ಯಾಸಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ.
ಕೊಗ್ಗಾ ಭಾಸ್ಕರ್ ಕಾಮತ್ ಮತ್ತು ತಂಡದಿಂದ ಯಕ್ಷಗಾನ ಬೊಂಬೆ ಪ್ರದರ್ಶನವು ಈ ಕಾರ್ಯಕ್ರಮದ ಆಕರ್ಷಣೆಗಳಲ್ಲಿ ಒಂದಾಗಿರಲಿದೆ. ನಿಟ್ಟೆ ಕ್ರಿಯೇಟಿವಿಟಿ ಫೆಸ್ಟ್‌ನ ಎರಡನೇ ಆವೃತ್ತಿಯನ್ನು ಎಂ.ಎ (ಎರಡನೇ ವರ್ಷ) ವಿದ್ಯಾರ್ಥಿಗಳು ಈವೆಂಟ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ತಮ್ಮ ಅಧ್ಯಯನದ ಭಾಗವಾಗಿ ಆಯೋಜಿಸುತ್ತಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಸಂಪನ್ಮೂಲ ವ್ಯಕ್ತಿಗಳ ಮಾಹಿತಿ ಹೀಗಿದೆ:
- ಕಾರ್ತಿಕ್ ವೆಂಕಟೇಶ್ – ಸಂಪಾದಕರು, ಪೆಂಗ್ವಿನ್ ಇಂಡಿಯಾ
- ಮೊಹಮ್ಮದ್ ಇಸ್ಮಾಯಿಲ್ – ಉಪಾಧ್ಯಕ್ಷರು, ಜಿಯೋ ಸಿನಿಮಾ
- ರಿತ್ವಿಕ್ ಕಾಯ್ಕಿಣಿ – ಸಂಗೀತ ಸಂಯೋಜಕರು
- ಮಮತಾ ರೈ – ಸಂಸ್ಥಾಪಕ ಅಧ್ಯಕ್ಷರು, ಕೇದಿಕೆ ಟ್ರಸ್ಟ್
- ಚಂಡೆ ಮತ್ತು ಪಿಟೀಲು ಜುಗಲ್ಬಂದಿ – ಶ್ರೀ ಗುರು ಚಂಡೆ ಸೆಟ್ ಮತ್ತು ಆದ್ಯಾ ವಿಜಯನ್, ಮಂಗಳೂರು.
- ಭಾಸ್ಕರ್ ಕೊಗ್ಗಾ ಕಾಮತ್ ಅವರಿಂದ ಯಕ್ಷಗಾನ ಬೊಂಬೆ ಪ್ರದರ್ಶನ. (ಚೂಡಾಮಣಿ ಲಂಕಾ ದಹನ)
- ವಿನ್ಯಾಸ ಹ್ಯಾಂಡ್‌ಲೂಮ್ಸ್, ಶಿವಮೊಗ್ಗ – ಇವರ ಸಹಯೋಗದೊಂದಿಗೆ ಕಾರ್ಯಕ್ರಮದಲ್ಲಿ ಕೈಮಗ್ಗ ಸೀರೆಗಳು, ವಸ್ತುಗಳು ಮತ್ತು ರೆಡಿಮೇಡ್ ವಸ್ತ್ರಗಳ ಪ್ರದರ್ಶನ ಮತ್ತು ಮಾರಾಟವೂ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.