ಎನ್‌ಎಂಪಿಟಿ: ಯಾಂತ್ರೀಕೃತ ಬರ್ತ್ ಮಾರ್ಚ್‌ಗೆ ಆರಂಭ
Team Udayavani, Jan 23, 2019, 12:50 AM IST
ಮಂಗಳೂರು: ನವಮಂಗಳೂರು ಬಂದರಿನಲ್ಲಿ (ಎನ್‌ಎಂಪಿಟಿ) 469.46 ಕೋ.ರೂ. ವೆಚ್ಚದಲ್ಲಿ ನಿರ್ಮಿಸಿರುವ ಸಂಪೂರ್ಣ ಯಾಂತ್ರೀಕೃತ ಬರ್ತ್ ಮಾರ್ಚ್ ಅಂತ್ಯಕ್ಕೆ ಕಾರ್ಯಾರಂಭಿಸಲಿದೆ ಎಂದು ಬಂದರು ಮಂಡಳಿ ಅಧ್ಯಕ್ಷ ಎಂ.ಟಿ. ಕೃಷ್ಣ ಬಾಬು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂದರಿನ 16ನೇ ನಂಬರಿನ ಬರ್ಥ್ ಮೆ| ಚೆಟ್ಟಿನಾಡ್ ಮಂಗಳೂರು ಕೋಲ್ ಟರ್ಮಿನಲ್ ಲಿಮಿಟೆಡ್
ನಿಂದ ಸಂಪೂರ್ಣವಾಗಿ ಯಾಂತ್ರೀಕರಣ ಗೊಂಡಿದ್ದು, ಇಲ್ಲಿಂದ ಎಲ್ಲ ವಿಧದ ಕಲ್ಲಿದ್ದಲು ಯಾಂತ್ರೀಕೃತ ವ್ಯವಸ್ಥೆಯಲ್ಲಿ ನಿರ್ವಹಣೆಯಾಗಲಿದೆ. ಬರ್ಥ್ ನಂ. 14ನ್ನು 280.71 ಕೋ.ರೂ. ವೆಚ್ಚದಲ್ಲಿ ಎರಡು ಹಂತಗಳಲ್ಲಿ
ಯಾಂತ್ರೀಕೃತ ನಿರ್ವಹಣಾ ಬರ್ಥ್ ಆಗಿ ರೂಪಿಸುವ ಪ್ರಸ್ತಾವನೆಯನ್ನು ಸರಕಾರದ ಅನುಮೋದನೆಗಾಗಿ ಕಳುಹಿಸಲಾಗಿದೆ. ಹೊಸದಾಗಿ 200 ಕೋ.ರೂ. ವೆಚ್ಚದಲ್ಲಿ ಬಹೂಪಯೋಗಿ 18ನೇ ಬರ್ಥ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
9 ತಿಂಗಳಲ್ಲಿ 492.5 ಕೋ.ರೂ. ಆದಾಯ
ಎನ್‌ಎಂಪಿಟಿ 2018-19ನೇ ಸಾಲಿನ ಎಪ್ರಿಲ್‌ನಿಂದ ಡಿಸೆಂಬರ್ ವರೆಗಿನ 3 ತ್ತೈಮಾಸಿಕದಲ್ಲಿ ಒಟ್ಟು 492.5 ಕೋ.ರೂ. ಆದಾಯ ಗಳಿಸಿದೆ. 2017 ರಲ್ಲಿ ಇದೇ ಅವಧಿಯಲ್ಲಿ ಗಳಿಸಿದ ಆದಾಯ 408.47 ಕೋ.ರೂ. ಆಗಿತ್ತು. ಇದರಲ್ಲಿ ನಿರ್ವಹಣಾ ಮಿಗತೆ (ಲಾಭ) 243.35 ಕೋ.ರೂ. ಆಗಿದ್ದು ಕಳೆದ ಸಾಲಿಗೆ ಹೋಲಿಸಿದರೆ ಶೇ. 55.83 ಪ್ರಗತಿ ಸಾಧಿಸಲಾಗಿದೆ. ಕಳೆದ ಸಾಲಿ ನಲ್ಲಿ ಇದೇ ಅವಧಿಯಲ್ಲಿ ನಿರ್ವಹಣೆ ಮಿಗತೆ 156.16 ಕೋ.ರೂ. ಆಗಿತ್ತು. 9 ತಿಂಗಳ ಅವಧಿಯಲ್ಲಿ 31.91 ಮಿಲಿಯ ಟನ್ ಸರಕು ನಿರ್ವಹಿಸಲಾಗಿದ್ದು, ಕಳೆದ ಅವಧಿಗಿಂತ ಶೇ. 2.89 ಪ್ರಗತಿ ದಾಖಲಾಗಿದೆ. 99,856 ಟಿಇಯು ಕಂಟೈನರ್ ಸರಕು ನಿರ್ವಹಿ ಸಲಾಗಿದ್ದು, ಶೇ. 23 ಪ್ರಗತಿ ಸಾಧಿಸಲಾಗಿದೆ. ಒಟ್ಟು 14 ಪ್ರವಾಸಿ ಹಡಗುಗಳು ಬಂದಿದ್ದು, ಒಟ್ಟು ಈ ಋತುವಿನಲ್ಲಿ 32 ಪ್ರವಾಸಿ ಹಡಗುಗಳು ಆಗಮಿಸುವ ನಿರೀಕ್ಷೆ ಇದೆ ಎಂದು ವಿವರಿಸಿದರು.
ಎನ್‌ಎಂಪಿಟಿ ಕಾಲುವೆಯ ಆಳವನ್ನು ಎಲ್ಲ ಕಾಲದಲ್ಲೂ 14 ಮೀಟರ್‌ಗೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಡ್ರೆಜ್ಜಿಂಗ್‌ಗೆ ಉದ್ದೇಶಿಸಲಾಗಿದೆ. 28 ಕೋ.ರೂ. ವೆಚ್ಚದಲ್ಲಿ ಕಂಟೈನರ್ ಸ್ಕ್ಯಾನರ್ ಅಳವಡಿಸಲಾಗುವುದು ಎಂದರು.
ಕುಳಾç ಜೆಟ್ಟಿ ಶೀಘ್ರ
ಕುಳಾçಯಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಪ್ರಕ್ರಿಯೆ ಸದ್ಯದಲ್ಲೇ ಪ್ರಾರಂಭವಾಗಲಿದೆ. ಈ ಮಾಸಾಂತ್ಯದಲ್ಲಿ ಬ್ರೇಕ್‌ವಾಟರ್ ನಿರ್ಮಾಣ ಕಾಮಗಾರಿ ಪ್ರಾರಂಭವಾಗಲಿದೆ. 196 ಕೋ.ರೂ. ವೆಚ್ಚದ ಈ ಯೋಜನೆಗೆ ಶೇ. 50 ಸಾಗರಮಾಲಾದಲ್ಲಿ, ಶೇ. 45 ಭಾಗ ಎನ್‌ಎಂಪಿಟಿ ಹಾಗೂ ಶೇ. 5ರಷ್ಟು ಭಾಗವನ್ನು ರಾಜ್ಯ ಸರಕಾರ ಭರಿಸಲಿದೆ. ಕೇಂದ್ರ ಸರಕಾರ ಈಗಾಗಲೇ ಹಣವನ್ನು ರಾಜ್ಯ ಸರಕಾರಕ್ಕೆ ಬಿಡುಗಡೆ ಮಾಡಿದೆ ಎಂದು ಕೃಷ್ಣ ಬಾಬು ವಿವರಿಸಿದರು.
2ನೇ ಬಾರಿ “ಸ್ವತ್ಛ ಸರ್ವೇಕ್ಷಣಾ’ ಪ್ರಶಸ್ತಿ
ರಾಷ್ಟ್ರದ 12 ಬೃಹತ್ ಬಂದರುಗಳ ಪೈಕಿ ನವಮಂಗಳೂರು ಬಂದರು ಸ್ವತ್ಛ ಪರಿಸರಕ್ಕಾಗಿ ಸತತ ಎರಡನೇ ಬಾರಿಗೆ “ಸ್ವತ್ಛ ಸರ್ವೇಕ್ಷಣಾ’ ಪುರಸ್ಕಾರ ಪಡೆದುಕೊಂಡಿದೆ. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಎಂಬ ಸ್ವತಂತ್ರ ಸಂಸ್ಥೆ ನೀಡುವ ವರದಿಯ ಮೇಲೆ ಭಾರತ ಸರಕಾರದ ನೌಕಾಯಾನ ಸಚಿವಾಲಯ ಈ ಪ್ರಶಸ್ತಿ ನೀಡುತ್ತಿದೆ. ಒಟ್ಟು 1,000 ಅಂಕಗಳಿದ್ದು ಎನ್‌ಎಂಪಿಟಿ 850 ಅಂಕ ಗಳಿಸಿದೆ ಎಂದು ಕೃಷ್ಣ ಬಾಬು ವಿವರಿಸಿದರು. ಪಣಂಬೂರು
ಬೀಚ್‌ಗೆ ತೆರಳುವ ರಸ್ತೆಯನ್ನು 2.3 ಕೋ.ರೂ. ವೆಚ್ಚದಲ್ಲಿ ಕಾಂಕ್ರೀಟೀಕರಣ ಗೊಳಿಸಲಾಗುತ್ತಿದೆ. 40 ಲಕ್ಷ ರೂ. ವೆಚ್ಚ ದಲ್ಲಿ ಬೀದಿದೀಪ ಅಳವಡಿ ಸಲಾಗುತ್ತಿದೆ ಎಂದರು.
ಪ್ರವಾಸಿ ಸ್ಥಳಗಳಲ್ಲಿ ಸುಸಜ್ಜಿತ ಶೌಚಾಲಯ
ಮಂಗಳೂರು: ಹಡಗುಗಳ ಮೂಲಕ ಆಗಮಿಸುವ ಪ್ರವಾಸಿಗರು ಭೇಟಿ ನೀಡುವ ನಾಲ್ಕು ಪ್ರಮುಖ ಸ್ಥಳಗಳಲ್ಲಿ ನವಮಂಗಳೂರು ಬಂದರು ಮಂಡಳಿ ವತಿಯಿಂದ ಸುಸಜ್ಜಿತವಾದ ಶೌಚಾಲಯಗಳನ್ನು (ವಾಶ್‌ರೂಂ) ನಿರ್ಮಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ಎಂ.ಟಿ. ಕೃಷ್ಣಬಾಬು ತಿಳಿಸಿದ್ದಾರೆ. ಮಂಡಳಿಯ ಸಿಎಸ್‌ಆರ್ ನಿಧಿಯಡಿ ಸುಮಾರು 1.5 ಕೋ.ರೂ. ವೆಚ್ಚದಲ್ಲಿ ಇವುಗಳನ್ನು ನಿರ್ಮಿಸಲಾಗುತ್ತದೆ. ಕದ್ರಿ ಮಂಜುನಾಥ ಕ್ಷೇತ್ರ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಮೂಡುಬಿದಿರೆ ಸಾವಿರ ಕಂಬ ಬಸದಿ ಹಾಗೂ ಕಾರ್ಕಳದಲ್ಲಿ ಒಂದೊಂದು ಶೌಚಾಲಯವನ್ನು ವಿಮಾನ ನಿಲ್ದಾಣಗಳಲ್ಲಿರುವ ವಾಶ್‌ರೂಂ ಮಾದರಿಯಲ್ಲಿ ನಿರ್ಮಿಸಲಾಗುವುದು. ದಿನದ 24 ತಾಸು ಕಾರ್ಯ ನಿರ್ವಹಿಸಲಿದ್ದು ಎಲ್ಲ ಪ್ರವಾಸಿಗರು ಬಳಸಬಹುದು ಎಂದರು.
ಪಿಲಿಕುಳ, ಪಣಂಬೂರು ಬೀಚ್ ಮತ್ತು ನಗರದ 10 ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
20 ಕಡೆ ಕುಡಿಯುವ ನೀರಿನ ಘಟಕ
ಮಂಗಳೂರು ನಗರದ ಸಾರ್ವಜನಿಕ ದಟ್ಟಣೆಯ 20 ಕಡೆಗಳಲ್ಲಿ ಕಿಯಾಸ್ಕ್ ಮಾದರಿಯಲ್ಲಿ 1 ರೂ.ಗೆ 1 ಲೀಟರ್ ಶುದ್ಧ ಕುಡಿಯುವ ನೀರು ವಿತರಣಾ ಘಟಕಗಳನ್ನು ಸ್ಥಾಪಿಸಲಾಗುವುದು. ನೀರು ಪಡೆಯಲು 20ರಿಂದ 30 ರೂ. ಮೌಲ್ಯದ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ರೂಪಿಸಲು ನಿರ್ಧರಿಸಲಾಗಿದೆ. ಕಾರ್ಡನ್ನು ಸ್ವೆ çಪ್ ಮಾಡಿ ನೀರು ಪಡೆಯಬಹುದಾಗಿದೆ ಎಂದು ಎಂ.ಟಿ. ಕೃಷ್ಣಬಾಬು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
Mangaluru ಕಂಬಳ ಸಮಯ ನಿರ್ವಹಣೆಗೆ 2 ದಿನ ಪ್ರತ್ಯೇಕ ಸ್ಪರ್ಧೆ!
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
MUST WATCH
ಹೊಸ ಸೇರ್ಪಡೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.