ಮಂಗಳೂರಲ್ಲಿ ಬೈಕ್ ರಾಲಿಗೆ ಅವಕಾಶ ಇಲ್ಲ
Team Udayavani, May 19, 2018, 12:02 PM IST
ಮಂಗಳೂರು: ನಗರದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ನಿಭಾವಣೆ ಸವಾಲಾಗಿರುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಬೈಕ್ ರಾಲಿಗೆ ಅವಕಾಶ ನೀಡಲಾಗದು ಎಂದು ಮಂಗಳೂರು ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ತಿಳಿಸಿದ್ದಾರೆ.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದಲ್ಲಿ ಯಾವುದೇ ಪ್ರತಿಭಟನೆ, ಮೆರವಣಿಗೆ, ವಿಜಯೋತ್ಸವ ನಡೆಸಬೇಕಾದರೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇದನ್ನು ಉಲ್ಲಂಘಿಸಿದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೈಕ್ ರಾಲಿ ನಡೆಸುವುದರಿಂದ ಟ್ರಾಫಿಕ್ ಒತ್ತಡ ಹೆಚ್ಚಾಗಿ ಇಡೀ ನಗರದ ಮೇಲೆ ಪರಿಣಾಮ ಬೀರುತ್ತದೆ. ಹಲವಾರು ಸಂದರ್ಭಗಳಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿ ರಾಲಿ ನಡೆಸಲಾಗುತ್ತದೆ. ಈ ಎಲ್ಲ ಕಾರಣಗಳಿಂದ ಯಾವುದೇ ಕಾರಣಕ್ಕೂ ಬೈಕ್ ರಾಲಿಗೆ ಅನುಮತಿ ನೀಡದಿರಲು ತೀರ್ಮಾನಿಸಲಾಗಿದೆ. ಇದನ್ನು ಮೀರಿ ಬೈಕ್ ರಾಲಿ ನಡೆಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಚುನಾವಣೆಗೆ ಮೊದಲು, ಚುನಾವಣೆ ದಿನ ಹಾಗೂ ಮತ ಎಣಿಕೆ ದಿನ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಿದ, ಎಲ್ಲ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಕಾರಣರಾದ ಜನತೆಗೆ ಧನ್ಯವಾದ ಸಲ್ಲಿಸಿದರು.
ಪೊಲೀಸರ ಜತೆ ಸಿಆರ್‌ಪಿಎಫ್ 11 ಕಂಪೆನಿ, 400ಕ್ಕೂ ಅಧಿಕ ಗೃಹ ರಕ್ಷಕರು ಸಹಕರಿಸಿದ್ದಾರೆ ಎಂದು ವಿವರಿಸಿದರು.
8 ಮಂದಿ ಸೆರೆ
ಮತ ಎಣಿಕೆಯಂದು ಅಡ್ಯಾರ್‌ಪದವಿನಲ್ಲಿ ನಡೆದ ಘಟನೆಗೆ ಸಂಬಂಧಿಸಿ 8 ಮಂದಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್ ಉಪಸ್ಥಿತರಿದ್ದರು.
ಮಂಗಳೂರು ಪೊಲೀಸ್ ಕಮಿಷನ ರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸಂಚಾರ ಸುಧಾರಣೆಯ ಕುರಿತಂತೆ ಮಾಹಿತಿ, ಸಲಹೆ, ಅಹವಾಲು ಮತ್ತು ಸಂಚಾರ ಉಲ್ಲಂಘನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಳ್ಳುವ ದೃಷ್ಟಿಯಿಂದ “ಕುಡ್ಲ ಟ್ರಾಫಿಕ್’ ಎಂಬ ವಾಟ್ಸಪ್ ಗ್ರೂಪ್‌ನ್ನು ಈ ಹಿಂದೆ ಪ್ರಾರಂಭಿ ಸಿತ್ತು. ಅದರ ವಾಟ್ಸಪ್ ನಂಬರ್ 9480802312 ಆಗಿತ್ತು. ಇದೇ ಮೇ 18ರಿಂದ “ಕುಡ್ಲ ಟ್ರಾಫಿಕ್’ ವಾಟ್ಸಪ್ ಪ್ರತ್ಯೇಕ 9480802303 ನಂಬ್ರ ದಲ್ಲಿ ಚಾಲ್ತಿಯಲ್ಲಿರುತ್ತದೆ. ಸಾರ್ವ ಜನಿಕರು ಸಂಚಾರ ಸುವ್ಯವಸ್ಥೆಗೆ ಸಂಬಂಧಿ ಸಿದ ಮಾಹಿತಿ, ದೂರು, ಸಲಹೆ, ಅಹವಾಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮಾಹಿತಿ ಯನ್ನು ಫೋಟೊ ಸಮೇತ, ಸಂಚಾರ ಉಲ್ಲಂಘನೆ ಮಾಡಿದ ದಿನಾಂಕ, ಸಮಯ, ಸ್ಥಳದ ಮಾಹಿತಿ ಯೊಂದಿಗೆ ಈ ವಾಟ್ಸಪ್ ನಂಬರ್‌ಗೆ ಕಳುಹಿಸಿಕೊಡಬಹುದು ಎಂದರು.
ಚರ್ಚ್ ದಾಳಿ ವಿಡಿಯೋ ವೈರಲ್: ಕೇಸು ದಾಖಲು
ರಾಜ್ಯದಲ್ಲಿ ಚುನಾವಣ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಚರ್ಚ್ ದಾಳಿ ಪ್ರಕರಣಕ್ಕೆ ಸಂಬಂ ಧಿಸಿದ ಹಳೆ ವಿಡಿಯೋವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸ್ವಯಂ ದೂರು ದಾಖಲಿಸಲಾಗಿದೆ ಎಂದು ಕಮಿಷನರ್ ತಿಳಿಸಿದರು.
ಮದ್ರಾಸ್ ಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಂತೆ ವಾಟ್ಸಪ್ ಮೆಸೇಜ್‌ಗಳನ್ನು ಒಂದು ಗ್ರೂಪಿನಿಂದ ಮತ್ತೂಂದು ಗ್ರೂಪಿಗೆ ಫಾರ್ವರ್ಡ್ ಮಾಡುವುದು ಅಪರಾಧ. ಈ ವಿಷಯದಲ್ಲಿ ಎಲ್ಲರೂ ಸಾಮಾಜಿಕ ಜವಾಬ್ದಾರಿ ಅರಿಯಬೇಕಾಗಿದೆ. ಶಾಂತಿ ಕದಡುವ ಸಂದೇಶಗಳಿದ್ದರೆ ಪೊಲೀಸ್ ವಾಟ್ಸಪ್ ಗ್ರೂಪಿಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ವಿವರಿಸಿದರು.
ಕುಡ್ಲ ಟ್ರಾಫಿಕ್ ವಾಟ್ಸಪ್ ಗ್ರೂಪ್:
ನಂ. 9480802303 ನಗರದ ಟ್ರಾಫಿಕ್ ಸಂಬಂಧಿತ ದೂರು/ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕ ಸಿಟಿ ಟ್ರಾಫಿಕ್ ವಾಟ್ಸಪ್ ಗ್ರೂಪ್ ರಚಿಸಲಾಗಿದ್ದು, ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಅವರು ಇದಕ್ಕೆ ಚಾಲನೆ ನೀಡಿದರು. ಈ ವಾಟ್ಸಪ್ ಗ್ರೂಪ್ ನಂಬರ್‌ಗೆ ಮಾಹಿತಿ ಮತ್ತು ಸಲಹೆಗಳನ್ನು ಕಳುಹಿಸಬಹುದಾಗಿದೆ ಎಂದು ಕಮಿಷನರ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.