ಮಾಣಿ ಜಂಕ್ಷನ್‌ನಲ್ಲಿ ಬಸ್ ನಿಲ್ದಾಣವಿಲ್ಲ; ಸಂಕಷ್ಟದಲ್ಲಿ ಪ್ರಯಾಣಿಕರು
ಇಚ್ಛಾಶಕ್ತಿಯ ಕೊರತೆ , ಸ್ಥಳೀಯರ ಮನವಿಗೆ ಸ್ಪಂದನೆಯಿಲ್ಲ , ವಿದ್ಯಾರ್ಥಿಗಳು ಸಹಿತ ಪ್ರಯಾಣಿಕರಿಗೆ ರಸ್ತೆ ಬದಿಯೇ ಆಶ್ರಯ
Team Udayavani, Feb 2, 2020, 5:41 AM IST
ಕಲ್ಲಡ್ಕ: ರಾ.ಹೆ. ಹಾದು ಹೋಗುವ ಬಂಟ್ವಾಳ ತಾ|ನ ಮಾಣಿ ಜಂಕ್ಷನ್‌ನಲ್ಲಿ ಬಸ್ ನಿಲ್ದಾಣ ಕೊರತೆ ಇದೆ. ಮಾಣಿ ಜಂಕ್ಷನ್ ಉಪ್ಪಿನಂಗಡಿ-ಪುತ್ತೂರಿಗೆ ವಿಭಾಗ ವಾಗಿ ಹೋಗುವ ರಾ.ಹೆ.ಯ ಕೇಂದ್ರ ಸ್ಥಾನದಲ್ಲಿದ್ದು, ವಿದ್ಯಾರ್ಥಿಗಳ ಸಹಿತ ಸಾವಿರಾರು ಪ್ರಯಾಣಿಕರ ಅನುಕೂಲ ಕ್ಕಾಗಿ ಇಲ್ಲಿ ಬಸ್ ನಿಲ್ದಾಣ ಅಗತ್ಯವಾಗಿ ನಿರ್ಮಾಣವಾಗಬೇಕಾಗಿದೆ.
ಪ್ರಯಾಣಿಕರು ಇಲ್ಲಿ ರಸ್ತೆ ಬದಿಯಲ್ಲಿ ನಿಂತು ಬಸ್‌ಗಾಗಿ ಕಾಯುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಾಣಿಯಲ್ಲಿ ಸರಕಾರಿ ಪ್ರಾಥಮಿಕ, ಖಾಸಗಿ ಪ್ರೌಢಶಾಲೆ, ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಇದೆ. ಸಹಸ್ರಾರು ಸಂಖ್ಯೆಯಲ್ಲಿ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಖಾಸಗಿ ಅಥವಾ ಸರಕಾರಿ ಬಸ್ಸನ್ನೇ ಪ್ರಯಾಣಕ್ಕಾಗಿ ಬಳಸುತ್ತಾರೆ.
ಸ್ಥಳಾವಕಾಶ ಇಲ್ಲದ ಬಸ್ ಬೇ
ಮಾಣಿಯನ್ನು ಕೇಂದ್ರವಾಗಿಸಿ ಉಪ್ಪಿನಂ ಗಡಿ, ಪುತ್ತೂರು, ವಿಟ್ಲ, ಬಿ.ಸಿ. ರೋಡ್, ಮಂಗಳೂರು ನಗರಗಳಿಗೆ ರಾ.ಹೆ. ಹಾದು ಹೋಗುತ್ತದೆ. ಸೂಪರ್ ಎಕ್ಸ್‌ಪ್ರೆಸ್ ಹೊರತುಪಡಿಸಿ ಉಳಿದ ಎಲ್ಲ ಸರ ಕಾರಿ, ಖಾಸಗಿ ಬಸ್‌ಗಳಿಗೆ ಮಾಣಿ ಜಂಕ್ಷನ್‌ನಲ್ಲಿ ನಿಲುಗಡೆ ಇದೆ. ಆದರೆ ಇಲ್ಲೊಂದು ಸುರಕ್ಷಿತ ಪ್ರಯಾಣಿಕರ ತಂಗುದಾಣ, ಶೆಲ್ಟರ್ ಇಲ್ಲ. ಉಪ್ಪಿನಂಗಡಿಗೆ ಹೋಗುವ ಪ್ರಯಾಣಿಕರಿಗೆ ಮತ್ತು ಪುತ್ತೂರು ಕಡೆಗೆ ಹೋಗುವ ಪ್ರಯಾಣಿಕರಿ ಗಾಗಿ ಬಸ್ ಬೇ ಇದೆ. ಆದರೆ ಅದು ಸುರಕ್ಷಿತ ಕ್ರಮದಲ್ಲಿಲ್ಲ.
ಯೋಜನೆ ರೂಪಿಸಿಲ್ಲ
ಮಾಣಿಗೆ ಸುವ್ಯವಸ್ಥಿತ ಬಸ್ ನಿಲ್ದಾಣ ಬೇಕೆಂಬ ಪ್ರಸ್ತಾವನೆ ಇದುವರೆಗೆ ಮಾಡಲಾ ಗಿಲ್ಲ. ಯೋಜಿತವಾಗಿ ಸರಕಾರಕ್ಕೆ ಮನವಿ ಮಾಡುವ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಈ ಹಿಂದಿನ ಸಾರಿಗೆ ಸಚಿವ ಪಿ.ಜಿ.ಆರ್. ಸಿಂಧ್ಯಾ ಮಾಣಿಗೆ ಬಂದಿದ್ದಾಗ ಅವರಿಗೆ ಮನವಿ ನೀಡಲಾಗಿತ್ತು. ಆದರೂ ಪ್ರಯೋಜನ ವಾಗಿಲ್ಲ ಎಂಬುದು ಸ್ಥಳೀಯರ ಆರೋಪ.
ದಶಕದ ಹಿಂದೆ ಒಮ್ಮೆ ಕೆಎಸ್‌ಆರ್‌ಟಿಸಿ ತನ್ನ ಟಿ.ಸಿ. ಪಾಯಿಂಟ್ ಹಾಕಿತ್ತು. ಸುಮಾರು 4 ತಿಂಗಳ ಬಳಿಕ ಸಿಬಂದಿ ಕೊರತೆಯಿಂದ ಅದನ್ನು ತೆರವು ಮಾಡಲಾಗಿತ್ತು. ಈ ಸಂದರ್ಭ ಮಾಣಿಯಲ್ಲಿ ವೊಲ್ವೋ ಬಸ್‌ಗಳಿಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನೀಡಿದ್ದ ನಿಲುಗಡೆ ಅನುಮತಿ ಈಗಲೂ ಮುಂದುವರಿದಿದೆ.
ಬಹುಕಾಲದಿಂದ ಗ್ರಾ.ಪಂ. ವ್ಯವಸ್ಥೆ ನಮ್ಮಲ್ಲಿ ಜಮೀನಿಲ್ಲ ಎಂಬ ಪದವನ್ನು ಹೇಳಿಕೊಂಡು ಬರುತ್ತಿದೆ. ಜನಪ್ರತಿನಿಧಿ ಗಳು ಕೂಡಾ ಗಮನ ಹರಿಸುವಲ್ಲಿ ವಿಫಲ ರಾಗಿದ್ದಾರೆ ಎಂಬ ಆರೋಪವಿದೆ.
ಜಮೀನು ಇಲ್ಲ ಎಂಬ ಉತ್ತರ
ಮಾಣಿ ಪಂ.ನಲ್ಲಿ ವಿಚಾರಿಸಿದರೆ ಬಸ್ ನಿಲ್ದಾಣ ನಿರ್ಮಿಸಲು ಸಾಕಷ್ಟು ಜಮೀನು ನಮ್ಮಲ್ಲಿ ಇಲ್ಲ ಎನ್ನು ತ್ತಾರೆ. ರಾ.ಹೆ. ಚತುಷ್ಪಥ ನಿರ್ಮಾಣಕ್ಕೆ ಎಷ್ಟು ಜಮೀನು ಹೋಗುತ್ತದೆ ಎಂಬುದು ಗೊತ್ತಿಲ್ಲ.
ಗ್ರಾ.ಪಂ. ಸುಪರ್ದಿಯ ಜಮೀನು ಕೂಡಾ ಹೆದ್ದಾರಿ ನಿರ್ಮಾಣಕ್ಕೆ ಹೋಗುತ್ತದೆ. ಪ್ರಸ್ತುತ ಇರುವ ಬಸ್ ಬೇ ಕೂಡಾ ಹೆದ್ದಾರಿ ವಿಸ್ತರಣೆ ಸಂದರ್ಭ ಕೆಡವಿ ಹೋಗಲಿದೆ ಎಂದು ವಿವರ ನೀಡುತ್ತಾರೆ.
ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಸ.ನಂ. 157-1ಎಯಲ್ಲಿ ಕಾಯ್ದಿರಿಸಿದ 1.34 ಎಕ್ರೆ ಜಮೀನಿನಲ್ಲಿ ಸುಮಾರು 30 ಸೆಂಟ್ಸ್ ಸ್ಥಳದಲ್ಲಿ ಎಪಿಎಂಸಿ ಯಾರ್ಡ್ ನಿರ್ಮಿಸಲಾಗಿದೆ. ಉಳಿಕೆ ಜಮೀನು ಮುಕ್ತವಾಗಿದೆ. ಸರಕಾರಿ ಆಸ್ಪತ್ರೆಗೆ ಸ.ನಂ. 157-1ಬಿಪಿಯಲ್ಲಿ ಕಾಯ್ದಿರಿ ಸಿದ 1.17 ಎಕ್ರೆಯಲ್ಲಿ ಸುಮಾರು 20 ಸೆಂಟ್ಸ್ ಸ್ಥಳದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿಯೂ ಉಳಿಕೆ ಜಮೀನು ಮುಕ್ತವಾಗಿದೆ. ಇದಲ್ಲದೆ ಸ.ಪ್ರಾ. ಶಾಲೆಯ ಎದುರು 0.14 ಸೆಂಟ್ಸ್ ಜಮೀನು ಗ್ರಾ.ಪಂ. ಹೆಸರಿನಲ್ಲಿದೆ ಎಂದು ಸ್ಥಳೀಯರು ವಿವರ ನೀಡುತ್ತಾರೆ.
ಜನರ ಬೇಡಿಕೆ ಈಡೇರಿಸಲು ಪ್ರಯತ್ನ
ಮಾಣಿ ಗ್ರಾ.ಪಂ. ದೊಡ್ಡ ಮಟ್ಟದ ಆರ್ಥಿಕ ಸಾಮರ್ಥ್ಯ ಹೊಂದಿಲ್ಲ. ಸರಕಾರದ ಮಟ್ಟದಲ್ಲಿ ಅನುದಾನ ಬಳಸಿ ಯೋಗ್ಯ ಬಸ್ ನಿಲ್ದಾಣ ನಮ್ಮ ಆಡಳಿತದ ಕಾಲದಲ್ಲಿ ಆಗಬೇಕೆಂಬ ಅಪೇಕ್ಷೆ ಇತ್ತು. ಆದರೆ ವಿವಿಧ ಕಾರಣ ಗಳಿಂದ ಸಾಧ್ಯವಾಗಿಲ್ಲ. ಮುಂದಿನ ಸಭೆಯಲ್ಲಿ ಬಸ್ ನಿಲ್ದಾಣದ ಪ್ರಸ್ತಾವನೆ ಮಾಡುವ ಮೂಲಕ ಜನರ ಅಪೇಕ್ಷೆ ಈಡೇರಿಸು ಪ್ರಯತ್ನ ನಡೆಸಲಾಗುವುದು.
– ಮಮತಾ ಎಸ್. ಶೆಟ್ಟಿ ,ಅಧ್ಯಕ್ಷರು,ಮಾಣಿ ಗ್ರಾ.ಪಂ.
ಪ್ರಸ್ತಾವನೆಗೆ ಕ್ರಮ
ಮಾಣಿ ಗ್ರಾಮ ರಾ.ಹೆ. ಹಾದು ಹೋಗುವ ಜಂಕ್ಷನ್ ಆಗಿದ್ದರೂ ಇಲ್ಲಿ ಸುಸಜ್ಜಿತ ಬಸ್ ನಿಲ್ದಾಣ ರಚಿಸುವ ಬಗ್ಗೆ ಚಿಂತನೆ ಆಗಿರಲಿಲ್ಲ. ಪ್ರಸ್ತುತ ಹೆದ್ದಾರಿ ವಿಸ್ತರಣೆಗೆ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಭವಿಷ್ಯದಲ್ಲಿ ಹೆದ್ದಾರಿ ಬದಿಯ ಗ್ರಾ.ಪಂ. ಜಮೀನಿನಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಸೂಕ್ತ ಸ್ಥಳವನ್ನು ಗುರುತಿಸಿ ವಾಣಿಜ್ಯ ಉದ್ದೇಶಿತ ಕ್ರಮದಲ್ಲಿ ನಿರ್ಮಿಸಲು ಪ್ರಸ್ತಾವನೆ ಮಾಡಲಾಗುವುದು.
– ನಾರಾಯಣ ಗಟ್ಟಿ
ಪಿಡಿಒ, ಮಾಣಿ ಗ್ರಾ.ಪಂ.
– ರಾಜಾ ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady: ಶಂಕಿತ ಲವ್‌ಜೆಹಾದ್: ಬೀದಿಯಲ್ಲೇ ಪತಿಗೆ ಹಲ್ಲೆ!
Kadaba: ಹಳೆಸ್ಟೇಶನ್ ಬಳಿಯ ಬಂಕ್‌ನಲ್ಲಿ ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಿ ಪರಾರಿ!
Bantwala: ಬ್ರಹ್ಮರಕೂಟ್ಲು ಟೋಲ್: ಜಗಳದ ವೀಡಿಯೋ ವೈರಲ್
Missing: ಸುಳ್ಯದಿಂದ ಬೆಂಗಳೂರಿಗೆ ತೆರಳಿದ್ದ ಯುವಕ ನಾಪತ್ತೆ
Belthangady: ಕಾಜೂರು ದರ್ಗಾ ಶರೀಫ್‌ನಲ್ಲಿ ಜ.24ರಿಂದ ಫೆ.2ವರೆಗೆ ಉರೂಸ್ ಸಂಭ್ರಮ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್