ಮೀನಿನಲ್ಲಿ ರಾಸಾಯನಿಕ ಅಂಶ ಪತ್ತೆಯಾಗಿಲ್ಲ
Team Udayavani, Jul 7, 2018, 2:12 PM IST
ಮಂಗಳೂರು: ಮೀನಿನಲ್ಲಿ ವಿಷಕಾರಿ ರಾಸಾಯನಿಕ ಅಂಶ ಸೇರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವ ಮೀನುಗಳನ್ನು ಕೇರಳದ ಕೇಂದ್ರ ಮೀನುಗಾರಿಕಾ ಸಂಸ್ಥೆಯ ಕಿಟ್‌ನ ಮೂಲಕ ಶುಕ್ರವಾರ ಪರಿಶೀಲಿಸಲಾಯಿತು. ಆದರೆ ಮೀನಿನಲ್ಲಿ ಯಾವುದೇ ರಾಸಾಯನಿಕ ಅಂಶ ಪತ್ತೆಯಾಗಿಲ್ಲ ಎಂದು ಮೀನುಗಾರಿಕಾ ಇಲಾಖೆಯ ಮೂಲಗಳು ತಿಳಿಸಿವೆ.
ಮೀನಿನಲ್ಲಿ ರಾಸಾಯನಿಕ ಪದಾರ್ಥಗಳನ್ನು ಸೇರಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇದನ್ನು ಪತ್ತೆಹಚ್ಚುವ ಕಾರಣದಿಂದ ರಾಸಾಯನಿಕ ಪದಾರ್ಥ ಪತ್ತೆ ಹಚ್ಚುವ ಕಿಟ್ ಅನ್ನು ಕೇರಳದ ಕೊಚ್ಚಿನ್‌ನಲ್ಲಿರುವ ಕೇಂದ್ರ ಮೀನುಗಾರಿಕೆ ತಂತ್ರಜ್ಞಾನಸಂಸ್ಥೆಯಿಂದ ಗುರುವಾರ ಮೀನುಗಾರಿಕೆ ಇಲಾಖೆಯು ತರಿಸಿತ್ತು. ಶುಕ್ರ
ವಾರ ಕಿಟ್ ಮೂಲಕ ಅಧಿಕಾರಿಗಳು ಮಂಗಳೂರಿನ ಬಂದರಿನ ಮೀನು ಮಾರಾಟ ಮಾಡುವ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.ರಾಸಾಯನಿಕ ಅಂಶ ಪತ್ತೆಯಾಗಿಲ್ಲದ ಹಿನ್ನೆಲೆಯಲ್ಲಿ, ಪರಿಶೀಲನೆ ನಡೆಸಿದ ಬಳಿಕ ಕಿಟ್ ಅನ್ನು ಆಹಾರ ಸುರಕ್ಷತಾ ಇಲಾಖೆಗೆ ಹಸ್ತಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿ ಆಹಾರ ಸುರಕ್ಷತಾಇಲಾಖೆಯಲ್ಲಿ ಈ ಕಿಟ್ ಇರಲಿದೆ.
ಉಡುಪಿ, ಕಾರವಾರಕ್ಕೂ ಕಿಟ್
ಕೇಂದ್ರ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆಯಿಂದ ತರಿಸಲಾದ ಕೊಚ್ಚಿನ್ ಕಿಟ್ ಅನ್ನು ಉಡುಪಿ ಹಾಗೂ ಕಾರವಾ
ರಕ್ಕೂ ಪ್ರತ್ಯೇಕವಾಗಿ ತರಿಸಲಾಗಿದೆ. ಸದ್ಯ ಮಂಗಳೂರಿನಲ್ಲಿ ಇಟ್ಟಿರುವ ಕಿಟ್ ಅನ್ನು ಶನಿವಾರ ಉಡುಪಿ ಹಾಗೂ ಕಾರವಾರಕ್ಕೆ ತಲುಪಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.