ಇಲ್ಲಿನ ಒಂದು ಕುಟುಂಬಕ್ಕೂ ಇಲ್ಲ ಹಕ್ಕುಪತ್ರ

ನೂತನ ವಾರ್ಡ್‌ -19: ಮಿಲಿಟ್ರಿ ಗ್ರೌಂಡ್‌ನ‌ ಮತದಾರರ ಕಥೆ-ವ್ಯಥೆ

Team Udayavani, May 17, 2019, 6:00 AM IST

24

ನೂತನ ವಾರ್ಡ್‌ 19ರ ಮಿಲಿಟ್ರಿ ಗ್ರೌಂಡ್‌ ಪ್ರದೇಶದಲ್ಲಿನ ಹಕ್ಕುಪತ್ರವಿಲ್ಲದ ಮನೆಗಳ ನೋಟ.

ಸುಳ್ಯ: ಈ ಬಾರಿ ಹೊಸ ದಾಗಿ ರೂಪುಗೊಂಡ ಮಿಲಿಟ್ರಿ ಗ್ರೌಂಡ್‌ ವಾರ್ಡ್‌ನಲ್ಲಿ ಹಕ್ಕು ಚಲಾಯಿಸುವರಲ್ಲಿ ವಾಸ ಸ್ಥಳಕ್ಕೆ ಹಕ್ಕುಪತ್ರ ಹೊಂದಿಲ್ಲದ 236 ಕುಟುಂಬಗಳು ಸೇರಿವೆ.
19ನೇ ವಾರ್ಡ್‌ ಆಗಿ ರಚನೆಗೊಂಡರುವ ಮಿಲಿಟ್ರಿ ಗ್ರೌಂಡ್‌ಗೆ ಚರಂಡಿ, ರಸ್ತೆ ಸಮಸ್ಯೆಗಿಂತ ವಾಸಸ್ಥಳಕ್ಕೆ ಹಕ್ಕಿಲ್ಲದ್ದೆ ಚಿಂತೆಯಾಗಿದೆ. ಹೊಸ ವಾರ್ಡ್‌ ರೂಪುಗೊಂಡ ತರಹ, ಹೊಸದಾಗಿ ಹಕ್ಕುಪತ್ರ ಕೈ ಸೇರಬೇಕು ಎನ್ನುವ ಬೇಡಿಕೆ ಕೂಡ ಇಲ್ಲಿನವರದ್ದು.

ಸೌಲಭ್ಯವೂ ಸಿಗುತ್ತಿಲ್ಲ
ಇಲ್ಲಿನ 236 ಮನೆಗಳಲ್ಲಿ ನವರು ವಾಸಿಸುತ್ತಿರುವ ಈ ಪ್ರದೇಶ ದೇಶದ ರಕ್ಷಣಾ ಇಲಾಖೆಯ ಮಿಲಿಟರಿ ಚಟು ವಟಿಕೆಗೆ ಕಾದಿರಿಸಿದ ಸ್ಥಳ ಎಂದು ಕಂದಾಯ ಇಲಾಖೆಯ ದಾಖಲೆಯೊಂದು ಹಕ್ಕುಪತ್ರ ಸಿಗುವಲ್ಲಿನ ಅಡ್ಡಿಗೆ ಕಾರಣವಾಗಿದೆ. ಹಕ್ಕುಪತ್ರಕ್ಕೆ ಹೋರಾಟ ಸಾಗಿದೆ. ಜನಪ್ರತಿ ನಿಧಿಗಳಿಂದ ಹಿಡಿದು ಉನ್ನತ ಅಧಿಕಾರಿಗಳ ತನಕ ಸಾಲು ಸಾಲು ಪತ್ರ ಸಲ್ಲಿಕೆ, ಭೇಟಿ ಯಾಗಿ ಚರ್ಚೆಯೂ ಆಗಿದೆ.

ಜಯನಗರ ವ್ಯಾಪ್ತಿಯ ಮಿಲಿಟ್ರಿ ಗ್ರೌಂಡ್‌ನ‌ಲ್ಲಿ ಮನೆ ಕಟ್ಟಿರುವ 236 ಕುಟುಂಬಗಳಿಗೆ ಮನೆ ನಂಬರ್‌, ಪಡಿತರ ಸೌಲಭ್ಯ, ಆಧಾರ್‌ ಕಾರ್ಡ್‌ ಸೌಲಭ್ಯಗಳಿವೆ. ಇವರು ನ.ಪಂ.ಗೆ ಮನೆ, ನೀರಿನ ತೆರಿಗೆ ಕಟ್ಟುತ್ತಾರೆ. ನಿವೇಶನ ಸ್ಥಳಕ್ಕೆ ದಾಖಲೆ ಮಾತ್ರ ಇಲ್ಲ. ಇದರಿಂದ ವಸತಿ ಸಹಾಯಧನ, ಸಾಲ ಸೌಲಭ್ಯ, ಪ್ರಮಾಣ ಪತ್ರ ಇತ್ಯಾದಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲಿ 40-50 ವರ್ಷಗಳಿಂದ ನೆಲೆಸಿದವರು, ಜಾಗ ಖರೀದಿಸಿ ಮನೆ ಕಟ್ಟಿದವರೂ ಇದ್ದಾರೆ. ಇಲ್ಲಿ ಸುಮಾರು 650ಕ್ಕೂ ಅಧಿಕ ಜನಸಂಖ್ಯೆ ಇಲ್ಲಿದೆ.

40 ವರ್ಷದ ಬೇಡಿಕೆ ಇದಾಗಿದ್ದರೂ, ಕಳೆದ ಐದು ವರ್ಷದಿಂದ ಹೋರಾಟ ವೇಗ ಪಡೆದಿದೆ. ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗೆ ಪತ್ರ ಬರೆದ ಪರಿಣಾಮ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರು ಸೂಕ್ತ ವರದಿ ಕೋರಿದ್ದರು.
ಅದರಂತೆ ಮುಖ್ಯ ಕಾರ್ಯದರ್ಶಿಯವರು ಜಿಲ್ಲಾಧಿ ಕಾರಿಗಳು, ಸಹಾಯಕ ಕಮಿಷನರ್‌ ಅವರ ಮುಖಾಂತರ ತಹಶೀಲ್ದಾರ್‌ ಅವರಿಗೆ ವರದಿ ಸಲ್ಲಿಸಲು ಸೂಚಿಸಿ ಆ ಪ್ರಕ್ರಿಯೆ ನಡೆದಿದೆ. ತಾಲೂಕು ಕಂದಾಯ ಇಲಾಖೆ ಸ್ವಾಧೀನದಲ್ಲಿರುವ ಮನೆ ನಿವೇಶನದ ವಿಸ್ತೀರ್ಣ ಸರ್ವೆ ಕಾರ್ಯ ಪೂರ್ಣಗೊಂಡಿದೆ.

ಪ್ರಸ್ತುತ ರಕ್ಷಣಾ ಇಲಾಖೆ ಕೂಡ ಹಕ್ಕುಪತ್ರ ನೀಡಲು ಅಡ್ಡಿ ಮಾಡಿಲ್ಲ. ಹಾಗಾಗಿ ಸದ್ಯದಲ್ಲೇ ಹಕ್ಕುಪತ್ರ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ ಹೋರಾಟದ ನೇತೃತ್ವ ವಹಿಸಿರುವ ಜಗನ್ನಾಥ ಜಿ.ಸಮಸ್ಯೆಗಳಿವೆ ಉಳಿದಂತೆ ವಾರ್ಡ್‌ನಲ್ಲಿ ಕುಡಿಯುವ ನೀರು, ಚರಂಡಿ, ರಸ್ತೆ ಮೊದಲಾದ ಸಮಸ್ಯೆಗಳು ಎಲ್ಲ ವಾರ್ಡ್‌ಗಳಂತೆ ಇಲ್ಲಿಯೂ ಇವೆ.  ಹಕ್ಕುಪತ್ರ ಸಿಕ್ಕರೆ ಸರಕಾರದ ಸಹಾಯಧನ ಪಡೆದು ಹೊಸ ಮನೆ ಕಟ್ಟುವ ಬಯಕೆ ಅಲ್ಲಿನ ಜನರದ್ದು.

ಏನಿದು ಮಿಲಿಟ್ರಿ ಗ್ರೌಂಡ್‌?
1939ರಲ್ಲಿ ಬ್ರಿಟಿಷ್‌ ಆಡಳಿತ ಕಾಲದಲ್ಲಿ ಮಿಲಿಟರಿ ಉದ್ದೇಶಕ್ಕಾಗಿ ಜಯನಗರದಲ್ಲಿ 76 ಎಕ್ರೆ ಸ್ಥಳ ಮೀಸಲಿರಿಸಲಾಗಿತ್ತು. ಆದರೆ ಆ ಜಾಗದಲ್ಲಿ ಸ್ವಾತಂತ್ರ್ಯ ಪೂರ್ವ ಅಥವಾ ಅನಂತರದಲ್ಲಾಗಲಿ ಮಿಲಿಟರಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆ ನಡೆದಿರುವ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲ ಎನ್ನುತ್ತಾರೆ ಸ್ಥಳೀಯರು. ಕಂದಾಯ ಇಲಾಖೆ ದಾಖಲೆಯಲ್ಲಿ ಮಿಲಿಟರಿ ಗ್ರೌಂಡ್‌ ಎನ್ನುವ ಕೈ ಬರೆಹದ ಪತ್ರ ಇದೆ. ಇದು ಮಿಲಿಟರಿ ಚಟುವಟಿಕೆಗೆ ಕಾದಿರಿಸಿರುವುದಕ್ಕೆ ಇರುವ ಏಕೈಕ ಆಧಾರವಷ್ಟೆ. ಈಗಿನ ಪಹಣಿಯಲ್ಲಿ ದಾಖಲಾತಿ 38.61 ಎಕ್ರೆ ಎಂದಿದೆ. 1939ರಲ್ಲಿ 76 ಎಕ್ರೆ ಮಿಲಿಟರಿ ಗ್ರೌಂಡ್‌ ಎಂದು ದಾಖಲೆಗಳಿತ್ತು. 1994-95ರಲ್ಲಿ ನಡೆಸಿದ ಸರ್ವೆ ಪ್ರಕಾರ 43 ಎಕ್ರೆ ಜಾಗವಿರುವುದಾಗಿ ದಾಖಲೆಗಳು ಹೇಳುತ್ತವೆ. ಅದರಲ್ಲಿ ಕಟ್ಟಡ, ದಾರಿ, ರಸ್ತೆ 16 ಎಕ್ರೆ. ಮನೆ ನಿವೇಶನ 11 ಎಕ್ರೆ, ಹೌಸಿಂಗ್‌ ಕಾರ್ಪೊರೇಶನ್‌ 2 ಎಕ್ರೆ, ಬಂಜರು ಬೆಟ್ಟ ಪ್ರದೇಶ 5.60 ಎಕ್ರೆ ಇದೆ. ಇತ್ತೀಚೆಗೆ ಮಾಡಿದ ಸರ್ವೆ ಪ್ರಕಾರ ಒಟ್ಟು 38.61 ಎಕ್ರೆ ಸ್ಥಳ ಕಂಡು ಬಂದಿದೆ.

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

‌Punjab ಪೊಲೀಸರ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

Tollywood: ‘ಗೇಮ್‌ ಚೇಂಜರ್‌ʼಗೆ ರಾಮ್‌ಚರಣ್‌ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.