ತುತ್ತೂ ಇಲ್ಲ, ತುತ್ತಿಗಾಗಿನ ಕೂಲಿಯೂ ಇಲ್ಲ 


Team Udayavani, Sep 4, 2017, 7:40 AM IST

ration.jpg

ಪುತ್ತೂರು: ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ 225 ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ಆಧಾರಿತ ವ್ಯವಸ್ಥೆ ಜಾರಿಯಾಗಿಲ್ಲ. ಪರಿಣಾಮ ಕೆಲವು ತಾಲೂಕಿನ ಫಲಾನುಭವಿಗಳು ಪಡಿತರ ಸಾಮಗ್ರಿ ಪಡೆಯಲು ಕೂಪನ್‌ಗಾಗಿ ಐದಾರು ಕಿ.ಮೀ. ದೂರದ ಗ್ರಾ.ಪಂ.ಗಳಿಗೆ ಅಲೆದಾಡಬೇಕಿದೆ. ಕೆಲವೊಮ್ಮೆ ಇಡೀ ದಿನ ಅಲೆದಾಡಿದರೂ ಪಡಿತರ ಸಿಗದು. ಒಂದು ಬದಿಯಲ್ಲಿ ತುತ್ತೂ (ಊಟದ ಅಕ್ಕಿ) ಸಿಗದು, ಇನ್ನೊಂದು ಬದಿಯಲ್ಲಿ ತುತ್ತಿಗಾಗಿನ ಕೂಲಿಯೂ ಇಲ್ಲದಂತಾಗುತ್ತಿದೆ.

ಇಂಟರ್‌ನೆಟ್‌ ಸೌಲಭ್ಯ ಇಲ್ಲದ ಪಡಿತರ ಅಂಗಡಿಗಳಲ್ಲಿ ಮ್ಯಾನುವಲ್‌ ನಿಯಮದಡಿ ಪಡಿತರ ಸಾಮಗ್ರಿ ವಿತರಿಸುತ್ತೇವೆ ಎಂದಿದ್ದರೂ ವಾಸ್ತವ ಸ್ಥಿತಿ ಹಾಗಿಲ್ಲ. ದ.ಕ. ಜಿಲ್ಲೆಯ ಸುಳ್ಯ, ಪುತ್ತೂರು ಸಹಿತ ಕೆಲವು ತಾಲೂಕುಗಳಲ್ಲಿ ಬಯೋಮೆಟ್ರಿಕ್‌ ಆಧಾರಿತ ಪಾಯಿಂಟ್‌ ಆಫ್‌ ಸೇಲ್‌ ಯಂತ್ರ ಅಳವಡಿಸಿಲ್ಲದ ಕಾರಣದಿಂದ ಫಲಾನುಭವಿಗಳು ಕೂಪನ್‌ಗಾಗಿ ಪಂಚಾಯತ್‌ ಸುತ್ತುತ್ತಿದ್ದಾರೆ. ಹಾಗಾಗಿ ಫಲಾನುಭವಿಯು ಪಡಿತರ ವಸ್ತುಗಳಿಗೆ ತೆರುವ ಹಣಕ್ಕಿಂತ ದುಪ್ಪಟ್ಟು ಹಣವನ್ನು ಸುತ್ತಾಟಕ್ಕೆ ವ್ಯಯಿಸಬೇಕಿದೆ.

ಪಾಯಿಂಟ್‌ ಆಫ್‌ ಸೇಲ್‌ 
ಪಡಿತರ ಸಾಮಗ್ರಿ ಪಡೆಯುವ ಅರ್ಹ ಕುಟುಂಬಕ್ಕೆ ಸಮರ್ಪಕವಾಗಿ ಸೌಲಭ್ಯ ದೊರೆಯ ಬೇಕು ಎಂಬ ಉದ್ದೇಶದಿಂದ ಸರಕಾರ ಈ ಹಿಂದೆ ಕೂಪನ್‌ ವ್ಯವಸ್ಥೆ ಜಾರಿಗೊಳಿಸಿತ್ತು. ಅನಂತರ ಅದನ್ನು ರದ್ದುಗೊಳಿಸಿ ಪಾಯಿಂಟ್‌ ಆಫ್‌ ಸೇಲ್‌ ಯಂತ್ರವನ್ನು ಪ್ರತಿ ನ್ಯಾಯಬೆಲೆ ಅಂಗಡಿ ಯಲ್ಲಿ ಅಳವಡಿಸಲು ಆದೇಶಿಸಿತ್ತು. ಫಲಾನು ಭವಿ ಪಡಿತರ ಸಾಮಗ್ರಿ ಪಡೆಯುವ ಮೊದಲು ಇಂಟರ್‌ನೆಟ್‌ ವ್ಯವಸ್ಥೆ ಆಧಾರಿತ ಬಯೋ ಮೆಟ್ರಿಕ್‌ ಆಧಾರಿತ ಯಂತ್ರದಲ್ಲಿ ಬೆರಳಚ್ಚು ದಾಖ ಲಿಸಬೇಕು. ರೇಷನ್‌ ಕಾರ್ಡ್‌ ಸಂಖ್ಯೆ ದಾಖಲಿಸಿದ ಸಂದರ್ಭ, ಆ ಕುಟುಂಬದ ಪೂರ್ತಿ ವಿವರ ಆನ್‌ಲೈನ್‌ ಮೂಲಕ ಪ್ರಕಟಗೊಳ್ಳುತ್ತದೆ. ಅನಂತರ ಫಲಾನುಭವಿಗೆ ಸಾಮಗ್ರಿ ದೊರೆಯುತ್ತದೆ.

ಕೈ ಕೊಡುವ ಇಂಟರ್‌ನೆಟ್‌!
ಪಾಯಿಂಟ್‌ ಆಫ್‌ ಸೇಲ್‌ ಯಂತ್ರಕ್ಕೆ ಇಂಟರ್‌ನೆಟ್‌, ಕಂಪ್ಯೂಟರ್‌ ಸೌಲಭ್ಯ ಅಗತ್ಯವಿದೆ. ಆದರೆ ಗ್ರಾಮಾಂತರ ಪ್ರದೇಶದ ಪಡಿತರ ವಿತರಣ ಕೇಂದ್ರಗಳಲ್ಲಿ ಸೌಲಭ್ಯದ ಕೊರತೆ ಇದೆ. ಇರುವೆಡೆ ಸರ್ವರ್‌ ಕೈ ಕೊಡುತ್ತಿದೆ. ಈ ಹಿಂದೆ ಮ್ಯಾನುವಲ್‌ ನಿಯಮ ಇದ್ದ ಸಂದರ್ಭ ಫಲಾನು ಭವಿ ಕಾಯುವ ಸ್ಥಿತಿ ಇರಲಿಲ್ಲ. ಈ ಡಿಜಿಟಲ್‌ ವ್ಯವಸ್ಥೆಯಲ್ಲಿ ತಾಸುಗಟ್ಟಲೆ ಅಂಗಡಿ ಮುಂದೆ ಕೂರಬೇಕಿದೆ. ಇಂಟರ್‌ನೆಟ್‌ ಕೈ ಕೊಟ್ಟರೆ ಅತ್ತ ಸಿಬಂದಿಗೂ ತಲೆನೋವು. 

ದಿನವಿಡೀ ಅಲೆದಾಟ
ಪಡಿತರ ಸೌಲಭ್ಯ ವಿತರಣೆಗೆ ಸಂಬಂಧಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಎರಡು ಅವಕಾಶ ನೀಡಿದೆ ಅನ್ನುತ್ತಾರೆ ಅಧಿ ಕಾರಿ ಗಳು. ಒಂದೋ ಬಯೋಮೆಟ್ರಿಕ್‌ವ್ಯವಸ್ಥೆ ಅಳ ವಡಿಸುವುದು. ಇಲ್ಲದಿದ್ದರೆ ಆಗುವ ತನಕ ಕೂಪನ್‌ ಮೂಲಕ ಸಾಮಗ್ರಿ ವಿತರಿಸುವುದಾಗಿದೆ. 

ಇಂಟರ್‌ನೆಟ್‌, ಕಂಪ್ಯೂಟರ್‌ ಸೌಲಭ್ಯ ಇಲ್ಲದ ಪಡಿತರ ಅಂಗಡಿಗಳಲ್ಲಿ ಪಾಯಿಂಟ್‌ ಆಫ್‌ ಸೇಲ್‌ ಯಂತ್ರ ಅಳವಡಿಸುವಂತಿಲ್ಲ. ಈ ವ್ಯಾಪ್ತಿಯ ಫಲಾನುಭವಿಗಳು ಸ್ಥಳೀಯ ಗ್ರಾಮ ಪಂಚಾಯತ್‌ನಿಂದ ಕೂಪನ್‌ ಪಡೆದುಕೊಳ್ಳಬೇಕಿದೆ. ಇದು ಫಲಾನುಭವಿಗೆ ನುಂಗಲಾರದ ತುತ್ತಾಗಿದೆ. 

ಪಂಚಾಯತ್‌ ಗೋಳು
ಒಂದೆಡೆ ಪಡಿತರ ಅಂಗಡಿಗಳಲ್ಲಿ ಇಂಟರ್‌ ನೆಟ್‌, ಕಂಪ್ಯೂಟರ್‌ ಸಮಸ್ಯೆ ಇದ್ದರೆ, ಇನ್ನೊಂದೆಡೆ ಗ್ರಾ.ಪಂ.ನಲ್ಲಿ ವ್ಯವಸ್ಥೆ ಇದ್ದರೂ ಅದು ಸಮರ್ಪಕ ವಾಗಿರದ ಸ್ಥಿತಿಯಿದೆ. ಸರಕಾರ ಪ್ರತಿ ಪಂಚಾ ಯತ್‌ ನಲ್ಲಿ ಬಾಪೂಜಿ ಕೇಂದ್ರ ಸ್ಥಾಪಿಸಿ ನೂರು ಸೌಲಭ್ಯ ನೀಡುವ ಯೋಜನೆ ರೂಪಿ ಸಿದ್ದರೂ ಪೂರಕ ಸಿಬಂದಿ, ವ್ಯವಸ್ಥೆ ಇಲ್ಲದೆ ಹೆಣಗಾಡು ತ್ತಿದೆ. ಇಲ್ಲಿ ಪದೇ ಪದೇ ಕೈಕೊಡುವ ಸರ್ವರ್‌, ಸಿಬಂದಿ ಕೊರತೆಗೆ ಮುಕ್ತಿ ಸಿಕ್ಕಿಲ್ಲ. ಹಾಗಾಗಿ ಕೂಪನ್‌ ವಿತರಣೆಯೇ ಪಂಚಾಯತ್‌ಗೆ ಹೊರೆ ಆಗಿ ಪರಿಣಮಿಸಿದೆ ಅನ್ನುತ್ತದೆ ಸದ್ಯದ ಚಿತ್ರಣ.

ಖರ್ಚು ದುಪ್ಪಟ್ಟು
ಪಂಚಾಯತ್‌ಗೆ ತೆರಳಿ, ಅಲ್ಲಿ  ಕೂಪನ್‌ಗೆ ಕಾಯಬೇಕು. ನಾವು  ಕೂಪನ್‌ಗೆ ಹೋದಾಗ ಇಂಟರ್‌ನೆಟ್‌ ಕೈಕೊಟ್ಟರೆ ಮರುದಿನ ಹೋಗ ಬೇಕು. ಕೂಪನ್‌ ಬಗ್ಗೆ ಮಾಹಿತಿ ಇಲ್ಲದ ಫಲಾನುಭವಿ ನೇರವಾಗಿ ಪಡಿತರ ಅಂಗಡಿಗೆ ಹೋದರೆ ಬರಿಗೈಯಲ್ಲೇ ಬರಬೇಕಿದೆ. ಕೂಪನ್‌ ಎಲ್ಲಿ  ಸಿಗುತ್ತದೆ, ಯಾರು ಕೊಡುತ್ತಾರೆ ಎಂಬ ಸಂಪೂರ್ಣ ಮಾಹಿತಿ ಕೂಡ ಸಿಗುತ್ತಿಲ್ಲ. ಕೆಲವು ಪಂಚಾಯತ್‌ಗಳಿಗೆ ಸರಿಯಾದ ಸಂಚಾರ ವ್ಯವಸ್ಥೆಯೂ ಇಲ್ಲ. ಬಾಡಿಗೆ ವಾಹನದಲ್ಲಿ ಕೂಪನ್‌ಗಾಗಿ ಗ್ರಾ.ಪಂ.ಗೆ ತೆರಳಬೇಕಿದೆ. ನೆಟ್‌ವರ್ಕ್‌ ಕೈ ಕೊಟ್ಟರೆ ಮೂರು ನಾಲ್ಕು ಬಾರಿ ಪಂಚಾಯತ್‌ಗೆ ಅಲೆದಾಡಬೇಕು. ಇಲ್ಲಿ ಪಡಿತರ ಸಾಮಗ್ರಿ ಕೊಳ್ಳಲು ಪಾವತಿಸುವ ಮೊತ್ತಕ್ಕಿಂತ ಎರಡು ಮೂರು ಪಟ್ಟು ಹೆಚ್ಚು ಹಣ ಸುತ್ತಾಟಕ್ಕೆ ಖರ್ಚಾಗುತ್ತದೆ ಎಂದು ಪಡಿತರ ಚೀಟಿದಾರರು ದೂರುತ್ತಿದ್ದಾರೆ.

ಮೂರು ಲಕ್ಷ  ಪಡಿತರ ಚೀಟಿದಾರರು
ಉಭಯ ಜಿಲ್ಲೆಗಳಲ್ಲಿ ಒಟ್ಟು 768 ಪಡಿತರ ಅಂಗಡಿಗಳಿವೆ. 3 ಲಕ್ಷಕ್ಕೂ ಮಿಕ್ಕಿ ಪಡಿತರ ಚೀಟಿದಾರರು ಇದ್ದಾರೆ. ದ.ಕ. ಜಿಲ್ಲೆಯಲ್ಲಿ 107 ಪಡಿತರ ಅಂಗಡಿಗಳಲ್ಲಿ ಬಯೋಮೆಟ್ರಿಕ್‌ ಆಧಾರಿತ ವ್ಯವಸ್ಥೆ ಇಲ್ಲ. ಸುಳ್ಯದಲ್ಲಿ 28, ಬೆಳ್ತಂಗಡಿ-27, ಪುತ್ತೂರು 39, ಬಂಟ್ವಾಳ-9, ಮಂಗಳೂರು 7 ಕಡೆಗಳಲ್ಲಿ ಅಳವಡಿಕೆ ಆಗಬೇಕಿದೆ. ಉಡುಪಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ 295 ಕೇಂದ್ರಗಳಲ್ಲಿ 120ರಲ್ಲಿ ಅಳವಡಿಕೆಗೆ ಬಾಕಿ ಇದೆ. ಕಾರ್ಕಳದಲ್ಲಿ 40, ಕುಂದಾಪುರದಲ್ಲಿ 82, ಉಡುಪಿಯಲ್ಲಿ 54 ಪಡಿತರ ಅಂಗಡಿಗಳಲ್ಲಿ ಬಯೋಮೆಟ್ರಕ್‌ ಅಳವಡಿಸಿಲ್ಲ. ಈ ಜಿಲ್ಲೆಯ ಅಧಿಕಾರಿ ನೀಡಿದ ಮಾಹಿತಿ ಅನ್ವಯ, ಉಡುಪಿ ಜಿಲ್ಲೆಯಲ್ಲಿ ಹಳೆ ದರ ಪಟ್ಟಿ ಅನ್ವಯ ಆಹಾರ ಸಾಮಗ್ರಿ ವಿತರಿಸಲಾಗುತ್ತಿದ್ದು, ಕೂಪನ್‌ ವ್ಯವಸ್ಥೆ ಜಾರಿ ಮಾಡಿಲ್ಲ  ಎಂದಿದ್ದಾರೆ.

- ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ

Congress-Symbol

CLP Meeting: ಜ.13ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Court-1

Puttur: ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಖುಲಾಸೆ

Alankaru: ಮನೆಯಲ್ಲಿ ಬೆಂಕಿ ದುರಂತ: ಎಲ್ಲ ವಸ್ತುಗಳು ಸುಟ್ಟು ಕರಕಲು

Alankaru: ಮನೆಯಲ್ಲಿ ಬೆಂಕಿ ದುರಂತ: ಎಲ್ಲ ವಸ್ತುಗಳು ಸುಟ್ಟು ಕರಕಲು

2(1

Sullia: ಜಾಕ್‌ವೆಲ್‌ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್‌

1(1

Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

courts

Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.