ಕೊರೊನಾ ಆತಂಕ: ದಕ್ಷಿಣ ಕನ್ನಡ ಜಿಲ್ಲಾಡಳಿತಗಳಿಂದ ಮುನ್ನೆಚ್ಚರಿಕೆ ಕ್ರಮ
ನೋ ಮಾಸ್ಕ್ ನೋ ಎಂಟ್ರಿ
Team Udayavani, Dec 30, 2022, 7:20 AM IST
ಮಂಗಳೂರು : ಕೊರೊನಾ ಆತಂಕ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ಹೊಸ ವರ್ಷಾಚರಣೆ ಹಾಗೂ ವಿವಿಧ ಸಮಾರಂಭಗಳ ಸಂದರ್ಭ ಸೂಕ್ತ ನಿಯಮಾವಳಿ ಪಾಲಿಸುವಂತೆ ಸೂಚಿಸಿದೆ. ವಿಮಾನದಲ್ಲಿ ಬರುವ ಪ್ರಯಾಣಿಕರ ಬಗ್ಗೆಯೂ ನಿಗಾ ವಹಿಸಲು ತೀರ್ಮಾನಿಸಿದೆ.
ವಿದೇಶಗಳಿಂದ ವಿಮಾನದಲ್ಲಿ ಆಗಮಿಸಿದ ಬಳಿಕ ಆರ್‌ಟಿಪಿಸಿಆರ್ ಮಾದರಿ ಪರೀಕ್ಷೆ ಮಾಡಿಸಿಕೊಂಡ ಬಳಿಕವೇ ನಿಲ್ದಾಣದಿಂದ ಹೊರಡಬೇಕು. ಫಲಿತಾಂಶ ಬರುವವರೆಗೆ ಗೃಹ ನಿಗಾವಣೆಯಲ್ಲಿರಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಕೈಗಳ ನೈರ್ಮಲ್ಯ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ವೇಳೆ ಜ್ವರ, ಕೆಮ್ಮು, ನೆಗಡಿ, ದೇಹ ನೋವು, ತಲೆ ನೋವು, ರುಚಿ ಮತ್ತು ವಾಸನೆ ಇಲ್ಲದಿರುವುದು, ಉಸಿರಾಟದ ತೊಂದರೆ ಇತ್ಯಾದಿ ಲಕ್ಷಣ ಕಂಡುಬಂದಲ್ಲಿ ತತ್‌ಕ್ಷಣ ಸ್ಥಳೀಯ ಕಣ್ಗಾವಲು/ಆರೋಗ್ಯ ತಂಡಕ್ಕೆ ವರದಿ ಮಾಡಬೇಕು. ನಿರ್ವಹಣೆ ಮತ್ತು ಚಿಕಿತ್ಸೆಗಾಗಿ ವೈದ್ಯಕೀಯ ಸೌಲಭ್ಯ ಗುರುತಿಸಿಕೊಂಡಿರುವ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಾಗಬೇಕು. ಆರ್‌ಟಿಪಿಸಿಆರ್ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಆಗಿದ್ದಲ್ಲಿ ಮಾದರಿಯನ್ನು ಡಬ್ಲೂ$Âಜಿಎಸ್ ಕಳುಹಿಸಲಾಗುತ್ತದೆ. ವರದಿಯಲ್ಲಿ ಬಿಎಫ್7 ಅಥವಾ ಹೊಸ ಉಪ ರೂಪಾಂತರ ಬಂದರೆ ಮತ್ತೂಂದು ಆರ್‌ಟಿಪಿಸಿಆರ್ ಮಾದರಿ ಪರೀಕ್ಷೆ ಮಾಡಬೇಕು. ಅದರ ಫಲಿತಾಂಶಗಳು ತಿಳಿಯುವವರೆಗೂ ಅಂತಹ ವ್ಯಕ್ತಿಯು ಕೋವಿಡ್ ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ 12 ವರ್ಷದೊಳಗಿನ ಮಕ್ಕಳು ಅಗಮಿಸಿದಲ್ಲಿ ಅವರು ವಯಸ್ಕರಿಗೆ ಇರುವ ಕೋವಿಡ್ ಶಿಷ್ಟಾಚಾರ ಪಾಲಿಸಬೇಕು ಎಂದಿದ್ದಾರೆ.
ಆರೋಗ್ಯ ಇಲಾಖೆಗೆ ಸೂಚನೆ
ಈಗಾಗಲೇ ನಿಗದಿಪಡಿಸಿದಂತೆ ಕೋವಿಡ್- 19 ಪರೀಕ್ಷೆಯ ದಿನದ ಗುರಿ ಸಾಧಿಸುವುದು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಪ್ರತಿದಿನ ಆದರ ನಿಗಾ ವಹಿಸಬೇಕು. ಪೂರೈಕೆಗಳಿಗೆ ಅನುಗುಣವಾಗಿ ಬೂಸ್ಟರ್ ಡೋನ್ ಲಸಿಕೆಗೆ ವೇಗ ನೀಡಬೇಕು ಎಂದು ತಿಳಿಸಿದ್ದಾರೆ.
ನೋ ಮಾಸ್ಕ್ ನೋ ಎಂಟ್ರಿ
ಹೊಸ ವರ್ಷದ ಹಿಂದಿನ ದಿನ (ಡಿ. 31) ಮತ್ತು ಹೊಸ ವರ್ಷಕ್ಕೆ (ಜ. 1) ಸಂಬಂಧಿಸಿದ ಎಲ್ಲ ಆಚರಣೆಗಳನ್ನು ಮಧ್ಯರಾತ್ರಿ 1 ಗಂಟೆಯೊಳಗೆ ಪೂರ್ಣಗೊಳಿಸಬೇಕು. ದೊಡ್ಡ ಮಟ್ಟದ ಸಭೆ ಸಮಾರಂಭಗಳನ್ನು ಕಡ್ಡಾಯವಾಗಿ ಹೊರಾಂಗಣದಲ್ಲಿ ಮಾಡಬೇಕು. ಸಾಧ್ಯವಾದಷ್ಟು ಹಗಲಿನಲ್ಲಿ ಆಯೋಜಿಸಿ, ತಡರಾತ್ರಿ ಮತ್ತು ಮುಂಜಾನೆಯ ಶೀತಗಾಳಿಯನ್ನು ತಪ್ಪಿಸಬೇಕು.
ಹೊಟೇಲ್‌ಗಳಂತಹ ಒಳಾಂಗಣ ಪ್ರದೇಶಗಳು (ಆಸನಗಳು), ಪಬ್‌ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು, ರೆಸಾರ್ಟ್‌ಗಳು ಇತ್ಯಾದಿಗಳಲ್ಲಿ ನಿಗದಿಪಡಿಸಿದ ಸಾಮರ್ಥ್ಯವನ್ನು ಮೀರಬಾರದು. 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಅಸ್ವಸ್ಥರು, ಗರ್ಭಿಣಿ ಹಾಗೂ ಹಾಲುಣಿಸುವ ಮಹಿಳೆಯರು ಅಂತ ಸಭೆಗಳನ್ನು ತಪ್ಪಿಸುವುದು ಸೂಕ್ತ. ಆಯೋಜಕರು, ವ್ಯವಸ್ಥಾಪಕರು ಮತ್ತು ಸಿಬಂದಿ ಆದ್ಯತೆ ಮೇಲೆ ಬೂಸ್ಟರ್ ಲಸಿಕೆ ಪಡೆಯಬೇಕು ಎಂದು ಹೇಳಿದ್ದಾರೆ.
ಪ್ರವೇಶ ದ್ವಾರದಲ್ಲಿ ಜನಸಂದಣಿಯನ್ನು ತಪ್ಪಿಸಲು ಪ್ರವೇಶದ್ವಾರರ ಸಂಖ್ಯೆಯನ್ನು ಹೆಚ್ಚಿಸಬೇಕು. ಒಳಾಂಗಣ ಪ್ರದೇಶಗಳಲ್ಲಿ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಬೇಕು. “ನೋ ಮಾಸ್ಕ್ ನೋ ಎಂಟ್ರಿ’ ಎಂಬ ಫಲಕವನ್ನು ಪ್ರದರ್ಶಿಸುವುದು. ಎಲ್ಲರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಬೇಕು (ಜ್ವರ 100.5 ಡಿಗ್ರಿ ಫ್ಯಾರನ್ ಹೀಟ್, 38 ಡಿಗ್ರಿ ಸೆಲ್ಸಿಯಸ್) ಜ್ವರ ಅಥವಾ ಕೆಮ್ಮು ಇತ್ಯಾದಿ ಉಸಿರಾಟದ ಲಕ್ಷಣ ಹೊಂದಿರುವವರು ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಬೇಕು. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ಎನ್-95 ಫೇಸ್ ಮಾಸ್ಕ್ ಧರಿಸಬೇಕು. ಪ್ರವೇಶ ಸಿಬಂದಿ ಕಡ್ಡಾಯವಾಗಿ ಖಚಿತ ಪಡಿಸಿಕೊಳ್ಳಬೇಕು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.