ಘೋಷಣೆ ಹೊರಡಿಸಿ 11 ತಿಂಗಳು: ಇನ್ನೂ ಬಂದಿಲ್ಲ ಹೊಸ ಸಾರಿಗೆ ಬಸ್‌!


Team Udayavani, Jul 15, 2017, 2:35 AM IST

KSRTC-Bus-3-600.jpg

ಹನ್ನೊಂದು ತಿಂಗಳ ಹಿಂದೆ ಮಂಜೂರುಗೊಂಡಿದ್ದರೂ ಪುತ್ತೂರು ಕೆಎಸ್‌ಆರ್‌ಟಿಸಿ ಡಿಪೋಗೆ ಇನ್ನೂ ತಲುಪದ ಬಸ್‌ಗಳ ಹಾಗೂ ಆಲಂಕಾರು- ಶಾಂತಿಮೊಗರು- ಸವಣೂರು ಮಾರ್ಗವಾಗಿ ಪುತ್ತೂರಿಗೆ ಬಸ್‌ ಸಂಚಾರ ಆರಂಭವಾಗಬೇಕು ಎಂಬ ಬೇಡಿಕೆ ಬಗ್ಗೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕ್ರಮಗೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಪುತ್ತೂರು: ಹನ್ನೊಂದು ತಿಂಗಳ ಹಿಂದೆ ಪುತ್ತೂರು ಕೆಎಸ್‌ಆರ್‌ಟಿಸಿ ಡಿಪೋಗೆ ಮಂಜೂರುಗೊಂಡಿದ್ದ ಡಲ್ಟ್ ಪ್ರಾಯೋಜಕತ್ವದ 26 ಬಸ್‌ಗಳು ಇನ್ನೂ ಬಂದಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಗರ ವ್ಯಾಪ್ತಿಯಲ್ಲಿ ಸಾರಿಗೆ ಬಸ್‌ ಓಡಾಟಕ್ಕೆ 2016ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಬಸ್‌ ಲೋಕಾರ್ಪಣೆಗೆ ಚಾಲನೆ ನೀಡಿತ್ತು. ಅದೇ ವರ್ಷದ ಡಿಸೆಂಬರ್‌ ವೇಳೆಗೆ ಪುತ್ತೂರು ಡಿಪೋಗೆ ಬಸ್‌ ಬರಬೇಕಿತ್ತು. ಆದರೆ 11 ತಿಂಗಳಾದರೂ ಬಸ್‌ಗಳು ಬಂದಿಲ್ಲ.

ವಿಭಾಗಕ್ಕೆ 44 ಬಸ್‌
ಜಿಲ್ಲೆಯಲ್ಲಿ ಮಂಗಳೂರು ಮತ್ತು ಪುತ್ತೂರಿಗೆ ಹೊಸ ಮಾದರಿ ಬಸ್‌ ನೀಡುವುದಾಗಿ ಘೋಷಿಸಲಾಗಿತ್ತು. ಈಗಾಗಲೇ ಮಂಗಳೂರಿಗೆ ಸಿಟಿ ಬಸ್‌ ಸೇವೆ ಆರಂಭವಾಗಿದೆ. ಪುತ್ತೂರು ವಿಭಾಗೀಯ ಕೇಂದ್ರದ ಪುತ್ತೂರು ಡಿಪೋ ಮತ್ತು ಮಡಿಕೇರಿ ಡಿಪೋಗಳಿಗೆ 44 ಬಸ್‌ಗಳು ಮಂಜೂರುಗೊಂಡಿತ್ತು. ಅದರಲ್ಲಿ ಪುತ್ತೂರು ಡಿಪೋಗೆ (ಸುಳ್ಯ-ಪುತ್ತೂರು) 26 ಬಸ್‌ಗಳು ಸೇರಿತ್ತು. ಬಸ್‌ ವಿಳಂಬದ ಬಗ್ಗೆ ಶಾಸಕಿ ಸಂಬಂಧಪಟ್ಟ ಅಧಿಕಾರಿಗಳ, ಸಚಿವರ ಗಮನಕ್ಕೆ ತಂದಿದ್ದರೂ ಈಗ ಬರುತ್ತದೆ, ಮತ್ತೆ ಬರುತ್ತದೆ ಎಂಬ ಭರವಸೆ ಮಾತ್ರ ಸಿಕ್ಕಿದೆ. ಈ ಮಧ್ಯೆ ಕಳೆದ ವರ್ಷ ಸೆ. 27ರಂದು ಪುತ್ತೂರು ಡಿಪೋಗೆ 12 ಕರ್ನಾಟಕ ಸಾರಿಗೆ ಬಸ್‌ ಸೇರ್ಪಡೆಗೊಂಡಿವೆ. ಅದಕ್ಕೆ ಮೊದಲೇ ಘೋಷಣೆಯಾಗಿದ್ದ ಬಸ್‌ಗಳಿನ್ನೂ ಏಕೆ ಬಂದಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆ.

ಏನಿದು ಬಸ್‌
ಡಲ್ಟ್ ಪ್ರಾಯೋಜಕತ್ವದಲ್ಲಿ ನೀಡುವ ಈ ನಗರ ಸಾರಿಗೆ ಬಸ್‌ ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡಿದೆ ಎಂದಿತ್ತು ಕೆಎಸ್‌ಆರ್‌ಟಿಸಿ. ಪ್ರಯಾಣಿಕರ ಸುರಕ್ಷತೆಗಾಗಿ ಸಿ.ಸಿ. ಕೆಮರಾಗಳು, ವಿದ್ಯುತ್‌ ಸ್ವಯಂ ಚಾಲಿತ ಬಾಗಿಲು, ತುರ್ತು ಸಂದರ್ಭ ಆಪಾಯದ ಸಂದೇಶವನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸುವ ವ್ಯವಸ್ಥೆ, ಚಾಲನಾ ಸುರಕ್ಷತೆಗಾಗಿ ಹಿಂಬದಿ ನೋಟದ ಕೆಮರಾ, ಧ್ವನಿ ಪ್ರಸರಣ ಮತ್ತು ಎಲ್‌ಇಡಿ ಪ್ರದರ್ಶನ ವ್ಯವಸ್ಥೆ, ಅಂಗವಿಕಲರು ಬಸ್‌ ಹತ್ತಲು ಮತ್ತು ಇಳಿಯಲು ರ್‍ಯಾಂಪ್‌ ವ್ಯವಸ್ಥೆ ಮೊದಲಾದ ಸೌಲಭ್ಯಗಳು ಇರಲಿವೆಯಂತೆ. ಸುಳ್ಯ ಮತ್ತು ಪುತ್ತೂರು ತಾಲೂಕು ಒಳಗೊಂಡ ಪುತ್ತೂರು ಡಿಪೋದಲ್ಲಿ 165 ಶೆಡ್ನೂಲ್‌ಗ‌ಳಿದ್ದು, ಅಂದಾಜು 168 ಬಸ್‌ಗಳು ಇವೆ. ಇವುಗಳಲ್ಲಿ ಹೆಚ್ಚಿನವು ಹಳೇ ಬಸ್‌ಗಳಾಗಿದ್ದು ಓಡಾಟಕ್ಕೆ ಕಷ್ಟವೆಂದು ಚಾಲಕರು ಈ ಹಿಂದೆಯೇ ಡಿಪೋ ಅಧಿಕಾರಿಗಳಿಗೆ ತಿಳಿಸಿದ್ದರು. ಮಳೆಗಾಲದಲ್ಲಿ ಸೋರುವ ಬಸ್‌ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರೂ ದೂರಿದ್ದರು.

ರಾಜ್ಯದಲ್ಲೇ ಗರಿಷ್ಠ ಬಸ್‌ಪಾಸ್‌
ಪುತ್ತೂರು ವಿಭಾಗೀಯ ಕೇಂದ್ರದಲ್ಲಿ ವಿದ್ಯಾರ್ಥಿಗಳು ಗರಿಷ್ಠ ಬಸ್‌ ಹೊಂದಿದ್ದು, ರಾಜ್ಯದಲ್ಲಿಯೇ ದ್ವಿತೀಯ ಸ್ಥಾನದಲ್ಲಿತ್ತು. ಕಳೆದ ಬಾರಿ 44,564 ಬಸ್‌ ಪಾಸ್‌ ಹೊಂದಿದ್ದು, ಪುತ್ತೂರು ಡಿಪೋವೊಂದರಲ್ಲಿಯೇ 20,861 ಬಸ್‌ ಪಾಸ್‌ ಇತ್ತು. ವಿಭಾಗೀಯ ಕೇಂದ್ರ ವ್ಯಾಪಿಗೆ ಒಳಪಟ್ಟ ಪುತ್ತೂರು, ಬೆಳ್ತಂಗಡಿ, ಬಿ.ಸಿ.ರೋಡ್‌ ಮತ್ತು ಮಡಿಕೇರಿ ಡಿಪೋಗಳಲ್ಲಿ 1664 ಚಾಲಕ – ನಿರ್ವಾ ಹಕರು, 357 ಮೆಕ್ಯಾನಿಕ್‌ಗಳು ಕರ್ತವ್ಯದಲ್ಲಿದ್ದರು. ವಿಭಾಗ ವ್ಯಾಪ್ತಿಯಲ್ಲಿ 538 ಬಸ್‌ ಇದ್ದು, ಬಿ.ಸಿ.ರೋಡ್‌-108., ಧರ್ಮಸ್ಥಳ-159, ಮಡಿಕೇರಿ ಡಿಪೋದಲ್ಲಿ 103 ಬಸ್‌ಗಳು ಇವೆ.

ಪ್ರಕಟನೆ ಬದಲಾಗಿತ್ತು!
ರಾಜ್ಯ ರಸ್ತೆ ಸಾರಿಗೆ ನಿಗಮ 2016 ಆ. 22ರಂದು ಪತ್ರಿಕಾ ಪ್ರಕಟನೆ ನೀಡಿತ್ತು. ಅದರಲ್ಲಿ ಹಾಸನ, ಶಿವಮೊಗ್ಗ, ಭದ್ರಾವತಿ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜ ನಗರ, ಚಿಕ್ಕಮಗಳೂರು, ತುಮಕೂರು, ದಾವಣಗೆರೆ, ಮಂಗಳೂರು, ಉಡುಪಿ, ಮಡಿಕೇರಿ ಮೊದಲಾದ ಜಿಲ್ಲೆಗಳಿಗೆ ನಗರ ಸಾರಿಗೆ ಬಸ್‌ ನೀಡುವುದಾಗಿ ಘೋಷಿಸಿತ್ತು. ಸ್ವಲ್ಪ ಸಮಯದ ಅನಂತರ ಸಿಟಿ ಬಸ್‌ ಅಲ್ಲ, ಬದಲಿಗೆ ಡಲ್ಟ್ ಪ್ರಾಯೋಜಕತ್ವದ ಬಸ್‌ ಎಂದು ಇಲಾಖೆ ಹೇಳಿಕೆ ನೀಡಿತ್ತು.

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

2

Udupi: ಯುವತಿ ನಾಪತ್ತೆ; ದೂರು ದಾಖಲು

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.