ಚುನಾವಣೆ ಕಳೆದರೂ ಆರಂಭಗೊಳ್ಳದ ಕಾಮಗಾರಿ
Team Udayavani, Jun 4, 2018, 12:24 PM IST
ಬಜಪೆ : ಬಜಪೆ ಪೊಲೀಸ್ ಸ್ಟೇಶನ್‌ನಿಂದ ಮುರನಗರ ರಸ್ತೆ ಹಳೆ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕಿಸುವ ರಸ್ತೆಗೆ ಚುನಾ ವಣೆ ಆರಂಭಕ್ಕೂ ಮೊದಲೇ ಗುದ್ದಲಿ ಪೂಜೆ ನಡೆಸಿ, ರಸ್ತೆ ಕಾಮಗಾರಿ ಆರಂಭಿಸಿದರೂ ಚುನಾವಣೆಯಾದ ಬಳಿಕ ಕಾಮಗಾರಿಯ ವೇಗ ತಣ್ಣಗಾಗಿದೆ. ಈ ರಸ್ತೆಗೆ 2ಕೋಟಿ ರೂ.ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ 1ಕಿ.ಮೀ. ರಸ್ತೆ ಕಾಂಕ್ರೀಟ್‌ಗಾಗಿ ಚುನಾವಣೆಯ ಮೊದಲು ಮಾರ್ಚ್‌ನಲ್ಲಿ ಗುದ್ದಲಿ ಪೂಜೆ ಮಾಡಲಾಗಿತ್ತು.
ಕುಂಟುತ್ತಾ ಸಾಗಿದ ಮೋರಿ ಕಾಮಗಾರಿ
ಗುದ್ದಲಿ ಪೂಜೆ ಅನಂತರ ರಸ್ತೆ ಅಗೆಯುವ ಕಾಮಗಾರಿ ಆರಂಭವಾಗಿತು. ಆ ಬಳಿಕ ಮೋರಿ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಚುನಾವಣೆ ನಡೆಯುವ ಮುನ್ನವೇ ಮೋರಿ ಕಾಮಗಾರಿ ಮುಗಿದಿತ್ತು. ಮೋರಿಗೆ ಪರ್ಯಾಯವಾಗಿ ವಾಹನ ಸಂಚರಿಸಲು ಬದಿಯಲ್ಲಿಯೇ ಮಣ್ಣು ಹಾಕಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಈ ರಸ್ತೆ ಮಳೆಗೆ ಕೊಚ್ಚಿ ಹೋಗಿದ್ದು ಸಂಚಾರಕ್ಕೆ ತೊಂದರೆಯಾಗಿದೆ.
ಬಜಪೆ ಪೇಟೆಗೆ ಪರ್ಯಾಯಾ ರಸ್ತೆ
ಬಜಪೆ ಪೇಟೆಯಲ್ಲಿ ಯಾವುದೇ ಸಮಾರಂಭ ಅಥವಾ ಇನ್ನಾವುದೇ ಸಂದರ್ಭದಲ್ಲಿ ರಸ್ತೆ ತಡೆ ಹಾಗೂ ಅಡಚಣೆವುಂಟಾದಲ್ಲಿ ಈ ರಸ್ತೆಯೇ ಬಳಕೆಯಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಎಲ್ಲಿಯಾದರೂ ಅಂತಹ ಸಂದರ್ಭಗಳು ಬಂದರೆ ವಾಹನಗಳಿಗೆ ಇಲ್ಲಿ ಸಂಚಾರವೇ ಕಷ್ಟಸಾಧ್ಯವಾಗಬಹುದು ಈ ನಿಟ್ಟಿನಲ್ಲಿ ಕಾಮಗಾರಿ ಶೀಘ್ರ ಆರಂಭಿಸುವುದು ಹಿತ ಎನ್ನುವುದು ಇಲ್ಲಿನ ಗ್ರಾಮಸ್ಥರ ಅಭಿಪ್ರಾಯ.
ಮಳೆ ತೊಡಕು
ಈ ರಸ್ತೆ ಕಾಮಗಾರಿ ಆರಂಭಿಸಿ ಮೂರು ತಿಂಗಳಾಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖಾ ಎಂಜಿನಿಯರ್‌ಗೆ ತಿಳಿಸಿಲಾಗಿದೆ. ಮಳೆ ಹಾಗೂ ಚುನಾವಣೆಯಿಂದ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
– ವಿಜಯ ಗೋಪಾಲ ಸುವರ್ಣ,
ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.