ಉಪಯೋಗಕ್ಕಿಲ್ಲದ ಇನ್‌ಸ್ಪೆಕ್ಟರ್‌ ಕಚೇರಿ ಕಟ್ಟಡ


Team Udayavani, Jul 22, 2018, 11:11 AM IST

22-july-5.jpg

ಮೂಲ್ಕಿ : ಕೆಲವು ಸರಕಾರಿ ಇಲಾಖೆಗಳಿಗೆ ಸರಿಯಾದ ಕಟ್ಟಡ ಇಲ್ಲದೆ ಸಾರ್ವಜನಿಕರಿಗೆ ಸೇವೆ ಕೊಡುವಲ್ಲಿ ಬಹಳಷ್ಟು ತೊಂದರೆ ಆಗುತ್ತಿರುವುದು ಒಂದೆಡೆಯಾದರೆ ಕೆಲವೆಡೆ ಕಟ್ಟಡಗಳು ಇದ್ದರೂ ಸರಿಯಾಗಿ ಉಪಯೋಗವಿಲ್ಲದೆ ಶಿಥಿಲವಾಗುತ್ತಿದೆ ಎಂಬುದಕ್ಕೆ ಮೂಲ್ಕಿ ಪೊಲೀಸ್‌ ಇಲಾಖೆಯ ಹಳೆ ಇನ್‌ ಸ್ಪೆಕ್ಟರ್‌ ಅವರ ಕಚೇರಿ ಉತ್ತಮ ಉದಾಹರಣೆಯಾಗಿದೆ.

ಕೆಲವು ವರ್ಷಗಳ ಹಿಂದೆಯಷ್ಟೇ ಮೂಲ್ಕಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಅವರ ಕಚೇರಿಗಾಗಿ ಈ ಕಟ್ಟಡ ನಿರ್ಮಾಣವಾಗಿತ್ತು. ಆದರೆ ಮೂಲ್ಕಿ ಠಾಣೆಯು ಮೇಲ್ದರ್ಜೆಗೇರಿದಾಗ ಠಾಣಾಧಿಕಾರಿಯಾಗಿದ್ದ ಇನ್‌ಸ್ಪೆಕ್ಟರ್‌ ಅವರೇ ಕಾರ್ಯನಿರ್ವಹಿಸಬೇಕಾಯಿತು. ಮೂಲ್ಕಿ ಪೊಲೀಸ್‌ ಸಬ್‌ ಇನ್‌ ಸ್ಪೆಕ್ಟರ್‌ ಅವರ ಕಚೇರಿಯು ನೂತನವಾಗಿ ನಿರ್ಮಾಣಗೊಂಡು ಮಂಗಳೂರು ಕಮೀಷನರೇಟ್‌ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿದಾಗ ಈ ಕಚೇರಿಯನ್ನು ಸ್ಥಳಾಂತರಿಸಲಾಯಿತು.

ಉಪಕಚೇರಿಯಾಗಿ ಉಪಯೋಗಿಸಬಹುದಲ್ಲವೇ?
ಅದೆಷ್ಟೋ ಇಲಾಖೆಗಳಿಗೆ ಕಚೇರಿಗಳಿಲ್ಲದೆ ಸಮಸ್ಯೆಯಾಗುತ್ತಿದೆ. ಪೊಲೀಸ್‌ ಇಲಾಖೆಯ ಟ್ರಾಫಿಕ್‌ ವಿಭಾಗದ ಮೂಲ್ಕಿ ಪರಿಸರದ ಹೋಬಳಿಯ ಜನರು ಟ್ರಾಫಿಕ್‌ ಪೊಲೀಸ್‌ ಕೆಲಸಕ್ಕಾಗಿ ದೂರದ ಬೈಕಂಪಾಡಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಅದಲ್ಲದೆ ಬಹಳಷ್ಟು ಟ್ರಾಫಿಕ್‌ ಪೊಲೀಸ್‌ ಸಿಬಂದಿ ಈ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಇಲ್ಲಿ ಒಂದು ಉಪ ಕಚೇರಿಯಾಗಿ ಈ ಕಟ್ಟಡವನ್ನು ಉಪಯೋಗಿಸಿ ಮೂಲ್ಕಿ ಹೋಬಳಿಯ ಜನರಿಗೆ ಉಪಯೋಗವಾಗುವ ಕೆಲಸವನ್ನು ಇಲಾಖೆ ಮಾಡಿದರೆ ಉತ್ತಮ ಎಂಬುವುದು ಸಾರ್ವಜನಿಕರ ಅಭಿಪ್ರಾಯ.

ಟ್ರಾಫಿಕ್‌ ಉಪಕಚೇರಿಯಾಗಿಸಲಿ
ಮೂಲ್ಕಿ ವ್ಯಾಪ್ತಿಯಲ್ಲಿ ನಡೆಯುವ ವಾಹನ ಅಪಘಾತ ಸಹಿತ ಯಾವುದೇ ಕೇಸ್‌ ವಿಚಾರಣೆಗಾಗಿ ಬೈಕಂಪಾಡಿಯ ಮಂಗಳೂರು ಉತ್ತರ ಪೊಲೀಸ್‌ ಟ್ರಾಫಿಕ್‌ ಠಾಣೆಗೆ ಹೋಗಬೇಕಾಗುತ್ತದೆ. ಮೂಲ್ಕಿ ಹೋಬಳಿಯ ಜನರಿಗೆ ಉಪಯೋಗವಾಗುವಂತೆ ಈ ಕಟ್ಟಡವನ್ನು ಬಳಕೆ ಮಾಡಿ ಟ್ರಾಫಿಕ್‌ ಉಪಕಚೇರಿಯಾಗಿ ಉಪಯೋಗಿಸಿದರೆ ಬಹಳಷ್ಟು ಜನರಿಗೆ ಉಪಕಾರವಾದೀತು.
 -ಮಧು ಆಚಾರ್ಯ
ಅಧ್ಯಕ್ಷರು, ಮೂಲ್ಕಿ ಟೂರಿಸ್ಟ್‌ ಕಾರು,
ಟೆಂಪೋ ಚಾಲಕರ ಮತ್ತು ಮಾಲಕರ ಸಂಘ ಮೂಲ್ಕಿ

ವ್ಯಾಯಾಮ, ಯೋಗಕ್ಕೆ ಉಪಯೋಗ
ಮೂಲ್ಕಿ ಪೊಲೀಸ್‌ ಠಾಣೆ ಮೇಲ್ದರ್ಜೆಗೆ ಏರಿದಾಗ ಅನಿವಾರ್ಯವಾಗಿ ಈ ಕಚೇರಿಯು ಮೂಲ್ಕಿ ಠಾಣೆಗೆ ವರ್ಗಾವಣೆಯಾಗಬೇಕಾಯಿತು. ಈಗ ಅಲ್ಲಿ ಕೆಲವು ದಾಖಲೆ ಪತ್ರಗಳು ಮಾತ್ರ ಇವೆ. ಕಟ್ಟಡವನ್ನು ಸಮೀಪದಲ್ಲಿರುವ ನಮ್ಮ ಸಿಬಂದಿ ವ್ಯಾಯಾಮ, ಯೋಗ ಇತ್ಯಾದಿಗಳಿಗೆ ಉಪಯೋಗಿಸುತ್ತಾರೆ. ಇಲಾಖೆಗೆಯಿಂದ ಸಾರ್ವಜನಿಕರಿಗೆ ಉಪಯೋಗವಾಗುವ ವಿಭಾಗ ತೆರೆಯಬೇಕೆಂದಿದ್ದರೆ ಅದಕ್ಕೆ ಮೇಲಾಧಿಕಾರಿಗಳ ಅನುಮತಿ ಅಗತ್ಯ.
-ಅನಂತಪದ್ಮನಾಭ
ಇನ್‌ಸ್ಪೆಕ್ಟರ್‌, ಮೂಲ್ಕಿ ಪೊಲೀಸ್‌ ಠಾಣೆ

ಟಾಪ್ ನ್ಯೂಸ್

Ashok-haranahalli

Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ

1-udu

Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ

1-BINIL

Ukraine-Russia war: ರಷ್ಯಾ ಸೇನೆಯಲ್ಲಿದ್ದ ಕೇರಳದ ವ್ಯಕ್ತಿ ಸಾ*ವು

Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ

Udupi ಗೀತಾರ್ಥ ಚಿಂತನೆ-155: ಶೀತೋಷ್ಣಕ್ಕೂ ಸುಖದುಃಖಕ್ಕೂ ಸಂಬಂಧ

Mangaluru Airport: ದಾಖಲೆ ಸಂಖ್ಯೆ ಪ್ರಯಾಣಿಕರ ನಿರ್ವಹಣೆ

Mangaluru Airport: ದಾಖಲೆ ಸಂಖ್ಯೆ ಪ್ರಯಾಣಿಕರ ನಿರ್ವಹಣೆ

UPCL-Kasaragod: ಕಾಮಗಾರಿ ಚುರುಕು; ಭೂಮಿ, ಮರಗಳಿಗೆ ಹೆಚ್ಚಿನ ಪರಿಹಾರ: ವೆಂಕಟೇಶ್‌

UPCL-Kasaragod: ಕಾಮಗಾರಿ ಚುರುಕು; ಭೂಮಿ, ಮರಗಳಿಗೆ ಹೆಚ್ಚಿನ ಪರಿಹಾರ: ವೆಂಕಟೇಶ್‌

ಜ. 14-16: ಮಾರಣಕಟ್ಟೆಯಲ್ಲಿ ಮಕರ ಸಂಕ್ರಾಂತಿ

ಜ. 14-16: ಮಾರಣಕಟ್ಟೆಯಲ್ಲಿ ಮಕರ ಸಂಕ್ರಾಂತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Ashok-haranahalli

Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ

Mahakumbaha1

Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ

1-udu

Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ

1-palak

ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್‌

suicide (2)

Kota ಸರಣಿ ಸುಸೈ*ಡ್‌ ಬೆನ್ನಲ್ಲೇ ಐಐಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿ ಆತ್ಮಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.