ಮೇ, ಜೂನ್ ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಮಳೆ
Team Udayavani, Jul 3, 2018, 2:15 AM IST
ಪುತ್ತೂರು: ತಾಲೂಕಿನಾದ್ಯಂತ ಮೇ ಹಾಗೂ ಜೂನ್ ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಅಲ್ಪ ಪ್ರಮಾಣದಲ್ಲಿ ಹೆಚ್ಚು ಸರಾಸರಿ ಮಳೆಯಾಗಿದೆ. 2017ರಲ್ಲಿ ಎಪ್ರಿಲ್ ತಿಂಗಳಲ್ಲಿ 127.5 ಮಿ.ಮೀ., ಮೇ ತಿಂಗಳಲ್ಲಿ 243.4 ಮಿ.ಮೀ., ಜೂನ್ ತಿಂಗಳಲ್ಲಿ 1155.35 ಮಿ.ಮೀ. ಸರಾಸರಿ ಮಳೆಯಾದರೆ 2018ನೇ ಸಾಲಿನಲ್ಲಿ ಎಪ್ರಿಲ್ ತಿಂಗಳಲ್ಲಿ 82.7 ಮಿ.ಮೀ., ಮೇ ತಿಂಗಳಲ್ಲಿ 326.2 ಮಿ.ಮೀ., ಜೂನ್ ತಿಂಗಳಲ್ಲಿ 1184.24 ಮಿ.ಮೀ. ಸರಾಸರಿ ಮಳೆಯಾಗಿದೆ.
ಎಪ್ರಿಲ್ ತಿಂಗಳಿನಿಂದ ಜೂನ್ ತನಕ 2017ನೇ ಸಾಲಿನಲ್ಲಿ ಒಟ್ಟು ಸರಾಸರಿ 1526.25 ಮಿ.ಮೀ. ಮಳೆಯಾದರೆ 2018ನೇ ಸಾಲಿನಲ್ಲಿ ಒಟ್ಟು ಸರಾಸರಿ 1593.14 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಇದುವರೆಗೆ 66.89 ಮಿ.ಮೀ. ಸರಾಸರಿ ಹೆಚ್ಚು ಮಳೆಯಾಗಿದೆ. ಕಳೆದ ವರ್ಷ ಎಪ್ರಿಲ್ ತಿಂಗಳಲ್ಲಿ ಹೆಚ್ಚು ಮಳೆಯಾಗಿದ್ದರೆ ಈ ವರ್ಷ ಮೇ ಹಾಗೂ ಜೂನ್ ತಿಂಗಳಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಸರಾಸರಿ ಮಳೆಯಾಗಿದೆ. ಪುತ್ತೂರು ತಾಲೂಕಿನಾದ್ಯಂತ ಜೂ. 22 ಆರಿದ್ರಾ ನಕ್ಷತ್ರ ಆರಂಭಗೊಂಡ ಬಳಿಕ 10 ದಿನಗಳಲ್ಲಿ ಉತ್ತಮ ಮಳೆಯಾಗಿದೆ. ಇನ್ನು ಮಳೆಯ ನಕ್ಷತ್ರಗಳಾದ ಪುನರ್ವಸು ಹಾಗೂ ಪುಷ್ಯಾ ನಕ್ಷತ್ರಗಳ ಅವಧಿಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.
ಸರಾಸರಿ 19 ಮಿ.ಮೀ. ಮಳೆ
ಕಳೆದ 48 ಗಂಟೆಗಳ ಅವಧಿಯಲ್ಲಿ ತಾಲೂಕಿನ ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಮಳೆಯ ಪ್ರಮಾಣ ಇಳಿಕೆ ಕಂಡಿದೆ. ರವಿವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನ 24 ಗಂಟೆಗಳ ಅವಧಿಯಲ್ಲಿ ಪುತ್ತೂರು ನಗರದಲ್ಲಿ 5.6 ಮಿ.ಮೀ., ಉಪ್ಪಿನಂಗಡಿಯಲ್ಲಿ 8 ಮಿ.ಮೀ., ಶಿರಾಡಿಯಲ್ಲಿ 4.3 ಮಿ.ಮೀ., ಕೊçಲದಲ್ಲಿ 15.4 ಮಿ.ಮೀ., ಐತೂರುನಲ್ಲಿ 8.4 ಮಿ.ಮೀ., ಕಡಬದಲ್ಲಿ 5.2 ಮಿ.ಮೀ. ಮಳೆ ಸುರಿದಿದೆ. ತಾಲೂಕಿನಲ್ಲಿ ಒಟ್ಟು ಸರಾಸರಿ 19 ಮಿ.ಮೀ. ಮಳೆಯಾಗಿದೆ. ನೇತ್ರಾವತಿ ಕುಮಾರಧಾರಾ ಸಂಗಮದ ಸ್ಥಳದಲ್ಲಿ ನೀರಿನ ಮಟ್ಟ ಇಳಿಕೆ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.