ಆರೋಪವೂ ಮಾಡಿಲ್ಲ; ದೂರೂ ನೀಡಿಲ್ಲ; ದೀಪಕ್ ಚಿಕ್ಕಪ್ಪ ಹೇಳಿಕೆ
Team Udayavani, Jan 9, 2018, 10:05 AM IST
ಸುರತ್ಕಲ್: ದೀಪಕ್ ಹತ್ಯೆ ಕುರಿತು ರಾಜಕಾರಣಿಗಳು ಮಾಡುತ್ತಿರುವ ಆರೋಪಗಳ ಬಗ್ಗೆ ನಮಗೆ ಅರಿವಿಲ್ಲ. ನಾವಂತೂ ಯಾರ ವಿರುದ್ಧವೂ ಆರೋಪ ಮಾಡಿಲ್ಲ; ದೂರೂ ನೀಡಿಲ್ಲ ಎಂದು ದೀಪಕ್ ರಾವ್ ಚಿಕ್ಕಪ್ಪ ಸರ್ತೋಜಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೃತ್ಯದ ಹಿಂದೆ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರೊಬ್ಬರ ಕೈವಾಡವಿದೆ ಎಂದು ಆರೋಪಿಸಿರುವ ಹಿನ್ನೆಲೆಯಲ್ಲಿ ಮಾಧ್ಯಮದವರು ದೀಪಕ್ ಕುಟುಂಬದ ಅಭಿಪ್ರಾಯ ಬಯಸಿದಾಗ ಸರ್ತೋಜಿ ಈ ಹೇಳಿಕೆ ನೀಡಿದ್ದಾರೆ.
ಕುಮಾರಸ್ವಾಮಿ ಹೇಳಿಕೆ ಈಗಷ್ಟೇ ನಿಮ್ಮಿಂದ ತಿಳಿಯಿತು. ನಮಗೆ ರಾಜಕೀಯ ಬೇಡ. ನಾವು ಯಾವುದೇ ಪಕ್ಷವಾಗಲಿ, ವ್ಯಕ್ತಿಯ ಮೇಲಾಗಲೀ ದೂರು ನೀಡಿಲ್ಲ. ಆರೋಪಗಳ ಬಗ್ಗೆಯೂ ತಿಳಿದಿಲ್ಲ. ಮನಪಾ ಸದಸ್ಯರು ಮಾಡಿದ್ದಾರೆ ಎಂಬುದಕ್ಕೆ ಸಾಕ್ಷ್ಯವೇನಾದರೂ ಇದೆಯಾ ಎಂದು ಪ್ರಶ್ನಿಸಿದರು.
ನೆಮ್ಮದಿಯಿಂದಿರಲು ಬಿಡಿ
ಮಾಧ್ಯಮದಲ್ಲಿ ಪದೇ ಪದೇ ನಮ್ಮ ಕುಟುಂಬದ ಬಗ್ಗೆ ಚರ್ಚೆಯಾಗುತ್ತಿರುವುದರಿಂದ ನೆಮ್ಮದಿ ಹಾಳಾಗಿದೆ. ಈಗ ಟಿವಿ ನೋಡುವುದನ್ನೇ ಬಿಟ್ಟಿದ್ದೇವೆ. ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಕಠಿನ ಶಿಕ್ಷೆ ನೀಡಬೇಕು. ತನಿಖೆಯನ್ನು ಎನ್ಐಎಗೆ ವಹಿಸುವುದು ಸೂಕ್ತ ಎಂದರು. ಇನ್ನಾದರೂ ನಮ್ಮನ್ನು ನೆಮ್ಮದಿಯಿಂದ ಇರಲು ಬಿಡಿ ಎಂದು ವಿನಂತಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.