ಮೂಢನಂಬಿಕೆ ಅಲ್ಲ ; ಮೂಲ ನಂಬಿಕೆ
Team Udayavani, Jan 13, 2018, 2:13 PM IST
ಸುಳ್ಯ: ಸಂಸ್ಕಾರ, ಸಂಸ್ಕೃತಿಭರಿತ ನೆಲೆಗಟ್ಟಿನ ಭಾರತೀಯರ ಆಚರಣೆಯಲ್ಲಿ ಸತ್ಯಾಂಶವಿದೆ. ವಿಜ್ಞಾನವೂ ಇದೆ. ಹಾಗಾಗಿ ನಮ್ಮದು ಮೂಢನಂಬಿಕೆ ಅಲ್ಲ. ಅದು ಮೂಲ ನಂಬಿಕೆ ಎಂದು ಸಾಮಾಜಿಕ ಕಾರ್ಯಕರ್ತ ಸುಭಾಶ್ಚಂದ್ರ ಕಳಂಜ ಅವರು ಹೇಳಿದರು. ಅವರು ಸ್ವಾಮಿ ವಿವೇಕಾನಂದ ಸ್ಮಾರಕ ಸಮಿತಿ ಆಶ್ರಯದಲ್ಲಿ ಅಂಬಟಡ್ಕ ವಿವೇಕಾನಂದ ವೃತ್ತದಲ್ಲಿ ಶುಕ್ರವಾರ ನಡೆದ ನಾಲ್ಕನೇ ವರ್ಷದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆಯಲ್ಲಿ ಉಪನ್ಯಾಸ ನೀಡಿದರು.
ಸ್ವಾಮೀ ವಿವೇಕಾನಂದರು ಅಂತಹ ಮಹ್ವತದ ಸಂಸ್ಕೃತಿಯ ಸಾರವನ್ನು ಜಗದುದ್ದಗಲಕ್ಕೂ ಪಸರಿಸಿದರು. ಆದರೆ ಇಂದು ಅಂತಹ ಮಹಾತ್ಮರ ಆಚರಣೆಗೆ ಪ್ರಚಾರ ಕೊಡುವವರು ಕಡಿಮೆ. ಅದರ ಬದಲಿಗೆ ವಿವಾದ ಸೃಷ್ಟಿಸುವ ಜಯಂತಿಗೆ ಆಸ್ಥೆ ತೋರುವ ಪ್ರವೃತ್ತಿಗಳು ಹೆಚ್ಚಿವೆ ಎಂದು ಅವರು ಹೇಳಿದರು.
ಕೆಲವು ವಿಚಾರವಾದಿಗಳು ಭಾರತೀಯ ಆಚರಣೆಗಳನ್ನು ಮೂಢನಂಬಿಕೆಯೆಂದೂ, ಮೂರ್ತಿಪೂಜೆಯ ಬಗ್ಗೆಯು ಅಪಸ್ವರ ಎತ್ತಿದವರು ಇದ್ದಾರೆ. ವಾಸ್ತವವಾಗಿ ಇವೆಲ್ಲ ಆಚರಣೆಗಳು ಅರ್ಥಪೂರ್ಣವಾದವುಗಳು ಎಂದು ಅವರು ವಿವರಿಸಿದರು.
ಜಗತ್ತಿಗೆ ಬೆಳಕು ಕೊಟ್ಟು ಪರಮಾತ್ಮ ಅನಿಸಿಕೊಂಡ ಮಹಾನ್ ವ್ಯಕ್ತಿಗಳು ಇರುವುದು ಭಾರತದಲ್ಲಿ ಮಾತ್ರ. ಅದಕ್ಕೆ ವಿವೇಕಾನಂದರು ಉದಾಹರಣೆ ಎಂದ ಅವರು, ಅವರ ಜಯಂತಿ ನಮ್ಮಲ್ಲಿ ಸಮಾಜಕೋಸ್ಕರ ದುಡಿಯುವ ಮನೋಭಾವನೆ, ಸಂಸ್ಕೃತಿ ಯೊಂದಿಗೆ ಬದುಕು ಸಾಗಿಸುವ ಮನಸ್ಥಿತಿಗೆ ಕಾರಣವಾಗಲಿ ಎಂದರು.
ಭಾರತಕ್ಕೆ ಮಾತ್ರ ಸೀಮಿತವಲ್ಲ
ಸಭಾಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಮಾತನಾಡಿ, ವಿವೇಕಾನಂದರು ಭಾರತಕ್ಕೆ ಮಾತ್ರ ಸೀಮಿತವಾದ ವ್ಯಕ್ತಿ ಅಲ್ಲ. ಅವರು ಭಾರತದ ಮೂಲಕ ಇಡೀ ದೇಶಕ್ಕೆ ಬೆಳಕು ತೋರಿದವರು. ಯುವ ಸಮುದಾಯಕ್ಕೆ ಅವರ ಆದರ್ಶಗಳು ಇನ್ನಷ್ಟು ಉತ್ಸಾಹ ತುಂಬುವಂತಿದ್ದು, ಅದನ್ನು ಪಾಲಿಸಿಕೊಂಡು ದೇಶ ಕಟ್ಟುವ ಕಾಯಕದಲ್ಲಿ ಭಾಗಿಗಳಾಗಬೇಕು ಎಂದರು.
ಹಾರಾರ್ಪಣೆ
ಆರಂಭದಲ್ಲಿ ಅಕ್ಷಯ್ ಕುರುಂಜಿ ಅವರು ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕೆವಿಜಿ ಸಂಸ್ಥೆಯ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನ.ಪಂ. ಅಧ್ಯಕ್ಷೆ ಶೀಲಾವತಿ ಮಾಧವ, ಎಒಎಲ್‌ಇ ನಿರ್ದೇಶಕ ಅಕ್ಷಯ್ ಕುರುಂಜಿ, ವಿವೇಕಾನಂದ ಆಚರಣ ಸಮಿತಿ ಅಧ್ಯಕ್ಷ ಡಾ| ಲೀಲಾಧರ, ಕೆವಿಜಿ ಮೆಡಿಕಲ್ ಕಾಲೇಜಿನ ಡೀನ್ ಶೀಲಾ ನಾಯಕ್, ವಿವೇಕಾನಂದ ಸ್ಮಾರಕ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಮಡ್ತಿಲ ಮೊದಲಾದವರು ಉಪಸ್ಥಿತರಿದ್ದರು. ಸೌರಭ ಮತ್ತು ತಂಡ ಪ್ರಾರ್ಥಿಸಿದರು. ಅಭಿಲಾಷ್ ಅಡೂರು ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.