ಪಠ್ಯಪುಸ್ತಕಗಳೇ ಬಂದಿಲ್ಲ; ಪರೀಕ್ಷೆ ಆರಂಭ!
Team Udayavani, Jul 18, 2017, 3:35 AM IST
ಬೆಳ್ತಂಗಡಿ: ಶಾಲಾರಂಭವಾಗಿ ಇಷ್ಟು ದಿನಗಳಾಗಿದ್ದರೂ ಸರಕಾರದಿಂದ ಇನ್ನೂ ಪಠ್ಯ ಪುಸ್ತಕ ವಿತರಣೆಯೇ ಆಗಿಲ್ಲ. ಹಾಗಿದ್ದರೂ ಸೋಮವಾರದಿಂದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಾಸಿಕ ಪರೀಕ್ಷೆ ನಡೆಯಲಿದೆ !
ಮೇ 29ರಂದು ಶಾಲೆಗಳು ಆರಂಭವಾಗಿವೆ. ಶಾಲೆಗಳು ಬಾಗಿಲು ತೆರೆದು ಒಂದೆರಡು ದಿನಗಳಲ್ಲೇ ಪಠ್ಯಪುಸ್ತಕ ಸರಬರಾಜಾಗಲಿದೆ ಎಂದು ಶಿಕ್ಷಣ ಸಚಿವರು ಹೇಳಿದ್ದರು. ಅದಾಗಿ 50 ದಿನಗಳು ಕಳೆದರೂ ಪೂರ್ಣ ಪ್ರಮಾಣದಲ್ಲಿ ಪುಸ್ತಕಗಳು ಬರದೆ ಪಾಠ ಮಾಡುವುದು ಏನನ್ನು ಎಂದು ಶಿಕ್ಷಕರು ದಿಕ್ಕು ತೋಚದೇ ಕುಳಿತಿದ್ದಾರೆ.
ಎಲ್ಲ ಕಡೆ ಹಳೆಯ ಪಠ್ಯ ಪುಸ್ತಕವನ್ನಾಧರಿಸಿ ಪಾಠ ಪ್ರವಚನ ನಡೆಸಲಾಗುತ್ತಿದೆ. ಆದರೆ ಹೊಸ ಪುಸ್ತಕ ಬಂದಾಗ ಕಳವಳಗೊಳ್ಳು ತ್ತಿದ್ದಾರೆ. ಏಕೆಂದರೆ ಅದರಲ್ಲಿ ಆ ಪಾಠವೇ ಇರುವುದಿಲ್ಲ ಅಥವಾ ಇನ್ನಷ್ಟು ವ್ಯಾಕರಣ ಪಾಠ ಗಳಿವೆ. ಮಾಸಿಕ ಇಂತಿಷ್ಟು ಪಾಠ ಬೋಧನೆಯಾಗ ಬೇಕೆಂದು ಶಿಕ್ಷಣ ಇಲಾಖೆಯೇ ವೇಳಾಪಟ್ಟಿ ನಿಗದಿ ಮಾಡುತ್ತದೆ. ಆದರೆ ಪುಸ್ತಕಗಳನ್ನೇ ಕೊಡದೇ ಪಾಠ ಮುಗಿಸುವುದು ಹೇಗೆ ಎಂದು ಶಿಕ್ಷಕರು ಪ್ರಶ್ನಿಸುತ್ತಿದ್ದಾರೆ.
ವಿತರಣೆಯಲ್ಲಿ ಬೇಜವಾಬ್ದಾರಿ
ಪಠ್ಯ ಪುಸ್ತಕಗಳನ್ನು ಮುದ್ರಿಸಿ ಸರಬರಾಜು ಮಾಡಲು ಸರಕಾರದಿಂದ ಜವಾಬ್ದಾರಿ ವಹಿಸಿ ಕೊಂಡ ಸಂಸ್ಥೆಯ ಬೇಜವಾಬ್ದಾರಿ ಕೋಟ್ಯಂ ತರ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟ ವಾಡು ತ್ತಿದೆ. ಹೀಗೊಂದು ಅಪರಾತಪರಾ ನೋಡಿ. ಕೆಲವು ದಿನಗಳ ಹಿಂದೆ 6ನೇ ತರಗತಿಯ ಸಮಾಜ ಪಠ್ಯದ ಎರಡನೇ ಭಾಗ ಬಂದಿತ್ತು. ಮೊದಲ ಭಾಗವೇ ಬಂದಿರಲಿಲ್ಲ. ಎರಡನೇ ಭಾಗವನ್ನು ನವೆಂಬರ್ ಅನಂತರ ಬೋಧಿಸ ಬೇಕಿದ್ದು ಈ ಅವಧಿಯಲ್ಲಿ ಬೋಧಿಸಬೇಕಾದ ಪುಸ್ತಕ ಬರದೇ ಎರಡನೇ ಭಾಗವನ್ನು ಕೊಟ್ಟ ಹೆಡ್ಡತನಕ್ಕೆ ಏನು ಮಾಡುವುದು? ಸರಬ ರಾಜು ಮಾಡಿದ ಪುಸ್ತಕಗಳ ಲೆಕ್ಕಾಚಾರ ಸರಿ ದೂಗಿಸಲು ಇಂತಹ ಉಪಾಯಗಳನ್ನೆಲ್ಲ ಮಾಡಲಾಗಿದೆ.
ಪುಸ್ತಕ ವಿತರಣೆಗೆ ತೊಂದರೆಯಾಗಬಾರದು ಹಾಗೂ ಕಾಗದದ ಕೊರತೆಯಿಂದಾಗಿ ಕೆಲ ಪುಸ್ತಕ ಗಳನ್ನು ಎರಡು ಭಾಗಗಳಾಗಿ ವಿಂಗ ಡಿಸ ಲಾಗಿದೆ. ಆದರೆ ಕಣ್ಣುಮುಚ್ಚಿ ವಿತ ರಣೆ ಮಾಡುವವರಿಂದಾಗಿ ಊಟಕ್ಕಿಲ್ಲದ ಉಪ್ಪಿನಕಾಯಿ ಆಗಿದೆ. ಒಂದೊಮ್ಮೆ ಎಲ್ಲ ಪಠ್ಯಪುಸ್ತಕಗಳನ್ನು ಇಲಾಖೆಯ ವೆಬ್‌ಸೈಟಿನಲ್ಲಾದರೂ ಹಾಕಿದ್ದರೆ ಆನ್‌ಲೈನ್ ಮೂಲಕ ಪ್ರಿಂಟ್ ತೆಗೆದು ಪಾಠ ವಾದರೂ ಮಾಡಬಹುದಿತ್ತು.
ಪುಸ್ತಕಗಳು ಬಂದಿಲ್ಲ: ಸುಮಾರು 12 ಶೀರ್ಷಿಕೆಯ ಪುಸ್ತಕ ಗಳು ಇನ್ನೂ ಶಾಲೆಗಳಿಗೆ, ಶಿಕ್ಷಣ ಇಲಾಖೆ ಕಚೇರಿಗೆ ಬಂದಿಲ್ಲ. ಇವುಗಳು ಇನ್ನೂ ಮುದ್ರಣಾಲಯದಿಂದಲೇ ಬಂದಿಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಬಾಕಿಯಾದ ಪುಸ್ತಕಗಳು
ಆಂಗ್ಲ ಮಾಧ್ಯಮದ 1ನೇ ತರಗತಿಯ ಕನ್ನಡ, 2ನೇ ತರಗತಿಯ ಗಣಿತ, 3ನೇ ತರಗತಿಯ ಗಣಿತ ಭಾಗ 1, 4ನೇ ತರಗತಿಯ ಕನ್ನಡ, ಗಣಿತ ಭಾಗ 2, 5ನೇ ತರಗತಿಯ ಕನ್ನಡ, ಗಣಿತ ಭಾಗ 2, 6ನೇ ತರಗತಿಯ ಕನ್ನಡ, 7ನೇ ತರಗತಿಯ ಕನ್ನಡ, ಇಂಗ್ಲಿಷ್ ಪ್ರಥಮ ಭಾಷೆ, 8ನೇ ತರಗತಿಯ ಸಂಸ್ಕೃತ ಪ್ರಥಮ ಭಾಷೆ, ಕನ್ನಡ ತೃತೀಯ ಭಾಷೆ, 9ನೇ ತರಗತಿಯ ವಿಜ್ಞಾನ ಭಾಗ 1, ಇಂಗ್ಲಿಷ್ ದ್ವಿತೀಯ ಭಾಷೆ, 10ನೇ ತರಗತಿಯ ವಿಜ್ಞಾನ ಭಾಗ 1, ದೈಹಿಕ ಶಿಕ್ಷಣ ಪಠ್ಯಗಳು ಬಂದಿಲ್ಲ ಎನ್ನುತ್ತಾರೆ ಖಾಸಗಿ ಶಾಲೆಯವರು.
ಶಿಕ್ಷಣ ಇಲಾಖೆ ಮೂಲಗಳ ಪ್ರಕಾರ ಎರಡನೇ ತರಗತಿಯ ಇಂಗ್ಲಿಷ್ ಆಕ್ಟಿವಿಟಿ ಪುಸ್ತಕ, 4ನೇ ತರಗತಿ ಆಂಗ್ಲಮಾಧ್ಯಮ ಗಣಿತ ಭಾಗ 2, 5ನೇ ತರಗತಿ ಆಂಗ್ಲಮಾಧ್ಯಮ ಭಾಗ 2, ಇಂಗ್ಲಿಷ್ ದ್ವಿತೀಯ ಭಾಷೆ, 6ನೇ ತರಗತಿ ಕನ್ನಡ ಮಾಧ್ಯಮ ಸಮಾಜ ವಿಜ್ಞಾನ ಭಾಗ 1, ವಿಜ್ಞಾನ, 7ನೇ ತರಗತಿ ಕನ್ನಡ ಮಾಧ್ಯಮ ವಿಜ್ಞಾನ ಭಾಗ 2, ಗಣಿತ ಭಾಗ 2, 7ನೇ ತರಗತಿ ಇಂಗ್ಲಿಷ್ ಪ್ರಥಮ ಭಾಷೆ, 7ನೇ ಆಂಗ್ಲ ಮಾಧ್ಯಮ ದೈಹಿಕ ಶಿಕ್ಷಣ, 8ನೇ ತರಗತಿ ಆಂಗ್ಲಮಾಧ್ಯಮ ಗಣಿತ ಭಾಗ 2, ಆಂಗ್ಲಮಾಧ್ಯಮ ವಿಜ್ಞಾನ ಭಾಗ 2, 8ನೇ ತರಗತಿ ತುಳು ತೃತೀಯ ಭಾಷೆ, 9ನೇ ತರಗತಿ ಕನ್ನಡ ಮಾಧ್ಯಮ ಸಮಾಜ ವಿಜ್ಞಾನ ಭಾಗ 2, ಗಣಿತ ಭಾಗ 1, ಗಣಿತ ಭಾಗ 2, ದೈಹಿಕ ಶಿಕ್ಷಣ, ಆಂಗ್ಲ ಮಾಧ್ಯಮ ಸಮಾಜ ವಿಜ್ಞಾನ ಭಾಗ 2, ವಿಜ್ಞಾನ ಭಾಗ 2, ಗಣಿತ ಭಾಗ 2, ಇಂಗ್ಲಿಷ್ ದ್ವಿತೀಯ ಭಾಷೆ, ಸಂಸ್ಕೃತ ಪ್ರಥಮ ಭಾಷೆ, ತುಳು ತೃತೀಯ ಭಾಷೆ, 10ನೇ ತರಗತಿ ಕನ್ನಡ ಮಾಧ್ಯಮ ಗಣಿತ ಭಾಗ 2, ಸಂಸ್ಕೃತ ತೃತೀಯ ಭಾಷೆ, ತುಳು ತೃತೀಯ ಭಾಷೆಯ ಪಠ್ಯ ಪುಸ್ತಕಗಳು ಬಂದಿಲ್ಲ. ನವೆಂಬರ್‌ನಲ್ಲೇ ಎಷ್ಟು ಪುಸ್ತಕ ಬೇಕೆಂದು ಅಂಕಿ-ಅಂಶ ತೆಗೆದುಕೊಂಡರೂ ಬೆಳ್ತಂಗಡಿ ತಾಲೂಕೊಂದಕ್ಕೇ 35,922 ಪುಸ್ತಕಗಳು ಬರಬೇಕಿವೆ.
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.