ಮದ್ಯದಂಗಡಿ ತೆರೆಯಲು ಅವಕಾಶ ನೀಡದಂತೆ ಪಂ. ಗೆ ಮನವಿ
Team Udayavani, Jul 13, 2017, 3:30 AM IST
ಪಂಜ: ಸುಬ್ರಹ್ಮಣ್ಯ ವ್ಯಾಪ್ತಿಯ ಬಾರೊಂದು ತೆರವಾಗಿದ್ದು, ಅದೀಗ ಸಮೀಪದ ಅರಂಪಾಡಿ, ಮಲೆಯಾಳದಲ್ಲಿ ತೆರೆಯುವುದೆಂದು ಸುದ್ದಿ ಹರಡಿದೆ. ಸುಬ್ರಹ್ಮಣ್ಯ ಹಾಗೂ ಅಲ್ಲಿನ ಪರಿಸರದ ಜನರಲ್ಲಿ ಆತಂಕ ಸೃಷ್ಠಿಸಿದೆ.
ಅರಂಪಾಡಿ, ಎಡ್ಡೋಳಿ ಎಂಬಲ್ಲಿ ಲೋಕೋಪಯೋಗಿ ಯೊಜನೆಯಡಿ ಸಂಪರ್ಕ ರಸ್ತೆಯಾಗಲಿದ್ದು ಅದು ಅರಣ್ಯ ಪ್ರದೇಶವಾಗಿದೆ. ಇಲ್ಲಿ ಬೆಲೆಬಾಳುವ ಮರಗಳಿವೆ. ಮರಗಳ್ಳರಿಗೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಅಲ್ಲದೆ ಆ ಪ್ರದೇಶದಿಂದ ಹೆಣ್ಣು ಮಕ್ಕಳು ಹಾಗೂ ಹೆಂಗಸರು ನಡೆದಾಡದಂತಾಗಬಹುದು. ಆದುದರಿಂದ ಸುಬ್ರಹ್ಮಣ್ಯ ವ್ಯಾಪ್ತಿಯ ಆಸುಪಾಸಿನಲ್ಲಿ ಹಾಗೂ ಅರಂಪಾಡಿ, ಮಲೆಯಾಳ ಎಂಬಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅವಕಾಶ ನೀಡ ಬಾರದು ಹಾಗೂ ಅವಕಾಶ ನೀಡಿದ್ದಲ್ಲಿ ಉಗ್ರವಾದ ಪ್ರತಿಭಟನೆಯನ್ನು ಮಾಡಲು ಊರಿನ ಹಾಗೂ ಸಂಘ, ಸಂಸ್ಥೆಯ ಜನರು ಸಿದ್ಧರಾಗಿದ್ದೇವೆ ಆದುದರಿಂದ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೊಜನೆ ಸುಬ್ರಹ್ಮಣ್ಯ ಮತ್ತು ಸ್ಥಳೀಯ ನಾಗರಿಕರು ಸೋಮವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೊಜನೆಯ ಸುಬ್ರಹ್ಮಣ್ಯ ಘಟಕದ ಮೇಲ್ವಿಚಾರಕಿ ಹರಿಣಿ, ಸ್ಥಳೀಯ ನಾಗರಿಕರಾದ ಈಶ್ವರ ಗೌಡ, ಶಾಂತಕುಮಾರ್ ಭಟ್, ಅನಿಲ್ ಕುಮಾರ್, ಮಂಜುನಾಥ್ ಅರಂಪಾಡಿ, ಸುಬ್ರಹ್ಮಣ್ಯ ಶೆಟ್ಟಿ ಮಲೆಯಾಳ, ಮೋನಿ ಅರಂಪಾಡಿ, ದೀಪಕ್, ಪ್ರತೀಶ್, ಗಣೇಶ ಅರಂಪಾಡಿ, ಗಣೇಶ್ ಹೊಸೊಳಿಕೆ, ಲಲಿತ ಎಸ್ಬಿ ಸುಬ್ರಹ್ಮಣ್ಯ, ಶೈಲಜಾ ಕುಲ್ಕುಂದ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.