ಪರೀಕ್ಷೆ ಬೇಗನೆ ಮುಗಿಸಲು ಸೂಚನೆ
Team Udayavani, Mar 10, 2020, 5:41 AM IST
ಮಂಗಳೂರು/ಉಡುಪಿ: ಕೊರೊನಾ ಆತಂಕ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಾ. 23ರೊಳಗೆ ವಾರ್ಷಿಕ ಪರೀಕ್ಷೆಗಳನ್ನು ಮುಗಿಸಬೇಕು ಎಂಬುದಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ಜಿಲ್ಲೆಯ ಎಲ್ಲ ಖಾಸಗಿ, ಅನುದಾನಿತ, ಅನುದಾನರಹಿತ ಹಾಗೂ ಸರಕಾರಿ ಶಾಲೆಗಳಿಗೆ ಇದು ಅನ್ವಯವಾಗಲಿದೆ.
ಪ್ರತಿ ವಿದ್ಯಾರ್ಥಿ ಕೈಗೆ ಲೆಟರ್!
ಕೊರೊನಾ ಆತಂಕದಿಂದಾಗಿ ಅವಳಿ ಜಿಲ್ಲೆಯ ಕೆಲವು ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಪತ್ರ ನೀಡಿ ಪೋಷಕರಿಗೆ ನೀಡುವಂತೆ ತಿಳಿಸಲಾಗಿದೆ. ಪತ್ರ ಓದಿದ ಪೋಷಕರಲ್ಲೂ ಗೊಂದಲ ಮೂಡಿದೆ. ಸಾಧ್ಯವಾದರೆ ಮಾಸ್ಕ್ ತೊಡಿಸಿಯೇ ಮಕ್ಕಳನ್ನು ಶಾಲೆಗೆ ಕಳುಹಿಸಿ, ಜ್ವರ, ಕೆಮ್ಮು, ಶೀತ, ತಲೆನೋವು ಕಂಡುಬಂದರೆ ಅಂತಹ ಮಗುವನ್ನು ಶಾಲೆಗೆ ಕಳುಹಿಸಬೇಡಿ, ಜ್ವರ, ತಲೆನೋವಿನಂತಹ ಯಾವುದೇ ಲಕ್ಷಣ ಕಂಡು ಬಂದರೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ, ತತ್ಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಿ, ಶಾಲೆಯ ಶಿಕ್ಷಕರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಿ ಸಹಿತ ಹಲವು ಅಂಶಗಳನ್ನು ಪತ್ರ ದಲ್ಲಿ ಉಲ್ಲೇಖೀಸಲಾಗಿದೆ.
ಬ್ಯಾಂಕ್ ಸಿಬಂದಿ ಮಾಸ್ಕ್ ಧರಿಸಿ ಕೆಲಸ
ದ.ಕ. ಜಿಲ್ಲೆಯಲ್ಲಿ ಸಾರ್ವಜನಿಕರೊಂದಿಗೆ ಅತೀ ಹೆಚ್ಚು ಬೆರೆಯುವ ಕೆಲಸ ಇರುವ ಬ್ಯಾಂಕ್ ಸಿಬಂದಿಗೂ ಕೊರೊನಾ ಆತಂಕ ಎದುರಾಗಿದೆ. ಕೆಲವು ಬ್ಯಾಂಕ್ಗಳ ಸಿಬಂದಿಗೆ ಮಾಸ್ಕ್ ಧರಿಸಿಯೇ ಕೆಲಸ ನಿರ್ವಹಿಸುವಂತೆ ಮೇಲಧಿಕಾರಿಗಳಿಂದ ಸೂಚನೆ ಬಂದಿದೆ. ಹೀಗಾಗಿ ಕೆಲವು ಬ್ಯಾಂಕ್ಗಳ ಅಧಿಕಾರಿಗಳು, ಸಿಬಂದಿ ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಗ್ಲೌಸ್ ಧರಿಸಿಯೇ ಕೆಲಸ ನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.