ಕರಟುತ್ತಿದೆ ಬಂಗಾರದಂತಹ ಅಡಿಕೆ ಹಿಂಗಾರ
Team Udayavani, Apr 23, 2019, 7:09 AM IST
ಪುತ್ತೂರು: ಕರಾವಳಿ ಭಾಗದಲ್ಲಿ ಉಷ್ಣತೆಯ ಪ್ರಮಾಣ 35 ಡಿಗ್ರಿ ಸೆಲ್ಸಿಯಸ್ ಮೀರಿ ಸಾಗುತ್ತಿದೆ. ಇದರ ಪ್ರತಿಫಲವಾಗಿ ಬಂಗಾರದಂತೆ ಕಂಗೊಳಿಸುತ್ತಿದ್ದ ಅಡಿಕೆ ಹಿಂಗಾರ ಅವಧಿಗೆ ಮೊದಲೇ ಒಡೆದು ಅಡಿಕೆ ನಳ್ಳಿ ಬೆಳೆಯುವ ಮೊದಲೇ ಕರಟುತ್ತಿದೆ.
ಗಿಡವೊಂದರ ಆರೋಗ್ಯದ ಉಷ್ಣತೆಯಲ್ಲಿ ಏರುವೇರಾಗುವುದನ್ನು ವೈಜ್ಞಾನಿಕ ಭಾಷೆಯಲ್ಲಿ ‘ಹೋಮಿಯೋಸ್ಟಟಿಸ್’ ಎನ್ನುತ್ತಾರೆ. ಉಷ್ಣತೆ ಹೆಚ್ಚಾಗುವ ಹಂತದಲ್ಲಿ ಗಿಡದ ಸ್ವಾಭಾವಿಕ ಕ್ರಿಯೆ ಅಥವಾ ಬೆಳವಣಿಗೆ ತಟಸ್ಥಗೊಳ್ಳುತ್ತದೆ. ಕನಿಷ್ಠ 14ರಿಂದ 18 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 30ರಿಂದ 35 ಡಿಗ್ರಿ ಸೆ. ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಅಡಿಕೆ ಗಿಡಗಳು ಹೊಂದಿವೆ. ಇದಕ್ಕಿಂತ ಹೆಚ್ಚು ತಾಪಮಾನ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನೀರಿನ ಪ್ರಮಾಣ ಬಹುತೇಕ ಕಡಿಮೆಯಾಗಿದ್ದರಿಂದ ಉರಿಬಿಸಿಲಿನ ವಾತಾವರಣ ಅಡಿಕೆ ಗಿಡಗಳ ಸ್ವಾಭಾವಿಕ ಕ್ರಿಯೆಗಳಿಗೆ ತೊಡಕಾಗಿದೆ.
ನಿಗದಿತ ತಾಪಮಾನ ಮತ್ತು ಸಾಕಷ್ಟು ನೀರು ಗಿಡಕ್ಕೆ ಲಭ್ಯವಾಗದಿದ್ದರೆ ಹೋಮಿಯೋಸ್ಟಟಿಸ್ ಬಾಧೆ ತಗಲುತ್ತದೆ. ಈ ಬಾಧೆ ಹಸಿರೆಲೆ ಹೊಂದಿರುವ ಎಲ್ಲ ಸಸ್ಯವರ್ಗಕ್ಕೂ ಬಾಧಿಸುವುದಿದ್ದರೂ ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಗೆ ಮಾರಕವಾಗಿ ಪರಿಣಮಿಸಿರುವುದು ಬೆಳೆಗಾರರಿಗೆ ತಲೆನೋವು ತಂದಿರಿಸಿದೆ.
ಪರಿಣಾಮವೇನು?
ಸಾಮಾನ್ಯವಾಗಿ ಅಡಿಕೆ ಮರ ಎಪ್ರಿಲ್, ಮೇ ತಿಂಗಳಲ್ಲಿ ಹಿಂಗಾರ ಒಡೆದು ನೈಸರ್ಗಿಕವಾಗಿ ಅಡಿಕೆ ನಳ್ಳಿಗಳು ಬೆಳೆಯಲಾರಂಭಿಸುತ್ತವೆ. ಆದರೆ ಉಷ್ಣತೆಯ ತೀವ್ರತೆಯ ಬಾಧೆಗೊಳಗಾದ ಅಡಿಕೆ ಮರಗಳಲ್ಲಿ ನಿಗದಿತ ಸಮಯದ ಮುನ್ನವೇ ಹಿಂಗಾರ ಒಡೆದು ಹಾಳೆ ಸೀಳುತ್ತದೆ. ಅನಂತರ ಚಿಗುರುವ ಅಡಿಕೆ ನಳ್ಳಿಗಳು ಬಿಸಿಲ ತಾಪಮಾನ ತಡೆದುಕೊಳ್ಳದೆ ಕರಟಿ ಹೋಗುತ್ತಿವೆ.
ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ಭಾಗದ ಅಡಿಕೆ ತೋಟಗಳಲ್ಲಿ ಈ ಬಾಧೆ ಕಾಣಿಸಿಕೊಂಡಿದ್ದು, ಮಳೆ ಅಥವಾ ಉಷ್ಣತೆಯ ಇಳಿಕೆಯನ್ನು ಹೊರತುಪಡಿಸಿದ ಔಷದ ಇದಕ್ಕೆ ಇಲ್ಲ. ಸಮತಟ್ಟು ನೆಲ ಹಾಗೂ ನೀರು ರಹಿತ ಇಳಿಜಾರು ಪ್ರದೇಶದಲ್ಲಿ ಬೆಳೆದ ಅಡಿಕೆ ತೋಟಗಳಲ್ಲಿ ಈ ಬಾಧೆ ಹೆಚ್ಚಾಗಿ ಕಂಡುಬಂದಿದೆ.
ಚೇತರಿಕೆಗೆ ಬೇಕು ಸಮಯ
ಹೋಮಿಯೋಸ್ಟಟಿಸ್ ಬಾಧೆ ಅಥವಾ ಅಡಿಕೆ ಎಳೆಗಳು ಬಿಸಿಲಿಗೆ ಕೆಂಪಾಗುವುದರಿಂದ ಅಡಿಕೆ ಮರಗಳು ಸಾಯುವುದಿಲ್ಲ. ಆದರೆ ಬೆಳವಣಿಗೆ ಕುಂಠಿತವಾಗುತ್ತದೆ. ಆರೋಗ್ಯ ತೊಂದರೆಗೊಳಗಾದ ಅಡಿಕೆ ಮರಗಳು ಚೇತರಿಸಿಕೊಳ್ಳಲು ಎರಡರಿಂದ ಮೂರು ವರ್ಷಗಳು ಬೇಕಾಗುತ್ತವೆ ಎನ್ನುವುದು ಕೃಷಿ ತಜ್ಞರ ಅಭಿಪ್ರಾಯ.
ಹೊಸ ತಳಿಗಳಿಗೆ ಸಾಮರ್ಥ್ಯವಿಲ್ಲ
ಕರಾವಳಿ ಭಾಗದಲ್ಲಿನ ತಳಿಗಳ ಅಡಿಕೆ ಮರಗಳಿಗೆ 35 ಡಿಗ್ರಿ ಸೆ. ತನಕದ ಉಷ್ಣಾಂಶ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಹೊಸದಾಗಿ ಬಂದಿರುವ ಅಡಿಕೆ ತಳಿಗಳಿಗೆ ಅಷ್ಟೊಂದು ಸಾಮರ್ಥ್ಯವಿಲ್ಲ. ಸಸ್ಯದ ದೇಹದ ಉಷ್ಣತೆಯಲ್ಲಿ ಏರುಪೇರಾಗುವ ಬಾಧೆ ಇದು. ಇದರ ಪರಿಹಾರಕ್ಕಾಗಿ ಮಳೆ ಸುರಿದು ಉಷ್ಣತೆಯ ವಾತಾವರಣ ಕಡಿಮೆಯಾಗಬೇಕು.
ನಿಖಿತಾ ಎನ್. ಕೆ. ಪರಿಸರ ವಿಜ್ಞಾನ ಸಂಶೋಧಕಿ, ಮಂಗಳೂರು
ಉತ್ತಮ ಮಳೆಯೊಂದೇ ಪರಿಹಾರ
ಹೊಸ ತಳಿಗಳಿಗೆ ಸಾಮರ್ಥ್ಯವಿಲ್ಲಕರಾವಳಿ ಭಾಗದಲ್ಲಿನ ತಳಿಗಳ ಅಡಿಕೆ ಮರಗಳಿಗೆ 35 ಡಿಗ್ರಿ ಸೆ. ತನಕದ ಉಷ್ಣಾಂಶ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಹೊಸದಾಗಿ ಬಂದಿರುವ ಅಡಿಕೆ ತಳಿಗಳಿಗೆ ಅಷ್ಟೊಂದು ಸಾಮರ್ಥ್ಯವಿಲ್ಲ. ಸಸ್ಯದ ದೇಹದ ಉಷ್ಣತೆಯಲ್ಲಿ ಏರುಪೇರಾಗುವ ಬಾಧೆ ಇದು. ಇದರ ಪರಿಹಾರಕ್ಕಾಗಿ ಮಳೆ ಸುರಿದು ಉಷ್ಣತೆಯ ವಾತಾವರಣ ಕಡಿಮೆಯಾಗಬೇಕು. – ನಿಖೀತಾ ಎನ್. ಕೆ. ಪರಿಸರ ವಿಜ್ಞಾನ ಸಂಶೋಧಕಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.