ಅಡಿಕೆ ವ್ಯಾಪಾರಿ ಆತ್ಮಹತ್ಯೆ
Team Udayavani, May 25, 2017, 2:40 PM IST
ಬಂಟ್ವಾಳ: ಬಿ.ಕಸ್ಬಾ ಗ್ರಾಮ ಕಾಲೇಜು ರಸ್ತೆ ನಿವಾಸಿ ಅಡಿಕೆ ವ್ಯಾಪಾರಿ ಮನೋಹರ ಶೆಟ್ಟಿ (35) ಅಡಿಕೆ ಮರಕ್ಕೆ ಸಿಂಪಡಿಸುವ ಕೀಟನಾಶಕ (ಮೈಲುತುತ್ತು) ಸೇವಿಸಿ ಮೇ 24ರಂದು ಬಿ.ಸಿ.ರೋಡ್ ಸಮೀಪದ ನಿರ್ಜನ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಅವರ ಕಿಸೆಯಲ್ಲಿ ಪತ್ರವೊಂದು ದೊರಕಿದ್ದು ಅದರಲ್ಲಿ ನನಗೆ ಬದುಕಲು ಆಸಕ್ತಿ ಇಲ್ಲ. ನಿಮಗೆಲ್ಲಾ ಬೇಸರ ಆಗಬಹುದು ಎಂದು ಬರೆದು ಇತರ ವ್ಯಾವಹಾರಿಕ ವಿಷಯಗಳ ಅನಂತರ, ಕೊನೆಯ ವಾಕ್ಯ ತುಳುವಿನಲ್ಲಿದ್ದು ಮೃತ ದೇಹವನ್ನು ಬಡ್ಡಕಟ್ಟೆ ಸಾರ್ವಜನಿಕ ಶ್ಮಶಾನದಲ್ಲಿ ದಹನ ಮಾಡಬೇಕು ಎಂದು ಬರೆಯಲಾಗಿತ್ತು. ಬುಧವಾರ ಬೆಳಗ್ಗೆ ಅವರು ಮನೆಯಲ್ಲಿ ನಿತ್ಯಕರ್ಮಗಳನ್ನು ಮುಗಿಸಿ, ಹತ್ತಿರದ ಮನೆಗೆ ಹಾಲು ನೀಡಿ ಮನೆಗೆ ಬಂದು ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೊರಟಿದ್ದು ಬಳಿಕ ಮಧ್ಯಾಹ್ನ 12 ಗಂಟೆ ತನಕವೂ ಅಂಗಡಿಗಾಗಲಿ, ಮನೆಗಾಗಲಿ ಬಾರದ ಹಿನ್ನೆಲೆಯಲ್ಲಿ ಮನೆಮಂದಿ ಮತ್ತು ಸ್ನೇಹಿತರು ಹುಡುಕಾಟ ನಡೆಸಿದ್ದರು.
ಹುಡುಕುತ್ತಿದ್ದ ಸಂದರ್ಭ ನೇತ್ರಾವತಿ ನದಿ ಕಾಂಕ್ರಿಟ್ ಸೇತುವೆಯಲ್ಲಿ ಅವರ ಬೈಕ್ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಂಕಿಸಲಾಗಿತ್ತು. ಅವರ ಮೊಬೈಲ್ ಟವರ್ ಲೊಕೇಶನ್ ನೋಡಿದಾಗ ಬಿ.ಸಿ.ರೋಡ್ ಚಿಕ್ಕಯ್ಯಮಠ ಸನಿಹ ತೋರಿಸಿದ್ದು ಹುಡುಕಿದಾಗ ಪೊದೆಯ ಅಡಿಯಲ್ಲಿ ಬಿದ್ದಿರುವುದು ಕಂಡು ಬಂದಿತ್ತು.
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅವರು ಸ್ಥಳಕ್ಕೆ ಬಂದ ಬಳಿಕ ಶವವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಶವ ಇದ್ದ ಸ್ಥಳದಲ್ಲಿ ಬಹಳಷ್ಟು ಹೊತ್ತು ಹೊರಳಾಡಿದ ಕಾರಣ ಉಟ್ಟುಕೊಂಡಿದ್ದ ಜಾಕೆಟ್ ಮಣ್ಣಿನಿಂದ ತುಂಬಿತ್ತು. ಯಾವುದೇ ಗಾಯಗಳು ಇರಲಿಲ್ಲ. ಮೊಬೈಲ್ ಕಾಲಿನ ಬಳಿ ಬಿದ್ದಿತ್ತು. ಮೃತರು ಬಂಟ್ವಾಳದಲ್ಲಿ ಅಡಿಕೆ ವ್ಯಾಪಾರಿಯಾಗಿದ್ದು ಸುಮಾರು 65 ಸಾವಿರ ರೂ.ಗಳಷ್ಟು ನಷ್ಟ ಹೊಂದಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಂಕಿಸಲಾಗಿದೆ.
ಸುಮಾರು ನಾಲ್ಕು ವರ್ಷಗಳ ಹಿಂದೆ ಅವರ ಕಿರಿಯ ಸಹೋದರ ತಿರುಪತಿಗೆ ಹೋಗುವಾಗ ಬೆಂಗಳೂರು ಬಳಿ ವಾಹನ ಅಪಘಾತದಲ್ಲಿ ಮೃತರಾಗಿದ್ದರು. ಮೃತರು ತಂದೆ ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಮುಖಂಡ ರಾಜೇಶ್ ನಾೖಕ್ ಉಳಿಪಾಡಿಗುತ್ತು, ಕ್ಷೇತ್ರ ಅಧ್ಯಕ್ಷ ದೇವದಾಸ ಶೆಟ್ಟಿ, ದಿನೇಶ್ ಭಂಡಾರಿ, ರಾವåದಾಸ್ ಬಂಟ್ವಾಳ, ಜಿ. ಆನಂದ, ಉದಯ ಕುಮಾರ್, ಗೋವಿಂದ ಪ್ರಭು ಮೊದಲಾದ ನಾಯಕರು ಶವ ವಿಲೇವಾರಿ ಬಗ್ಗೆ ವ್ಯವಸ್ಥೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.