ಅ. 2 – 4: ಅಮಿತ್ ಶಾ ಮಂಗಳೂರಿನಲ್ಲಿ
Team Udayavani, Oct 1, 2017, 8:55 AM IST
ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಅ. 2ರಿಂದ 4ರ ತನಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದು, ಅ. 4ರಂದು ಇಡೀ ದಿನ ಮಂಗಳೂರಿನಲ್ಲಿ ಪಕ್ಷ ಸಂಘಟನೆ ಮತ್ತು ಇತರ ವಿಷಯಗಳ ಬಗ್ಗೆ ಬಿಜೆಪಿ ರಾಜ್ಯ ನಾಯಕರ ಜತೆ ಚರ್ಚೆ, ಪ್ರಮುಖರ ಜತೆ ಸಭೆಯಲ್ಲಿ ಭಾಗವಹಿಸುವರು.
ಶಾ ಅವರು ಕೇರಳದಲ್ಲಿ ಬಿಜೆಪಿ ಹಮ್ಮಿಕೊಂಡಿರುವ 1 ವಾರ ಅವಧಿಯ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಂದರ್ಭ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅ. 2ರಂದು ಸಂಜೆ 6 ಗಂಟೆಗೆ ಶಾ ಮಂಗಳೂರಿಗೆ ಆಗಮಿಸಲಿದ್ದಾರೆ ವಿಮಾನ ನಿಲ್ದಾಣದಿಂದ ಸುಮಾರು 250-300ರಷ್ಟು
ವಾಹನಗಳ ಮೆರವಣಿಗೆಯಲ್ಲಿ ಅವರನ್ನು ತಲಪಾಡಿ ತನಕ ಕರೆದೊಯ್ದು ಅಲ್ಲಿ ಕೇರಳದ ಬಿಜೆಪಿ ನಾಯಕರು ಸ್ವಾಗತಿಸುವ ಸ್ಥಳದಲ್ಲಿ ಬೀಳ್ಕೊಡುವರು. ಅ. 3ರಂದು ಸಂಜೆ ಮಂಗಳೂರಿಗೆ ವಾಪಸಾಗಿ ವಾಸ್ತವ್ಯ ಮಾಡುವರು.
ಬಿಜೆಪಿ ಪ್ರಬುದ್ಧರ ಸಭೆ
ಅ. 4ರಂದು ಬೆಳಗ್ಗೆ 10 ಗಂಟೆಗೆ ಕೊಡಿಯಾಲ್ಬೈಲ್ನ ಓಶಿಯನ್ ಪರ್ಲ್ ಹೊಟೇಲ್ನಲ್ಲಿ ರಾಜ್ಯ ಬಿಜೆಪಿ ನಾಯಕರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸುವರು. ಸಂಜೆ 5 ಗಂಟೆಗೆ ಎಂ.ಜಿ. ರಸ್ತೆಯ ಡಾ| ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್ನಲ್ಲಿ ಜಿಲ್ಲಾ ಬಿಜೆಪಿ ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಳ್ಳುವರು.
ಕಾರ್ಯಕರ್ತರಿಗೆ ಪ್ರೇರಣೆ
ಮಂಗಳೂರು ಭೇಟಿಯ ಸಂದರ್ಭದಲ್ಲಿ ಶಾ ಅವರು ದ.ಕ. ಜಿಲ್ಲೆಯಲ್ಲಿ ಕಳೆದ 2- 3 ತಿಂಗಳಲ್ಲಿ ನಡೆದ ಘಟನೆಗಳ ಬಗ್ಗೆ ಚರ್ಚೆ ನಡೆಸುವರು ಹಾಗೂ ಕಾರ್ಯಕರ್ತರಿಗೆ ಪ್ರೇರಣೆ ನೀಡಲಿದ್ದಾರೆ. ಅ. 5 ರಂದು ಬೆಳಗ್ಗೆ ದಿಲ್ಲಿಗೆ ನಿರ್ಗಮಿಸುವರು.
ಪುತ್ತೂರಿನ ಪಾದಯಾತ್ರೆ ಮುಂದಕ್ಕೆ
ಪುತ್ತೂರಿನ ಪಡುಮಲೆಯಲ್ಲಿ ದೇಯಿ ಬೈದ್ಯೆತಿ ಮೂರ್ತಿ ಅವಮಾನ ಪ್ರಕರಣ ಖಂಡಿಸಿ ಬಿಜೆಪಿ ವತಿಯಿಂದ ಅ. 2ರಂದು ಪುತ್ತೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆಯನ್ನು ಅ. 10ಕ್ಕೆ ಮುಂದೂಡಲಾಗಿದೆ. ಪಕ್ಷಾಧ್ಯಕ್ಷ ಶಾ ಅವರ ಜಿಲ್ಲಾ ಭೇಟಿ ಪ್ರಯುಕ್ತ ಈ ಕ್ರಮ ಕೈಗೊಳ್ಳಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ಕೆ. ಮೋನಪ್ಪ ಭಂಡಾರಿ, ಜಿತೇಂದ್ರ ಕೊಟ್ಟಾರಿ, ಪ್ರಭಾ ಮಾಲಿನಿ, ಪೂಜಾ ಪೈ, ಸಂಜಯ ಪ್ರಭು, ಕಿಶೋರ್ ರೈ, ಬೃಜೇಶ್ ಚೌಟ, ವೇದವ್ಯಾಸ ಕಾಮತ್, ಸುದರ್ಶನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.