ಒಡಿಶಾ ಸಂಪ್ರದಾಯದ ಅನಾವರಣ
Team Udayavani, Apr 2, 2018, 2:48 PM IST
ಮಹಾನಗರ: ಮಂಗಳೂರು ಒಡಿಯ ಕಲ್ಚರಲ್ ಅಸೋಸಿಯೇಶನ್ ವತಿಯಿಂದ ರವಿವಾರ ನಗರದ ಮಂಗಳಾ ಕ್ರೀಡಾಂಗಣ ಬಳಿಯ ರೋಟರಿ ಬಾಲಭವನದಲ್ಲಿ ಉತ್ಕಲ್ ದಿನವನ್ನು ಆಚರಿಸಲಾಯಿತು. ಮಣಿಪಾಲ ವಿ.ವಿ. ನಿವೃತ್ತ ಪ್ರಾಧ್ಯಾಪಕ ಡಾ| ರಮೇಶ್‌ಚಂದ್ರ ಸಾಹೂ ಮಾತನಾಡಿ, ಇದೀಗ ಎರಡನೇ ವರ್ಷ ಮಂಗಳೂರಿನಲ್ಲಿ ಉತ್ಕಲ್ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಇದರಲ್ಲಿ ಒಡಿಶಾದ ಹಲವಾರು ಮಂದಿ ಭಾಗವಹಿಸುತ್ತಿದ್ದು, ಅವರವರ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ ಎಂದು ತಿಳಿಸಿದರು.
ಮಂಗಳೂರಿನಲ್ಲಿ ಸುಮಾರು 120 ಒಡಿಶಾ ಕುಟುಂಬಗಳಿದ್ದು, 500ಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ನಗರದ ಆಸ್ಪತ್ರೆಗಳು, ಬ್ಯಾಂಕ್, ಎನ್‌ಎಂಪಿಟಿ, ಎಂಆರ್‌ಪಿಎಲ್, ರೈಲ್ವೇ ಇಲಾಖೆ, ಮೆಡಿಕಲ್ ಕಾಲೇಜು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ನಾನಾ ಸಂಸ್ಥೆಗಳಲ್ಲಿ ಒಡಿಶಾ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯ ಒಡಿಶಾ ಮಂದಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಸ್‌ಇಝಡ್ ಚೀಫ್ ಪೈನಾನ್ಶಿಯಲ್ ಆಫೀಸರ್ ಗೌರಂಗ್ ಸ್ವೆ„ನ್, ಕಾರ್ಪೊರೇಷನ್ ಬ್ಯಾಂಕ್ ಕಾರ್ಪೊರೇಟ್ ಆಫೀಸ್‌ನ ಡಿಜಿಎಂ ಶಾಂತನು ದಾಸ್, ಕೆಎಂಸಿಯ ಡಾ| ಕೌಸಲ್ಯಾ ಸಾಹೋ, ಏರ್‌ಇಂಡಿಯಾ ಮಂಗಳೂರಿನ ಸರ್ವಿಸ್ ಎಂಜಿನಿಯರ್ ಸರ್ಬೆಶ್ವರ್ ಸಾಹೂ ಮೊದಲಾದವರು ಉಪಸ್ಥಿತರಿದ್ದರು.
ಕಲೆಗೆ ಪ್ರೋತ್ಸಾಹ
ದ ಇಂಡಿಯನ್ ಅಸೋಸಿಯೇಶನ್ ಆಫ್ ಫಿಸಿಯೋತೆರಪಿಸ್ಟ್ ಅಧ್ಯಕ್ಷ ಡಾ| ಉಮಾಶಂಕರ್ ಮೊಹಾಂತಿ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಒಡಿಶಾ ಸಾಂಪ್ರದಾಯಿಕ ಕಲೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.