‘ಒಡಿಯೂರು ಶ್ರೀಗಳ ಮಾರ್ಗದರ್ಶನ ಸ್ಮ ರಣೀಯ’
Team Udayavani, Nov 26, 2017, 10:25 AM IST
ಮಹಾನಗರ: ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಸಮಾಜಕ್ಕೆ ಆಧ್ಯಾತ್ಮಿಕತೆಯೊಂದಿಗೆ ಉನ್ನತವಾದ ಜೀವನ, ಸಂಸ್ಕಾರ ಬೆಳೆಯಲು ಒಡಿಯೂರು ಶ್ರೀಗಳ ಮಾರ್ಗದರ್ಶನ ಸ್ಮರಣೀಯವಾಗಿದೆ. ಅವರ ಆದರ್ಶದಿಂದಲೇ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಉತ್ತಮವಾಗಿ ಬೆಳೆದಿದೆ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು. ಅವರು ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪಚ್ಚನಾಡಿ ಘಟ ಸಮಿತಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು.
ಸಾಮರಸ್ಯ ಸಮಾಜ ನಿರ್ಮಾಣ
ಕಾರ್ಯಕ್ರಮವನ್ನು ಉದ್ಘಾಟಿಸಿದ ಯೋಜನೆಯ ಪ್ರಧಾನ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ, ಹೃದಯ ಶ್ರೀಮಂತಿಕೆಯಿಂದ ಸಂಘಟನೆಯನ್ನು ಬಲಪಡಿಸುವುದರೊಂದಿಗೆ ಆ ಪರಿಸರದಲ್ಲಿ ಆದರ್ಶಮಯ, ಸಂಸ್ಕಾರಯುತವಾದ ಗ್ರಾಮ ನಿರ್ಮಾಣವಾಗಲು ಸಾಧ್ಯ. ಒಡಿಯೂರು ಶ್ರೀಗಳ ಆಶಯದಂತೆ ನಮ್ಮತನವನ್ನು ಮರೆಯದೇ ಸಾಮರಸ್ಯ ಸಮಾಜ ನಿರ್ಮಾಣದೊಂದಿಗೆ ಗ್ರಾಮ ವಿಕಾಸ ಯೋಜನೆ ಬೆಳೆದಿದೆ ಎಂದರು.
ಮಂಗಳೂರು ಶ್ರೀ ಗುರುದೇವಾ ಸೇವಾ ಬಳಗದ ಅಧ್ಯಕ್ಷ ಜಯಂತ್ ಜೆ.ಕೋಟ್ಯಾನ್ ಮುಖ್ಯಅತಿಥಿಯಾಗಿದ್ದರು. ಆಶ್ರಯ
ಮಿತ್ರವೃಂದದ ಮಾಜಿ ಅಧ್ಯಕ್ಷ ಲಿಂಗಪ್ಪ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಯುವ ಉದ್ಯಮಿ ಸಂದೀಪ್ ಬೊಂದೇಲ್, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯಾಧ್ಯಕ್ಷ ವಿವೇಕ್ ಗಾಣಿಗ, ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಮೋಹನ್ ಪಚ್ಚನಾಡಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ವ್ಯವಸ್ಥಾಪಕಿ ಸೌಮ್ಯಾ ಭಟ್, ಸಮಾಜ ಸೇವಕ ಗಂಗಾಧರ ಪಚ್ಚನಾಡಿ ಕಾವೂರು, ಘಟಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಕಾವೂರು, ಆಶ್ರಯ ಮಿತ್ರ ವೃಂದದ ನಿಯೋಜಿತ ಅಧ್ಯಕ್ಷ ಭಾಸ್ಕರ್ ಟೈಲರ್ ಉಪಸ್ಥಿತರಿದ್ದರು.
ಸೇವಾದೀಕ್ಷಿತೆ ಹರ್ಷಿತಾ ಮೋಹನ್ ವರದಿ ವಾಚಿಸಿದರು. ಘಟಸಮಿತಿಯ ಅಧ್ಯಕ್ಷೆ ಅನುರಾಧಾ ಸ್ವಾಗತಿಸಿದರು. ಕಾರ್ಯದರ್ಶಿ ಶರ್ಮಿಳಾ ವಂದಿಸಿದರು. ವಿಸ್ತರಣಾಧಿಕಾರಿ ನವೀನ್ ಶೆಟ್ಟಿ ಹಾಗೂ ವಿಕಾಸವಾಹಿನಿ ಯೋಜನೆ ಸದಸ್ಯೆ ಗಂಗಾಧರ್ ಪಚ್ಚನಾಡಿ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.