ಕಡಬದ ಪಿಜಕಳ ರಸ್ತೆಯಲ್ಲಿ ಮಳೆನೀರು: ಸ್ಥಳೀಯರಿಂದ ದೂರು
Team Udayavani, Jul 13, 2018, 1:16 PM IST
ಕಡಬ : ಕಡಬ-ಪಿಜಕಳ ರಸ್ತೆಯಲ್ಲಿ ಉಜ್ರುಪಾದೆಯ ಬಳಿ ತಿರುವಿನಲ್ಲಿರುವ ರಸ್ತೆಯ ಪಕ್ಕದ ಮೋರಿಯಿಂದ ನೀರು ಹರಿದುಹೋಗುವಲ್ಲಿ ಖಾಸಗಿ ವ್ಯಕ್ತಿಗಳು ರಬ್ಬರ್ ತೋಟಕ್ಕೆ ಮಣ್ಣು ಹಾಕಿದ ಪರಿಣಾಮವಾಗಿ ಮಳೆನೀರು ಸಂಗ್ರಹವಾಗಿ ರಸ್ತೆ ಕುಸಿಯುವ ಭೀತಿ ಎದುರಾಗಿರುವ ಕುರಿತು ಜು. 12ರಂದು ಪ್ರಕಟವಾದ ಸುದಿನ ವರದಿಗೆ ಸ್ಪಂದಿಸಿರುವ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಇಂಜಿನಿಯರ್ ರವೀಂದ್ರ ಪುತ್ತೂರು ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳೀಯರೊಬ್ಬರು ತಮ್ಮ ರಬ್ಬರ್ ತೋಟಕ್ಕೆ ಮಣ್ಣು ಹಾಕಿದ ಪರಿಣಾಮವಾಗಿ ಮೋರಿಯ ಬಳಿ ಕೆರೆಯ ರೀತಿಯಲ್ಲಿ ಮಳೆನೀರು ಸಂಗ್ರಹವಾಗಿ ಒಸರಿನಿಂದಾಗಿ ರಸ್ತೆಯೂ ಕುಸಿಯುವ ಭೀತಿ ಎದುರಾಗಿದೆ. ಅಂಗನವಾಡಿ ಹಾಗೂ ಶಾಲೆಗೆ ಹೋಗುವ ಪುಟ್ಟ ಮಕ್ಕಳು ಈ ದಾರಿಯಾಗಿ ಸಾಗುವುದರಿಂದ ತೆರೆದ ಕೆರೆಯಂತೆ ಸಂಗ್ರಹವಾಗಿರುವ ನೀರಿನಿಂದಾಗಿ ಮಕ್ಕಳಿಗೂ ಅಪಾಯ ಸಂಭವಿಸುವ ಸಾಧ್ಯತೆ ಗಳಿವೆ ಎಂದು ಸ್ಥಳೀಯ ಕುಮಾರಧಾರ ಯುವಕ ಮಂಡಲದ ಪದಾಧಿಕಾರಿಗಳು ಎಂದು ಸ್ಥಳೀಯ ಕುಮಾರಧಾರ ಯುವಕ ಮಂಡಲದ ಪದಾಧಿಕಾರಿಗಳು ಪಂಚಾಯತ್‌ಗೆ ದೂರು ಸಲ್ಲಿಸಿದ್ದರು.
ಸ್ಥಳ ಪರಿಶೀಲನೆಯ ವೇಳೆ ಯುವಕ ಮಂಡಲದ ಅಧ್ಯಕ್ಷ ರಂಜೀವ್ ಪಿಜಕಳ, ಮಾಜಿ ಅಧ್ಯಕ್ಷರಾದ ಕಾರ್ತಿಕ್ ಪಿ.ಎಸ್., ಸುಂದರ ಗೌಡ ಪಾಲೋಳಿ, ದಯಾನಂದ ಗೌಡ ಪೊಯ್ಯತ್ತಡ್ಡ, ಪದಾಧಿಕಾರಿ ಸುರೇಶ ಪಿಜಕಳ ಅವರು ಹಾಜರಿದ್ದರು.
ಇನ್ನೆರಡು ದಿನಗಳಲ್ಲಿ ಕಾಮಗಾರಿಗೆ ಚಾಲನೆ
ಮೋರಿಯ ಬಳಿ ಮಾತ್ರವಲ್ಲದೇ ಇನ್ನೂ ಕೆಲವೆಡೆ ಚರಂಡಿಗೆ ಮಣ್ಣು ಹಾಕಿದ ಪರಿಣಾಮವಾಗಿ ಮಳೆನೀರು ಹರಿದುಹೋಗಲು ತಡೆಯುಂಟಾಗಿ ರಸ್ತೆಯ ಮೇಲೆ ಹರಿಯುತ್ತಿರುವುದು ಸ್ಥಳ ಪರಿಶೀಲನೆಯ ವೇಳೆ ಕಂಡುಬಂದಿದೆ. ಚರಂಡಿಯನ್ನು ಸರಿಪಡಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಿ ಸಮಸ್ಯೆ ಬಗೆಹರಿಸಲು ರಸ್ತೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಕಾಮಗಾರಿ ನಡೆಯಲಿದೆ. ಚರಂಡಿಗೆ ಮಣ್ಣು ತುಂಬಿ ನೀರು ಹರಿಯಲು ತಡೆಯೊಡ್ಡುವವರಿಗೆ ಮುಂದೆ ಆ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
– ರವೀಂದ್ರ ಪುತ್ತೂರು,
ಇಂಜಿನಿಯರ್, ಪಿಎಂಜಿಎಸ್‌ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; ಇಂದು ತೀರ್ಪು; ಭಾರೀ ಬಂದೋಬಸ್ತು
Surathkal: ಸಿಲಿಂಡರ್ ಸ್ಫೋ*ಟ ಪ್ರಕರಣ; ಮತ್ತೋರ್ವ ಮಹಿಳೆಯ ಸಾವು
Daily Horoscope: ದೀರ್ಘಕಾಲದ ಸಮಸ್ಯೆಗಳಿಂದ ಬಿಡುಗಡೆ, ಅಪರಿಚಿತರೊಡನೆ ವಾದ ಬೇಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.