Mangaluru “ಲೋಕ ಸಮರ’ಕ್ಕೆ ಅಧಿಕಾರಿಗಳ ರಂಗ ಪ್ರವೇಶ!
ದೇಶದ ಎಲ್ಲ "ಡಿಸಿ'ಗಳಿಗೆ ತರಬೇತಿ ಪೂರ್ಣ; ರಾಜ್ಯದಲ್ಲಿಯೂ ತಯಾರಿ ಆರಂಭ
Team Udayavani, Feb 3, 2024, 7:00 AM IST
ಮಂಗಳೂರು: ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಪ್ರಚಾರ ತಂತ್ರ ಆರಂಭಿಸುವ ಮೊದಲೇ ಅಧಿಕಾರಿ ಗಡಣ ರಂಗ ಪ್ರವೇಶಿಸಿದೆ.
ದೇಶದ ಎಲ್ಲ ಜಿಲ್ಲಾಧಿಕಾರಿಗಳಿಗೆ ಒರಿಸ್ಸಾ ಸಹಿತ ವಿವಿಧ ಪ್ರದೇಶದಲ್ಲಿ ಮೊದಲ ಹಂತದ ವಿಶೇಷ ತರಬೇತಿ ಈಗಾಗಲೇ ಪೂರ್ಣಗೊಂಡಿದೆ. ಈ ಮೂಲಕ ಜಿಲ್ಲಾ ಮಟ್ಟದಲ್ಲಿ ಲೋಕಸಭಾ ಕಣ ಸನ್ನದ್ಧಗೊಳಿಸಲು ಸಜ್ಜಾಗಿದೆ. ರಾಜ್ಯ ಮಟ್ಟದಲ್ಲಿಯೂ ಮೊದಲ ಹಂತದ ಸಿದ್ಧತೆ ಈಗಾಗಲೇ ನಡೆದಿದ್ದು, ಜಿಲ್ಲಾ ಮಟ್ಟದಲ್ಲಿಯೂ ಮೊದಲ ಹಂತದ ತರಬೇತಿ ಪೂರ್ಣಗೊಂಡಿದೆ. ಪೊಲೀಸ್ ಭದ್ರತೆ ಸಹಿತ ವಿವಿಧ ಆಯಾಮದಲ್ಲಿಯೂ ಪ್ರಾಥಮಿಕ ಸಿದ್ಧತೆ ಚಾಲ್ತಿಯಲ್ಲಿದೆ.
ಮತಗಟ್ಟೆಗಳಲ್ಲಿರುವ “ಸೆಕ್ಟರ್ ಆಫೀಸರ್’ನವರಿಗೆ ಎಲ್ಲ ಜಿಲ್ಲೆಗಳಲ್ಲಿಯೂ “ಮಾಸ್ಟರ್ ಟ್ರೈನರ್’ಗಳ ಮೂಲಕ ಮೊದಲ ತರಬೇತಿ ನೀಡಲಾಗಿದೆ. ಸುಮಾರು 10 ಬೂತ್‌ಗಳ ಬಗ್ಗೆ ನಿಗಾ ವಹಿಸುವ ಸೆಕ್ಟರ್ ಆಫೀಸರ್‌ನವರು ಸದ್ಯ ಬೂತ್ ಮಟ್ಟದಲ್ಲಿ ಕೈಗೊಳ್ಳಬೇಕಾದ ಸಿದ್ಧತೆ ಕುರಿತು ವಿವರಿಸಲಾಗಿದೆ. ಪ್ರತೀ ಅಧಿಕಾರಿಗೆ ಒಂದೊಂದು ಇವಿಎಂ ಕೂಡ ನೀಡಲಾಗಿದ್ದು ಅವರು ನಿಗದಿಪಡಿಸಿದ ಬೂತ್ ಮಟ್ಟದಲ್ಲಿ ಜಾಗೃತಿ ಕಾರ್ಯ ಕ್ರಮಗಳನ್ನು ರೂಪಿಸಬೇಕಿದೆ.
ಬೂತ್‌ಗಳನ್ನು ಯಾವ ರೀತಿಸಿದ್ಧಗೊಳಿಸಬೇಕು ಎಂಬ ಬಗೆಗಿನ ತರಬೇತಿ ಹಾಗೂ ಅಲ್ಲಿ ಕೈಗೊಳ್ಳಬೇಕಾದ ಸಿದ್ಧತೆಗಳ ಬಗೆಗಿನ ತರಬೇತಿ ಕೆಲವೇ ದಿನಗಳಲ್ಲಿ ನಡೆಯುವ ಸಾಧ್ಯತೆ ಇದೆ. ನಂತರ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರಿಗೆ ತರಬೇತಿ ನಡೆಯಲಿದೆ.
ಮತಗಟ್ಟೆ ಸಾಮಗ್ರಿ
ಖರೀದಿ ಆರಂಭ
ಮತಗಟ್ಟೆಗಳಿಗೆ ಅಗತ್ಯ ವಿರುವ ಸಾಮಗ್ರಿ, ಮತ ಎಣಿಕೆ ಕಾರ್ಯಕ್ಕೆ ಆವಶ್ಯವಿರುವ ಸಾಮಗ್ರಿ, ಚುನಾವಣೆಗೆ ಸಂಬಂಧಿಸಿದ ನಮೂನೆಗಳ ಮುದ್ರಣ, ವೀಡಿಯೋಗ್ರಫಿ ಪೂರೈಸಲು ಬೇಕಾದ ವ್ಯವಸ್ಥೆ ಕೈಗೊಳ್ಳಲು ಟೆಂಡರ್ ಕರೆ
ಯುವ ಪ್ರಕ್ರಿಯೆ ವಿವಿಧ ಜಿಲ್ಲೆಗಳಲ್ಲಿ ಆರಂಭವಾಗಿದೆ. ಜತೆಗೆಸಭೆ ನಡೆಯುವ ದಿನ, ಡಿಮಸ್ಟರಿಂಗ್ ದಿನ, ಮತದಾನ-ಮತ ಎಣಿಕೆ ದಿನದಂದು ಚಾ ತಿಂಡಿ ವ್ಯವಸ್ಥೆ ಒದಗಿಸಲು ಕೂಡ ಟೆಂಡರ್ ಆಹ್ವಾನಿಸಲಾಗುತ್ತಿದೆ.
ಮತ ಯಂತ್ರಗಳು ಸಿದ್ಧ !
ಲೋಕಸಮರಕ್ಕೆ ಸಿದ್ಧತೆ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಮತ ಯಂತ್ರಗಳನ್ನು ಅಕ್ಟೋಬರ್‌ನಿಂದ ವಿವಿಧ ಜಿಲ್ಲೆಗಳಿಗೆ ಹೊಸ ಮತಯಂತ್ರಗಳನ್ನು ಚುನಾವಣ ಆಯೋಗ ಕಳುಹಿಸಿದೆ. ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿ ಡಾ| ಸಂತೋಷ್ ಕುಮಾರ್ “ಉದಯವಾಣಿ’ ಜತೆಗೆ ಮಾತನಾಡಿ, “ಈಗಾಗಲೇ ಜಿಲ್ಲೆಗೆ ಮತಯಂತ್ರಗಳು ಬಂದು ಭದ್ರತಾ ಕೊಠಡಿಯಲ್ಲಿ ಇವೆ. ಅವುಗಳ ಪರಿಶೀಲನೆ ಕೂಡ ಪೂರ್ಣವಾಗಿದೆ’ ಎಂದರು.
ವರ್ಗಾವರ್ಗಿ ಆರಂಭ
ಲೋಕಸಭಾ ಚುನಾವಣೆ ನಿಕಟವಾಗುತ್ತಿರುವ ಹಿನೆ°ಲೆಯಲ್ಲಿ ಈ ಪ್ರಕ್ರಿಯೆಗೆ ಪೂರಕವಾಗಿ ರಾಜ್ಯಾದ್ಯಂತ ಸರಕಾರಿ ಅಧಿಕಾರಿಗಳ ವರ್ಗಾವಣೆ ಸತ್ರ ಆರಂಭವಾಗಿದೆ. ಚುನಾವಣ ಆಯೋಗದ ಸೂಚನೆಯ ಮೇರೆಗೆ ಜಿಲ್ಲಾಡಳಿತ-ಪೊಲೀಸ್ ಇಲಾಖೆ ಸಹಿತ ವಿವಿಧ ಅಧಿಕಾರಿ ವಲಯಗಳ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ
ನಡೆಯುತ್ತಿದೆ.
ಲೋಕಸಭಾ ಚುನಾವಣೆಗೆ ಸಂಬಂಧಿಸಿ ಈಗಾಗಲೇ ಮೊದಲ ಹಂತದ ಸಿದ್ಧತೆ ಆರಂಭವಾಗಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೆ ವಿವಿಧ ರಾಜ್ಯದಲ್ಲಿ ವಿಶೇಷ ತರಬೇತಿ ನಡೆದಿದೆ. ರಾಜ್ಯ ಮಟ್ಟದಲ್ಲಿಯೂ ಒಂದು ಹಂತದ ತರಬೇತಿ ನಡೆದಿದೆ. ಮುಂದೆ ಹಂತ ಹಂತವಾಗಿ ತರಬೇತಿ-ಸಿದ್ಧತೆ ನಡೆಸಲಾಗುತ್ತದೆ.
-ಮುಲ್ಲೈ ಮುಗಿಲನ್,
ಜಿಲ್ಲಾಧಿಕಾರಿ, ದ.ಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್ ಹೊಂಡಗಳು!
Mangaluru: ಬೇಕು ಇಂದೋರ್ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.