ಒಖೀ ಪ್ರಭಾವ: ಉಪ್ಪಳದಲ್ಲಿ ಕಡಲ್ಕೊರೆತಕ್ಕೆ ಮನೆಗಳು ಸಮುದ್ರ ಪಾಲು

Team Udayavani, Dec 3, 2017, 5:07 PM IST

02ksdc1.jpg

ಉಪ್ಪಳ: ಒಖೀ ಚಂಡಮಾರುತದ ಪ್ರಭಾವದಿಂದಾಗಿ ಮೂಸೋಡಿ ಅದಿಕದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು ನಾಲ್ಕು ಮನೆಗಳು ಪೂರ್ಣವಾಗಿ ಸಮುದ್ರಪಾಲಾಗಿವೆ. ಶುಕ್ರವಾರ ಸಂಜೆಯಿಂದ ತೀವ್ರಗೊಂಡಿದ್ದ ಕಡಲ್ಕೊರೆತ ರಾತ್ರಿ 10 ಗಂಟೆ ವೇಳೆಗೆ ಮತ್ತಷ್ಟು ತೀವ್ರಗೊಂಡಿದೆ.

ಈ ವೇಳೆ ಅಬ್ದುಲ್‌ ಖಾದರ್‌ ಅವರ ಮನೆ ಪೂರ್ಣವಾಗಿ ಸಮುದ್ರ ಪಾಲಾಯಿತು. ಅಪಾಯ ಮನಗಂಡು ಮನೆಯಿಂದ ಹೊರಗೋಡಿದ ಕುಟುಂಬ ಪಾರಾಗಿದೆ. ಸ್ಥಳಕ್ಕೆ ಕೂಡಲೇ ತಲುಪಿದ ಪೊಲೀಸ್‌, ಅಗ್ನಿಶಾಮಕದಳ ಹಾಗೂ ಕಂದಾಯ ಅಧಿಕಾರಿಗಳು ಅಬ್ದುಲ್‌ ಖಾದರ್‌ ಅವರ ಕುಟುಂಬ ವನ್ನು ಬೇರೆಡೆಗೆ ಸ್ಥಳಾಂತರಿಸಲು ನೆರವು ನೀಡಿದರು. ಇದೇ ವೇಳೆ ಈ ಹಿಂದೆ ಉಂಟಾದ ಕಡಲ್ಕೊರೆತಕ್ಕೆ ಸಿಲುಕಿ ಭಾಗಶಃ ನಾಶಗೊಂಡಿದ್ದ ಮೂರು ಮನೆಗಳೂ ಶುಕ್ರವಾರ ಪೂರ್ಣ
ವಾಗಿ ಸಮುದ್ರ ಪಾಲಾಯಿತು. ಸಮುದ್ರ ಪಾಲಾದ ಮನೆಗಳು ಖದೀಜಮ್ಮ, ಇಬ್ರಾಹಿಂ, ಅಶ್ರಫ್‌ ಅವರ ಮನೆಗಳಾಗಿವೆ. ಈ ಹಿಂದೆ ಮನೆಗಳು ಭಾಗಶಃ ನಾಶಗೊಂಡಾಗ ಈ ಮೂರು ಕುಟುಂಬಗಳನ್ನು ಅಂದೇ ಸ್ಥಳಾಂತರಿಸಲಾಗಿತ್ತು. ಕಡಲ್ಕೊರೆತ ಮುಂದುವರಿ ದಿದ್ದು ಸುಮಾರು 200 ಮೀಟರ್‌ ಪ್ರದೇಶ ಸಮುದ್ರ ಪಾಲಾಗಿದೆ.

ಒಖೀ ಪ್ರಭಾವ ಕೇರಳದ ಕರಾವಳಿಯಾದ್ಯಂತ ಒಖೀ ಚಂಡ ಮಾರುತ ಪ್ರಭಾವ ವ್ಯಾಪಕವಾಗಿ ಕಂಡು ಬಂದಿದ್ದು, ಗುರುವಾರದಿಂದಲೇ ಸಮುದ್ರ ಪ್ರಕ್ಷುಬ್ಧವಾಗಿತ್ತು. ಕುಂಬಳೆ, ಮೊಗ್ರಾಲ್‌, ಉಪ್ಪಳ ಕಡಲ ಕಿನಾರೆಯಲ್ಲೂ ಸಮುದ್ರ ಪ್ರಕ್ಷುಬ್ಧವಾದ್ದ ರಿಂದ ಉಪ್ಪಳದಲ್ಲಿ ಜನರು ಸಂಜೆವೇಳೆ ಮನೆ ಯಿಂದ ಹೊರಬಂದು ಮಧ್ಯರಾತ್ರಿಯ ತನಕ ಹೊರಗುಳಿದರು.

ಮರ ಬಿದ್ದು ಸಂಚಾರಕ್ಕೆ ತಡೆ ಕಾಸರಗೋಡಿನಲ್ಲಿ ಶನಿವಾರ ಬೀಸಿದ ಭಾರೀಗಾಳಿಗೆ ನಗರದ ನೆಲ್ಲಿಕುಂಜೆ ಗೀತಾ ಚಿತ್ರ
ಮಂದಿರದ ಬಳಿ ಬೀಚ್‌ ರಸ್ತೆಯಲ್ಲಿ ಮರವೊಂದು ಮುರಿದು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಅದನ್ನು ತೆರವುಗೊಳಿಸಿತು. ಚಂಡ ಮಾರುತ ಸಾಧ್ಯತೆಯ ಹಿನ್ನೆಲೆಯಲ್ಲಿ ಕಾಸರ ಗೋಡು ಮತ್ತು ಚೇರಂಗೈ ಕಡಪ್ಪುರದಲ್ಲಿ ಪೊಲೀಸರು ಧ್ವನಿ ವರ್ಧಕ ಮೂಲಕ ಜಾಗ್ರತಾ ನಿರ್ದೇಶ ನೀಡಿದ್ದಾರೆ. ಬೆಸ್ತರು ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ. 

ಟಾಪ್ ನ್ಯೂಸ್

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

16

Mangaluru: ನಿಯಮ ಉಲ್ಲಂಘನೆ; ಖಾಸಗಿ ಬಸ್‌ಗೆ ದಂಡ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.