ಹಳೆ ವಾಹನಗಳ ತೆರವು: ಪೊಲೀಸ್ ಠಾಣೆ ಕಟ್ಟಡ ಶೀಘ್ರ?
Team Udayavani, Mar 25, 2018, 12:39 PM IST
ಉಪ್ಪಿನಂಗಡಿ: ನೂತನ ಕಟ್ಟಡದ ನಿರೀಕ್ಷೆಯಲ್ಲಿರುವ ಉಪ್ಪಿನಂಗಡಿಯ ಪೊಲೀಸ್ ಠಾಣೆ ವಠಾರದಲ್ಲಿ ಪ್ರಕರಣಗಳಿಗೆ ಸಂಬಂಧಿಸಿ ಇಲಾಖೆ ವಶದಲ್ಲಿರುವ ವಾಹನಗಳ ತೆರವು ಕಾರ್ಯ ಗುರುವಾರ ನಡೆದಿದ್ದು, ನೂತನ ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳುವ ಲಕ್ಷಣಗಳು ಗೋಚರಿಸಿವೆ.
ನೂತನ ಪೊಲೀಸ್ ಠಾಣೆ ಕಟ್ಟಡದ ನಿರ್ಮಾಣಕ್ಕೆ ಸರಕಾರ 90 ಲಕ್ಷ ರೂ. ಮಂಜೂರು ಮಾಡಿದೆ. ತತ್‌ಕ್ಷಣವೇ ಹಳೇ ಕಟ್ಟಡವನ್ನು ತೆರವುಗೊಳಿಸಿ ಕಾಮಗಾರಿ ಪ್ರಾರಂಭಕ್ಕೆ ನಿವೇಶನವನ್ನು ಬಿಟ್ಟು ಕೊಡಬೇಕೆಂದು ರಾಜ್ಯ ಹೌಸಿಂಗ್ ಬೋರ್ಡ್‌ನಿಂದ ಬಂದ ಸತತ ಒತ್ತಡದಿಂದಾಗಿ 2017ರ ನ. 11ರಂದು ಕಟ್ಟಡ ತೆರವುಗೊಳಿಸಿ ಸಮೀಪದಲ್ಲಿರುವ ವೃತ್ತ ನಿರೀಕ್ಷಕರ ವಸತಿ ಗೃಹಕ್ಕೆ ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ವರ್ಗಾಯಿಸಲಾಗಿತ್ತು.
ಆದರೆ ತೆರವುಗೊಳ್ಳುವ ತನಕ ಗಡಿಬಿಡಿ ಮಾಡುತ್ತಿದ್ದ ಹೌಸಿಂಗ್ ಬೋರ್ಡ್ ಬಳಿಕ ಮೌನ ವಹಿಸಿತು. ಪ್ರಶ್ನಿಸಿದಾಗಲೆಲ್ಲ ಅನುದಾನ ಮಂಜೂರಾಗಲೇ ಇಲ್ಲವೆಂಬ ಧ್ವನಿಯೂ ಕೇಳಿ ಬಂದಿತ್ತು. ಇದೀಗ ಹೌಸಿಂಗ್ ಬೋರ್ಡ್ ಮೂಲಕ ಕಾಮಗಾರಿಯ ಹೊಣೆ ವಹಿಸಿಕೊಂಡಿರುವ ಕುಂದಾಪುರ ಮೂಲದ ಗುತ್ತಿಗೆದಾರರು ಶುಕ್ರವಾರದಿಂದ ನೂತನ ಪೊಲೀಸ್ ಠಾಣೆ ಕಟ್ಟಡದ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ ಎಂಬ ಮಾಹಿತಿ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.