ಹಳೆಯಂಗಡಿ: ಹೆದ್ದಾರಿಯಲ್ಲಿಯೇ ತ್ಯಾಜ್ಯ ನೀರು
Team Udayavani, Dec 21, 2017, 1:15 PM IST
ಹಳೆಯಂಗಡಿ: ಇಲ್ಲಿನ ರಾ. ಹೆದ್ದಾರಿಯಲ್ಲಿಯೇ ಚರಂಡಿಯ ಮೂಲಕ ತ್ಯಾಜ್ಯ ನೀರು ಹರಿದು ಪರಿಸರದಲ್ಲಿ ದುರ್ವಾಸನೆ ಉಂಟಾಗಿದ್ದು, ಸ್ಥಳೀಯ ನಿವಾಸಿಗಳು ಹಳೆಯಂಗಡಿ ಗ್ರಾ.ಪಂ.ಗೆ ದೂರು ನೀಡಿ ಸಂಬಂ ಧಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಮೂರು ದಿನಗಳಿಂದ ಹಳೆಯಂಗಡಿ ಹೆದ್ದಾರಿ ಬಳಿಯ ನೇಕಾರ ಮಹಲ್‌ನ ಮುಂಭಾಗದಿಂದ ಖಾಸಗಿ ನರ್ಸರಿಯೊಂದರ ಮುಂಭಾಗದವರೆಗೆ ಕೊಳಚೆ ನೀರು ಹರಿಯುತ್ತಿದೆ. ಸ್ಥಳೀಯರ ಪ್ರಕಾರ ಈ ತ್ಯಾಜ್ಯ ನೀರು ಶೌಚಾಲಯಕ್ಕೆ ಸಂಬಂ ಧಿಸಿದ್ದಾಗಿದ್ದು, ಚರಂಡಿಯಲ್ಲಿ ಹರಿದು ನೇರವಾಗಿ ಸುತ್ತಮುತ್ತ ಪರಿಸರದಲ್ಲಿ ಹರಡುತ್ತಿದೆ ಅಲ್ಲದೇ ಹೆದ್ದಾರಿಗೂ ಸಹ ಹರಿಯುತ್ತಿರುವುದರಿಂದ ವಾಹನಗಳು ಸಂಚರಿಸುವಾಗ ಪಾದಾಚಾರಿಗಳಿಗೆ ಕೆಸರಿನಂತೆ ಸಿಂಪಡನೆ ಆಗುತ್ತಿದೆ ಎಂದು
ದೂರಿಕೊಂಡಿದ್ದಾರೆ.
ಇದೇ ರೀತಿಯಲ್ಲಿ ನಿರಂತರವಾಗಿ ಹರಿದರೇ ಈ ಭಾಗದಲ್ಲಿ ರೋಗಗಳು ಹರಡುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹಳೆಯಂಗಡಿ ಹೆದ್ದಾರಿಯಲ್ಲಿ ಅಲ್ಲಲ್ಲಿ ತ್ಯಾಜ್ಯ ಬಿಸಾಡುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೀಗ ಕೊಳಚೆ ನೀರಿನ ಸಮಸ್ಯೆಗೂ ಪಂಚಾಯತ್ ಸೂಕ್ತ ಪರಿಹಾರ ನೀಡಬೇಕಾಗಿದೆ.
ಕಾನೂನು ಕ್ರಮ
ಸ್ಥಳೀಯರು ನೀಡಿದ ದೂರಿನಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರಿನ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ತತ್ ಕ್ಷಣ ಸಂಬಂ ಧಿಸಿದವರಿಗೆ ನೋಟೀಸ್ ನೀಡಲಾಗುವುದು. ಸ್ಪಂದಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಅಬೂಬಕ್ಕರ್
ಪಿಡಿಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.