ವೈಷ್ಣವ್ ಹೆಗ್ಡೆ ಕಣ್ಣಲ್ಲಿ ಒಲಿಂಪಿಕ್ ಮಿಂಚು
Team Udayavani, Feb 8, 2018, 11:39 AM IST
ವೈಷ್ಣವ್ ಹೆಗ್ಡೆ ಇದೀಗ ಭರವಸೆಯ ಈಜು ಪಟು. ಹಲವು ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಿ, ಪದಕಗಳನ್ನು ಪಡೆದಿದ್ದಾರೆ. ಹಾಗೆಂದು ಇಷ್ಟಕ್ಕೆ ತೃಪ್ತರಾಗಿಲ್ಲ. ಇವರಿಗೆ ಒಲಿಂಪಿಕ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಹಂಬಲ. ಪುತ್ತೂರಿನ ಪರ್ಲಡ್ಕ ಡಾ| ಶಿವರಾಮ ಕಾರಂತ ಬಾಲವನದ ಅಕ್ವೇಟಿಕ್ ಕ್ಲಬ್‌ನ ಸದಸ್ಯ. ದರ್ಬೆ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ವೈಷ್ಣವ್ ಹೆಗ್ಡೆ.
ಪುತ್ತೂರಿನ ಮಟ್ಟಿಗೆ ಈಜು ಕೊಳ ಸ್ಥಾಪನೆ ದೊಡ್ಡ ಇತಿಹಾಸವೇ ಹೌದು. ಇದಕ್ಕೆ ಮೊದಲು ನದಿ, ತೋಡುಗಳೇ ಈಜು ಕಲಿಕೆಯ ಸ್ಥಳಗಳು. ಆದರೆ ಇದೀಗ ಕಾಲ ಬದಲಾಗಿದೆ. ಪರಿಸ್ಥಿತಿಗೆ ತಕ್ಕಂತೆ ಬಾಲವನದಲ್ಲಿ ಈಜುಕೊಳ ಸ್ಥಾಪಿಸಲಾಯಿತು. ಇದರ ಉಸ್ತುವಾರಿ ಪಾರ್ಥ ವಾರಣಾಸಿ ಹೆಗಲಿಗೆ ಬೀಳುತ್ತಿದ್ದಂತೆ, ಈಜುಕೊಳದಲ್ಲಿ ಅನೇಕ ಪ್ರತಿಭೆಗಳ ಹುಟ್ಟಿಕೊಂಡವು. ಅಂತಹ ಪ್ರತಿಭೆಗಳ ಪೈಕಿ ಮೇರುಸ್ಥಾನದಲ್ಲಿರುವವರು ವೈಷ್ಣವ್ ಹೆಗ್ಡೆ.
ತನ್ನ 14ನೇ ವಯಸ್ಸಿನಲ್ಲೇ ಈಜು ಕಲಿಕೆ ಆರಂಭಿಸಿದ ಇವರು, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪದಕಗಳನ್ನು ಬಾಚಿಕೊಂಡಿದ್ದಾರೆ. ಈಜಿನ ಜತೆಗೆ ಫಿಟ್‌ನೆಸ್‌ಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.
ಅಂತಾರಾಷ್ಟ್ರೀಯ ಸಾಧನೆ
2016ರ ನವಂಬರ್‌ನಲ್ಲಿ ನಡೆದ ಏಷ್ಯನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗಿ. ಶ್ರೀಲಂಕಾದಲ್ಲಿ ನಡೆದ ಸೌತ್ ಏಷ್ಯಾನ್ ಅಕ್ವೇಟಿಕ್ ಚಾಂಪಿಯನ್‌ಶಿಪ್‌ನಲ್ಲಿ 1 ಚಿನ್ನ, 1 ಕಂಚಿನ ಪದಕ. 2016ರ ಜುಲೈನಲ್ಲಿ ಜರಗಿದ ವರ್ಲ್ಡ್ ಸ್ಕೂಲ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ. ನವಂಬರ್‌ನಲ್ಲಿ ಜರಗಿದ ಏಷ್ಯನ್ ಸ್ಕೂಲ್ ಗೇಮ್ಸ್‌ನಲ್ಲಿ 8ನೇ ಸ್ಥಾನ ಪಡೆದಿದ್ದಾರೆ. ಇವರ ಈ ಸಾಧನೆಯನ್ನು ಗಮನಿಸಿ, ಅಮೆರಿಕಕ್ಕೆ ಕರೆಸಿಕೊಂಡು ತರಬೇತಿ ನೀಡಲು ಅಲ್ಲಿನ ಈಜು ತರಬೇತುದಾರರು ಆಸಕ್ತರಾಗಿದ್ದಾರೆ.
ರಾಷ್ಟ್ರೀಯ ಸಾಧನೆ
ಕೊಲ್ಕೊತಾದಲ್ಲಿ ನಡೆದ ನ್ಯಾಶನಲ್ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಏರ್ಪಡಿಸಿದ 61ನೇ ಎಸ್ ಜಿಎಫ್ ರಾಷ್ಟ್ರೀಯ ಈಜುಕೂಟದಲ್ಲಿ 50 ಮೀ. ಬ್ರೆಸ್ಟ್ ಸ್ಟ್ರೊಕ್‌ನಲ್ಲಿ 29.75 ಸೆಕೆಂಡ್‌ನಲ್ಲಿ ಗುರಿ ತಲುಪಿ, ಹೊಸ ದಾಖಲೆ ನಿರ್ಮಿಸಿದ್ದರು. 100 ಮೀ. ಬ್ರೆಸ್ಟ್ ಸ್ಟ್ರೊಕ್‌ನಲ್ಲಿ 1.7.12 ನಿಮಿಷಗಳಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಮೆಡ್ಲೇ ರಿಲೇಯಲ್ಲಿ ಚಿನ್ನ ಗೆದ್ದಿದ್ದಾರೆ. ಒಟ್ಟಿನಲ್ಲಿ ಇದು ದಕ್ಷಿಣ ಕನ್ನಡ ಜಿಲ್ಲೆಯ ಈಜು ಸ್ಪರ್ಧಿಯೊಬ್ಬರ ಪ್ರಥಮ ಸಾಧನೆಯೂ ಹೌದು.
ಒಲಿಂಪಿಕ್ ನ ಗುರಿ
ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ನನ್ನ ಕನಸು. ಇದಕ್ಕಾಗಿ ಈಗಾಗಲೇ ತಯಾರಿ ನಡೆಸುತ್ತಿದ್ದೇನೆ. ಬೆಳಗ್ಗೆ- ಸಂಜೆ 2 ಗಂಟೆ ಅಭ್ಯಾಸ ನಡೆಸುತ್ತಿದ್ದೇನೆ. ದಿನಕ್ಕೆ 2 ಗಂಟೆ ಜಿಮ್‌ಗೆ ಹೋಗುತ್ತಿದ್ದೇನೆ. ಮುಂದೆ ಬೆಂಗಳೂರಿಗೆ ತೆರಳಿ, ತರಬೇತಿ ಪಡೆಯುವ ಆಕಾಂಕ್ಷೆ ಇದೆ.
ವೈಷ್ಣವ್ ಹೆಗ್ಡೆ, ಈಜುಪಟು
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.