ಜು. 7: ಒಂದು ಮೊಟ್ಟೆಯ ಕಥೆ ಚಿತ್ರ ಬಿಡುಗಡೆ
Team Udayavani, Jul 4, 2017, 3:00 AM IST
ಮಂಗಳೂರು: ಪವನ್ ಕುಮಾರ್ ಸ್ಟುಡಿಯೋಸ್ ಅರ್ಪಿಸುವ ಮ್ಯಾಂಗೋ ಪಿಕ್ಕಲ್ ಎಂಟರ್ಟೈನ್ಮೆಂಟ್ನಿ ರ್ಮಾಣದ ‘ಒಂದು ಮೊಟ್ಟೆಯ ಕಥೆ’ ಸಿನೆಮಾ ಜು. 7ರಂದು ದೇಶಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈಗಾಗಲೇ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಮತ್ತು ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡಿರುವ ಒಂದು ಮೊಟ್ಟೆಯ ಕಥೆ ರಾಜ್ಯದ ಎಲ್ಲ ಮಲ್ಟಿಫ್ಲೆಕ್ಸ್ ಮತ್ತು ಪ್ರಮುಖ ಥಿಯೇಟರ್‌ಗಳಲ್ಲಿ ತೆರೆ ಕಾಣಲಿದೆ. ಬಳಿಕ ಚೆನ್ನೈ, ಹೈದರಾಬಾದ್, ಪುಣೆ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಪ್ರದರ್ಶನ ಕಾಣಲಿದೆ. ಜುಲೈ ಅಂತ್ಯ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಸಿಂಗಾಪುರ ಸಹಿತ ವಿದೇಶಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.
ನಿರ್ಮಾಪಕ ಪವನ್ ಕುಮಾರ್ ಮಾತನಾಡಿ, ಚಿತ್ರದ ಗುಣಮಟ್ಟದಿಂದ ಅಂತಾರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. 1 ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಾಣಗೊಂಡಿದೆ ಎಂದು ತಿಳಿಸಿದರು. ತಾರಾಗಣದಲ್ಲಿ ರಾಜ್ ಬಿ. ಶೆಟ್ಟಿ. ಅಮೃತಾ ನಾಯ್ಕ, ಶೈಲಶ್ರೀ ಮೂಲ್ಕಿ, ಶ್ರೇಯಾ ಅಂಚನ್, ಉಷಾ ಭಂಡಾರಿ, ಪ್ರಕಾಶ್ ತೂಮಿನಾಡು, ಮೈಮ್ ರಾಮದಾಸ್, ದೀಪಕ್ ರೈ ಪಾಣಾಜೆ ಮೊದಲಾದವರು ಇದ್ದಾರೆ ಎಂದರು. ನಿರ್ಮಾಪಕ ಸುಹಾನ್ ಪ್ರಸಾದ್, ನಟಿ ಅಮೃತಾ ನಾಯ್ಕ, ಸಂಗೀತ ನೀಡಿದ ಮಿಥುನ್ ಮುಕುಂದನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhuvanam Gaganam Movie: ಭುವನಂ ವಿತರಣಾ ಹಕ್ಕು ಕೋಟಿ ಬೆಲೆಗೆ ಮಾರಾಟ
State Film Awards: 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ; ಇಲ್ಲಿದೆ ಸಂಪೂರ್ಣ ಪಟ್ಟಿ
ಚೀನಾದ ಸೂಪರ್ ಮಾರ್ಕೆಟ್‌ನಲ್ಲಿ ಡಾ. ರಾಜ್‌ಕುಮಾರ್ ʼಗಂಧದ ಗುಡಿʼ ಹಾಡು: ವಿಡಿಯೋ ವೈರಲ್
Sandalwood: ಥಿಯೇಟರ್, ಓಟಿಟಿ ಬಳಿಕ ಟಿವಿಯಲ್ಲಿ ಬರಲಿದೆ ʼಭೈರತಿ ರಣಗಲ್ʼ: ಯಾವಾಗ, ಎಲ್ಲಿ?
Royal movie: ರಾಯಲ್ ಚಿತ್ರ ವೀಕ್ಷಿಸಿದ ದರ್ಶನ್ ಆ್ಯಂಡ್ ಫ್ಯಾಮಿಲಿ
MUST WATCH
ಹೊಸ ಸೇರ್ಪಡೆ
Trasi: ಮನೆಯಿಂದ ಚಿನ್ನಾಭರಣ ಕಳವು ಪ್ರಕರಣ; ಕೃತ್ಯ ನಡೆದ ಏಳೇ ಗಂಟೆಯಲ್ಲೇ ಖದೀಮರ ಬಂಧನ
Kundapura: ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಗೆ ಆಟೋ ರಿಕ್ಷಾ ಢಿಕ್ಕಿ: ಸಾವು
Karkala: ಮಿಯ್ಯಾರಿನಲ್ಲಿ ಬಾವಿಗೆ ಬಿದ್ದು ಎರಡು ಹಸುಗಳು ಸಾವು
Udupi: ವಿದೇಶದಲ್ಲಿ ಎಂಪಿಎಚ್ ಸೀಟ್ ಭರವಸೆ; ಹಣ ಪಡೆದು ವಂಚನೆ: 3 ಮಂದಿಯ ಬಂಧನ
Udupi: ಗೀತಾರ್ಥ ಚಿಂತನೆ-164: “ವಿಶ್ವಂ ಸತ್ಯಂ’ ಶ್ರುತಿ ಪ್ರಾಮಾಣ್ಯ