ಮಂಗಳೂರು: 1 ನುಗ್ಗೆಗೆ 40ರಿಂದ 50 ರೂ.; ಉಡುಪಿಯಲ್ಲಿ ಅಲಭ್ಯ!
Team Udayavani, Dec 15, 2019, 12:47 AM IST
ಮಂಗಳೂರು: ಒಂದು ನುಗ್ಗೆ ಕಾಯಿಗೆ 40ರಿಂದ 50 ರೂ.! ಅಚ್ಚರಿ ಎನಿಸಿದರೂ ಸತ್ಯ. ಶನಿವಾರ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ನಲ್ಲಿ ಒಂದು ಕೆ.ಜಿ. ನುಗ್ಗೆ ಕಾಯಿಗೆ 400 ರೂ. ಇತ್ತು. ಅಕಾಲಿಕ ಮಳೆಯಿಂದಾಗಿ ಹೂವು ಉದುರಿದ ಕಾರಣ ಈ ವರ್ಷ ಎಲ್ಲೆಡೆ ನುಗ್ಗೆ ಕಾಯಿ ಫಸಲು ತೀರಾ ಕಡಿಮೆಯಾಗಿದೆ. ಹಾಗಾಗಿ ಬೆಲೆ ವಿಪರೀತ ಏರಿಕೆ ಆಗಿದ್ದು, ನುಗ್ಗೆ ಕಾಯಿಗೆ ಬಂಗಾರದ ಬೆಲೆ ಬಂದಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.
ಒಂದು ಕೆ.ಜಿ. ತೂಕಕ್ಕೆ ಸಾಮಾನ್ಯ ಗಾತ್ರದ 8 ರಿಂದ 10 ನುಗ್ಗೆಗಳು ಬೇಕಾಗುತ್ತವೆ. ಕಾಲು ಕೆ.ಜಿ. ನುಗ್ಗೆಗೆ 100 ರೂ. ಇದೆ. ಕಾಲು ಕೆ.ಜಿ.ಯಲ್ಲಿ 2ರಿಂದ 3 ನುಗ್ಗೆ ಮಾತ್ರ ಬರುತ್ತವೆ. ಅಳಿದುಳಿದ ಹೂವುಗಳಿಂದ ನುಗ್ಗೆ ಚಿಗುರೊಡೆದು ಬೆಳವಣಿಗೆ ಹೊಂದಿ ಕೊಯ್ಲಿಗೆ ಬರಲು ಇನ್ನೂ ಸುಮಾರು 1 ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ನಿಧಾನವಾಗಿ ಇಳಿಯುತ್ತಿರುವಾಗ ನುಗ್ಗೆ ಬೆಲೆ ಗಗನಕ್ಕೇರುತ್ತಿರುವುದು ನುಗ್ಗೆ ಪ್ರಿಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ನಗರದ ಐದು ತರಕಾರಿ ಅಂಗಡಿಗಳು ಸೇರಿದಂತೆ ತಾಲೂಕಿನ ಯಾವುದೇ ಅಂಗಡಿಗಳಲ್ಲಿ ನುಗ್ಗೆ ಮಾರಾಟವೇ ಇಲ್ಲ. ಕೆ.ಜಿ.ಗೆ 300 ರೂ. ದಾಟಿದ ಕೂಡಲೇ ಸ್ಥಳೀಯವಾಗಿ ಖರೀದಿ ಮತ್ತು ಹೊರಗಿನಿಂದ ತರಿಸುವುದನ್ನು ನಿಲ್ಲಿಸಿದ್ದೇವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಉಡುಪಿ, ಕಾರ್ಕಳ ಮಾರುಕಟ್ಟೆಯಲ್ಲೂ ಹೀಗೆ ಇದೆ.
ಕಾಡು ಹೀರೆಯೂ ಇಲ್ಲ ಕಾಡು ಹೀರೆ ಕೂಡ ಕೆಜಿಗೆ 250 ರೂ. ದಾಟಿದ್ದು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಈರುಳ್ಳಿ 80ರಿಂದ 110 ರೂ. ಶನಿವಾರ ಮಂಗಳೂರಿನಲ್ಲೂ ಈರುಳ್ಳಿ ಧಾರಣೆ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಈರುಳ್ಳಿ ಬೆಲೆ 80 ರೂ.ಗಳಿಂದ 110 ರೂ. ಇತ್ತು. ಸಣ್ಣ ಈರುಳ್ಳಿಗೆ 50 ರೂ., ಹೊಸ ಈರುಳ್ಳಿ ದರ 80 ರೂ. ಹಾಗೂ ಹಳೆ ಈರುಳ್ಳಿಗೆ 110 ರೂ. ಇತ್ತು ಎಂದು ವರ್ತಕರು ಉದಯವಾಣಿಗೆ ತಿಳಿಸಿದ್ದಾರೆ. ಉಡುಪಿಯಲ್ಲೂ ಕೆಜಿಗೆ 85ರಿಂದ 90 ರೂ.ಗಳಲ್ಲಿ ಮಾರಾಟವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.