ಒಂದೆಡೆ ಜಲಕ್ಷಾಮ; ಮತ್ತೂಂದೆಡೆ ಪೋಲಾಗುತ್ತಿದೆ ಕುಡಿಯುವ ನೀರು !
ನಗರದಲ್ಲೆಡೆ ಕುಡಿಯುವ ನೀರಿಗೆ ಅಭಾವ
Team Udayavani, May 31, 2019, 6:00 AM IST
ಮಹಾನಗರ: ತುಂಬೆ ವೆಂಟೆಡ್ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ನಗರದಲ್ಲೆಡೆ ಕುಡಿಯುವ ನೀರಿಗೆ ಅಭಾವವಿರುವ ಈ ಸಂದರ್ಭ ಲೋವೆರ್ ಬೆಂದೂರ್‌ವೆಲ್ ಸಮೀಪ ಪೈಪ್‌ನಿಂದ ಪ್ರತೀ ನಿತ್ಯ ನೀರು ಸೋರಿಕೆಯಾಗುತ್ತಿದೆ.
ಅಂದಹಾಗೆ, ಇದು ಇಂದು ನಿನ್ನೆಯ ಸಮಸ್ಯೆಯಲ್ಲ. ಒಂದು ವರ್ಷಗಳಿಂದ ಇಲ್ಲಿ ನೀರು ಚರಂಡಿ ಪಾಲಾಗುತ್ತಿದ್ದು, ಪಾಲಿ ಕೆಯ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ನಗರದ ಲೋವೆರ್ ಬೆಂದೂರ್‌ವೆಲ್ನ 3ನೇ ಅಡ್ಡರಸ್ತೆಯ ಬಳಿ ಇರುವ ಡೋಮಿನಸ್ ಪಿಜ್ಜಾ ಅಂಗಡಿಯ ಪಕ್ಕದಲ್ಲಿ ಮಳೆ ನೀರು ಹರಿಯುವ ಚಿಕ್ಕ ಚರಂಡಿಯೊಂದರಲ್ಲಿ ಹಾದುಹೋಗುವ ನೀರಿನ ಪೈಪ್‌ಲೈನ್ ಒಂದು ವರ್ಷಗಳ ಹಿಂದೆಯೇ ಒಡೆದು ಹೋಗಿತ್ತು. ಅಲ್ಲೇ ಪಕ್ಕದಲ್ಲಿ ಒಳಚರಂಡಿ ವ್ಯವಸ್ಥೆ ಇದ್ದು, ಅದರ ಕೊಳವೆ ಕೂಡ ಒಡೆದುಹೋಗಿದೆ. ಇದೀಗ ಕುಡಿಯುವ ನೀರಿನ ಜತೆ ಒಳಚರಂಡಿ ನೀರು ಕೂಡ ಒಂದೇ ಚರಂಡಿಯಲ್ಲಿ ಹರಿಯುತ್ತಿದೆ. ಸ್ಥಳೀಯರ ಪ್ರಕಾರ ‘ಇದು ಸುಮಾರು 30 ವರ್ಷಗಳ ಹಿಂದಿನ ಪೈಪ್‌ಲೈನ್. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಹೊಸ ಪೈಪ್ ಸಂಪರ್ಕವನ್ನು ಅಳವಡಿಸಲಿಲ್ಲ.
ಲೋವರ್ ಬೆಂದೂರ್‌ವೆಲ್ ಸಮೀಪವೇ ನೀರಿನ ಟ್ಯಾಂಕ್ ಇದೆ. ಪಾಲಿಕೆ ಇದೀಗ ನೀರು ರೇಷನಿಂಗ್ ಮಾಡುತ್ತಿದ್ದರೂ, ಇಲ್ಲಿನ ಟ್ಯಾಂಕ್ ಸುತ್ತಮುತ್ತಲಿನ ಪ್ರದೇಶದ ಪೈಪ್‌ನಲ್ಲಿ ಸದಾ ನೀರು ತುಂಬಿರುತ್ತದೆ. ಇದರಿಂದ ದಿನದ 24 ಗಂಟೆಯೂ ಪೈಪ್‌ನಲ್ಲಿ ನೀರು ಪೋಲಾಗುತ್ತಿದೆ. ಇನ್ನೇನು ಕೆಲವು ದಿನದಲ್ಲಿ ಮಳೆ ಬರಲಿದ್ದು, ಕಣಿಯಲ್ಲಿ ಮಳೆ ನೀರು ರಭಸವಾಗಿ ಹರಿಯುವಾಗ, ನೀರು ಹರಿ ಯುವ ಪೈಪ್‌ನೊಳಗೆ ಮಳೆ ನೀರು ಸಹಿತ ಒಳಚರಂಡಿ ನೀರು ಒಳಹೊದರೂ ಆಶ್ಚರ್ಯವಿಲ್ಲ. ಪಾಲಿಕೆಯು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆಯ ಮೂಲವನ್ನು ಹುಡುಕುವ ಪ್ರಯತ್ನ ಮಾಡಬೇಕಿದೆ.
ಲೋವೆರ್ ಬೆಂದೂರ್‌ವೆಲ್ನಲ್ಲಿ ನೀರು ಪೋಲಾ ಗುತ್ತಿರುವ ವಿಚಾರವನ್ನು ‘ಸುದಿನ’ ಈ ಹಿಂದೆಯೇ ಎಚ್ಚರಿಸಿತ್ತು. ಸಮಸ್ಯೆಯನ್ನು ಮೇಯರ್ ಆಗಿದ್ದ ಭಾಸ್ಕರ್ ಕೆ. ಮತ್ತು ಕಾರ್ಪೊರೇಟರ್ ಆಗಿದ್ದ ನವೀನ್ ಡಿ’ಸೋಜಾ ರ ಗಮನಕ್ಕೆ ತರಲಾಗಿತ್ತು. ಕೂಡಲೇ ಸಮಸ್ಯೆಗೆ ಸ್ಪಂದಿಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿ 8 ತಿಂಗಳಾದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಸಾರ್ವಜನಿಕರು ಈ ಬಗ್ಗೆ ಪಾಲಿಕೆಗೆ ಮನವಿ ಮಾಡಿದರೂ ಪ್ರಯೋಜನ ಮಾತ್ರ ಶೂನ್ಯ. ಇದೇ ಕಾರಣಕ್ಕೆ ಈ ಪೈಪ್‌ಲೈನ್ ಅನೇಕ ಕಡೆಗಳಲ್ಲಿ ತುಕ್ಕು ಹಿಡಿದಿದೆ. ತುಕ್ಕುಹಿಡಿದ ಪ್ರದೇಶದಲ್ಲಿ ಪೈಪ್ ತೂತಾಗಿ ನೀರು ಪೋಲಾಗುತ್ತಿದೆ’ ಎನ್ನುತ್ತಾರೆ.
ಶಾಶ್ವತ ಪರಿಹಾರ ಅಗತ್ಯ
ಸಾರ್ವಜನಿಕರು ಈ ಬಗ್ಗೆ ಪಾಲಿಕೆಗೆ ಅನೇಕ ಬಾರಿ ದೂರು ನೀಡಿದ್ದಾರೆ. ಸಂಬಂಧಪಟ್ಟ ಇಲಾಖೆ ಅಸಮರ್ಪಕ ಕಾಮಗಾರಿ ನಡೆಸುತ್ತದೆ. ಪೈಪ್‌ಲೈನ್‌ಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು ಅರೆಬರೆ ಕಾಮಗಾರಿ ನಡೆಸುತ್ತಿದೆ. ಇದಾದ ಕೆಲವೇ ದಿನಗಳ ಬಳಿಕ ಪಕ್ಕದಲ್ಲಿಯೇ ಮತ್ತೂಂದು ತೂತಾಗಿ ನೀರು ಪೋಲಾಗಲು ಪ್ರಾರಂಭವಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Mangaluru: ಪಿಲಿಕುಳ ಮೃಗಾಲಯಕ್ಕೆ “ಏಷ್ಯಾಟಿಕ್ ಗಂಡು ಸಿಂಹ’ ಆಗಮನ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
MUST WATCH
ಹೊಸ ಸೇರ್ಪಡೆ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.