ಏಕಮುಖ ಸಂಚಾರ: ಹೆಚ್ಚುವರಿ ಎಸ್‌ಪಿ ಪರಿಶೀಲನೆ
Team Udayavani, May 23, 2019, 6:00 AM IST
ಉಪ್ಪಿನಂಗಡಿ: ಬ್ಯಾರಿಕೇಡ್ ಅಳವಡಿಸಿ ಏಕಮುಖ ಸಂಚಾರಕ್ಕೆ ಮಾಡಿರುವ ವ್ಯವಸ್ಥೆ.
ಉಪ್ಪಿನಂಗಡಿ: ಪಟ್ಟಣದಲ್ಲಿ ಜಾರಿಯಲ್ಲಿರುವ ಪ್ರಾಯೋಗಿಕ ಏಕಮುಖ ಸಂಚಾರದ ಕುರಿತು ಅಧ್ಯಯನ ನಡೆಸಿ ಹೆಚ್ಚುವರಿ ಎಸ್‌ಪಿ ವಿಕ್ರಮ್ ಹಂಟೆ ಅವರು ವರದಿ ಸಲ್ಲಿಸಲಿದ್ದಾರೆ. ಅವರು ಸೋಮವಾರ ಸಂಜೆ ಉಪ್ಪಿನಂಗಡಿಗೆ ಆಗಮಿಸಿ, ಬ್ಯಾಂಕ್ ರಸ್ತೆಯ ಹಳೇ ಬಸ್ ನಿಲ್ದಾಣ, ಶೆಣೈ ನರ್ಸಿಂಗ್ ಹೋಮ್ ಮೂಲಕ ಹೆದ್ದಾರಿ ಮಾರ್ಗವಾಗಿ ಹೋಗಿ ಪರಿಶೀಲಿಸಿದರು. ಇದೇ ವೇಳೆ ಶೆಣೈ ನರ್ಸಿಂಗ್ ಹೋಮ್ ರಸ್ತೆಯಲ್ಲಿನ ಎರಡು ಕಡೆಗಳಲ್ಲಿ ವಾಹನಗಳ ನಿಲುಗಡೆ ಸಹಿತ ಪಾದಚಾರಿಗಳಿಗೆ ಆಗುವ ತೊಂದರೆಗಳ ಕುರಿತು ಮಾಹಿತಿ ಪಡೆದುಕೊಂಡರು. ಮುಂದಿನ ನಿರ್ಧಾರ ಕೈಗೊಳ್ಳುವಲ್ಲಿ ಎಸ್‌ಪಿ ಲಕ್ಷ್ಮೀಪ್ರಸಾದ್ ಅವರಿಗೆ ವರದಿ ಒಪ್ಪಿಸಲಿದ್ದಾರೆ. ಪ್ರೊಬೆಷನರಿ ಎಸ್‌ಪಿ ಪ್ರದೀಪ್ ಗುಂಟೆ, ಠಾಣೆ ಎಸ್‌ಐ ನಂದಕುಮಾರ್ ಉಪಸ್ಥಿತರಿದ್ದರು.
ಪ್ರೊಬೆಷನರಿ ಎಸ್‌ಪಿ ಏಕಾಏಕಿ ನಿರ್ಧಾರ ಕೈಗೊಂಡು ಬಳಿಕ ಕೆಲ ವರ್ತಕರ ವಿರೋಧದಿಂದ ಏಕಮುಖ ಸಂಚಾರ ಆರಂಭಿಸಿದ ದಿನವೇ ಸಂಜೆ ವರ್ತಕರ-ಜನಪ್ರತಿನಿಧಿಗಳ ಸಭೆ ಕರೆದು ಸಾಧಕ-ಬಾಧಕಗಳ ವಿಮರ್ಶೆ ನಡೆಸಿ ಅಂತಿಮ ನಿರ್ಧಾರದಂತೆ ಏಳು ದಿನಗಳ ತನಕ ಮಾತ್ರ ಏಕಮುಖ ಸಂಚಾರ ಪ್ರಾಯೋಗಿಕವಾಗಿ ಅಳವಡಿಸುತ್ತೇವೆ. ಅನಂತರ ವರದಿಯನ್ನು ಮೇಲಧಿಕಾರಿಗಳಿಗೆ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದ್ದರು. ಆದರೆ ಗ್ರಾಮಾಂತರ ಪ್ರದೇಶವಾದ ಇಲ್ಲಿ ಏಕಮುಖ ಸಂಚಾರ ಅನುಷ್ಠಾನಕ್ಕೆ ತಂದು 15 ದಿನಗಳು ಕಳೆದರೂ ರದ್ದುಗೊಳಿಸದೆ ಶೆಣೈ ನರ್ಸಿಂಗ್ ರಸ್ತೆಯಲ್ಲಿನ ಟ್ರಾಫಿಕ್ ಜಾಮ್‌ಗೆ ಯಾವುದೇ ಪರಿಹಾರ ಕಂಡುಕೊಂಡಿಲ್ಲ ವಿಪರ್ಯಾಸವಾಗಿದೆ ಎಂದು ವರ್ತಕರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.