31 ಸಾವಿರ ಮಂದಿಯಿಂದ ವೀಕ್ಷಣೆ; 5.84 ಲ.ರೂ. ಆದಾಯ ಸಂಗ್ರಹ
ಕದ್ರಿ ಪಾರ್ಕ್‌ನಲ್ಲಿ ಫಲ ಪುಷ್ಪ ಪ್ರದರ್ಶನಕ್ಕೆ ತೆರೆ
Team Udayavani, Jan 28, 2020, 1:39 AM IST
ವಿಶೇಷ ವರದಿ-ಮಹಾನಗರ: ಕದ್ರಿ ಪಾರ್ಕ್‌ನಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಫಲ ಪುಷ್ಪ ಪ್ರದರ್ಶನಕ್ಕೆ ರವಿವಾರ ತೆರೆಬಿದ್ದಿದ್ದು, ಮೂರು ದಿನಗಳಲ್ಲಿ ಒಟ್ಟು 31,389 ಮಂದಿ ಆಗಮಿಸಿ, ಸುಮಾರು 5.84 ಲಕ್ಷ ರೂ. ಆದಾಯ ಸಂಗ್ರವಾಗಿದೆ. ಅಲ್ಲದೆ, ಪ್ರದರ್ಶನಕ್ಕಿರಿಸಿದ್ದ ಸ್ಟಾಲ್‌ಗಳಿಂದ 4.35 ಲಕ್ಷ ರೂ. ಹಣ ಸಂಗ್ರಹವಾಗಿದೆ.
ಕದ್ರಿ ಪಾರ್ಕ್‌ನಲ್ಲಿ ಈ ಬಾರಿ ಜ. 24ರಿಂದ 26ರ ವರೆಗೆ ಫಲ ಪುಷ್ಪ ಪ್ರದರ್ಶನ ಆಯೋಜಿಸಲಾಗಿತ್ತು. ಪಾರ್ಕ್ ಪ್ರವೇಶಕ್ಕೆ ಮಕ್ಕಳಿಗೆ 10 ರೂ. ಮತ್ತು ವಯಸ್ಕರಿಗೆ 20 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು. ಜ. 24ರಂದು ಒಟ್ಟು 3114 ಮಂದಿ ಆಗಮಿಸಿ 60,140 ರೂ., ಜ. 25ರಂದು 9,582 ಮಂದಿ ಆಗಮಿಸಿ 1,80,580 ರೂ. ಮತ್ತು ಜ. 26ರಂದು 18,693 ಮಂದಿ ಆಗಮಿಸಿ 3,43,640 ರೂ. ಹಣ ಸಂಗ್ರವಾಗಿತ್ತು. ಒಟ್ಟು 31,389 ಮಂದಿ ಆಗಮಿಸಿ, 5,84,360 ರೂ. ಹಣ ಸಂಗ್ರವಾಗಿದೆ.
ಈ ವರ್ಷ ಒಟ್ಟು ಮೂರು ದಿನಗಳಲ್ಲಿ ಒಟ್ಟು 31,389 ಮಂದಿ ಆಗಮಿಸಿ, 5,84,360 ರೂ. ಹಣ ಸಂಗ್ರವಾಗಿದೆ. ಕಳೆದ ವರ್ಷ (2019) ಜ. 26ರಿಂದ 28ರ ವರೆಗೆ ಫಲ ಪುಷ್ಪ ಪ್ರದರ್ಶನ ಆಯೋಜಿಸಲಾಗಿತ್ತು. ಈ ವೇಳೆ 30,162 ಮಂದಿ ವಯಸ್ಕರು, 4,397 ಮಂದಿ ಮಕ್ಕಳು ಆಗಮಿಸಿ ಒಟ್ಟು 6,47,290 ರೂ. ಆದಾಯ ಸಂಗ್ರಹವಾಗಿತ್ತು.
ಕಳೆದ ವರ್ಷಕ್ಕಿಂತ
ಕಡಿಮೆ ಆದಾಯ ಸಂಗ್ರಹ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 62,930 ರೂ. ಆದಾಯ ಕಡಿಮೆ ಸಂಗ್ರಹವಾಗಿದೆ. ಈ ಬಾರಿ ನಗರದ ವಿವಿಧ ಶಾಲೆಗಳಿಂದ ಅನೇಕ ಮಂದಿ ವಿದ್ಯಾರ್ಥಿಗಳು ಫಲ ಪುಷ್ಪ ಪ್ರದರ್ಶನ ವೀಕ್ಷಣೆಗ ಆಗಮಿಸಿದ್ದರು. ಶಾಲೆಗಳಿಂದ ಸಮವಸ್ತ್ರ ಧರಿಸಿ ಬಂದ ಶಾಲಾ ಮಕ್ಕಳಿಗೆ, ಅಂಗವಿಕಲರಿಗೆ, ಭಿನ್ನ ಸಾರ್ಮಥ್ಯದ ಮಕ್ಕಳಿಗೆ ಪಾರ್ಕ್‌ನ ಒಳಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು.
ಪ್ರದರ್ಶನದಲ್ಲಿ 105 ಸ್ಟಾಲ್‌ಗಳು
ಈ ಬಾರಿಯ ಫಲ ಪುಷ್ಪ ಪ್ರದರ್ಶನದಲ್ಲಿ ಒಟ್ಟು 105 ಸ್ಟಾಲ್‌ಗಳಿದ್ದವು. ಅವುಗಳಲ್ಲಿ ಸರಕಾರಿ ಮತ್ತು ಸಂಘ ಸಂಸ್ಥೆಗಳ ಸ್ಟಾಲ್‌ಗಳಿಗೆ ಉಚಿತ ದರವಾಗಿತ್ತು. ಸ್ವಸಹಾಯ ಸಂಘಗಳ ಸ್ಟಾಲ್‌ಗಳಿಗೆ 1,000 ರೂ. ನಿಗದಿ ಮತ್ತು ವಾಣಿಜ್ಯ ಸ್ಟಾಲ್‌ಗಳಿಗೆ 5,000 ರೂ. ಬಾಡಿಗೆ ನಿಗದಿಯಾಗಿತ್ತು. ಒಟ್ಟು 105 ಸ್ಟಾಲ್‌ಗಳಲ್ಲಿ 15 ಉಚಿತ ಸ್ಟಾಲ್‌ಗಳಾಗಿದ್ದು, ಒಟ್ಟು 3.25 ಲಕ್ಷ ರೂ. ಸಂಗ್ರಹವಾಗಿದೆ. ಇನ್ನು, ಒಟ್ಟು 8 ನರ್ಸರಿಗಳಲ್ಲಿ 1.10 ಲಕ್ಷ ರೂ. ಸಂಗ್ರಹವಾಗಿದೆ.
ಆದಾಯದಲ್ಲಿ ಸ್ವಲ್ಪ ಇಳಿಮುಖ
ಈ ವರ್ಷ ಕದ್ರಿ ಪಾರ್ಕ್‌ನಲ್ಲಿ ಆಯೋಜಿಸಿದ ಫಲಪುಷ್ಪ ಪ್ರದರ್ಶನದಲ್ಲಿ ಒಟ್ಟು 31,389 ಮಂದಿ ಆಗಮಿಸಿದ್ದು, ಸುಮಾರು 5.84 ಲಕ್ಷ ರೂ. ಆದಾಯ ಸಂಗ್ರವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಆದಾಯದಲ್ಲಿ ಸ್ವಲ್ಪ ಇಳಿಮುಖವಾಗಿದೆ.
- ಜಾನಕಿ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.