ಹೊಗೆಬಜಾರ್, ಮಲ್ಪೆಯಲ್ಲಿ ತೇಲುವ ಜೆಟ್ಟಿ: ಕೋಟ
ಬೆಂಗ್ರೆಯಲ್ಲಿ ಫೆರಿ ದೋಣಿ, ಬೋಳೂರಿನಲ್ಲಿ ಕಿರು ಪ್ರಯಾಣಿಕ ಜೆಟ್ಟಿ ಉದ್ಘಾಟನೆ
Team Udayavani, Jan 21, 2020, 1:01 AM IST
ಪಣಂಬೂರು: ಮೀನುಗಾರಿಕೆ ಉತ್ತೇಜಿಸುವ ನಿಟ್ಟಿನಲ್ಲಿ ನಗರದ ಹೊಗೆಬಜಾರ್ ಹಾಗೂ ಮಲ್ಪೆಯಲ್ಲಿ ತಲಾ 6.5 ಕೋಟಿ ರೂ. ವೆಚ್ಚದಲ್ಲಿ ತೇಲುವ ಜೆಟ್ಟಿ ನಿರ್ಮಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ತೋಟಬೆಂಗರೆ ಮಹಾಜನ ಸಭಾ ವತಿಯಿಂದ ಪ್ರಯಾಣಿಕರ ಸಂಚಾರಕ್ಕೆ ನೀಡಿರುವ ಕುಮಾರಧಾರ ಪ್ರಯಾಣಿಕ ದೋಣಿ ಹಾಗೂ ಬೋಳೂರು ಸುಲ್ತಾನ್‌ಬತ್ತೇರಿ ಬಳಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಪ್ರಯಾಣಿಕರ ಕಿರು ಜೆಟ್ಟಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಮೊದಲಿಗೆ ಪ್ರಾಯೋಗಿಕವಾಗಿ ತೇಲುವ ಜೆಟ್ಟಿ ನಿರ್ಮಿಸಿ ಪರಿಶೀಲಿಸಿ ಅದು ಬಹು ಉಪಯೋಗಿ ಎಂದು ಕಂಡುಬಂದಲ್ಲಿ ಧಾರಣಾ ಸಾಮರ್ಥ್ಯ ಸೇರಿದಂತೆ ತಾಂತ್ರಿಕ ಅನುಮೋದನೆ ಗಳನ್ನು ಪಡೆದು ಬಳಿಕ ಶಾಶ್ವತ ಜೆಟ್ಟಿ ನಿರ್ಮಿಸಲಾಗುವುದು. ಜತೆಗೆ ಡ್ರೆಜ್ಜಿಂಗ್ ಯಂತ್ರ ಖರೀದಿ ಸಲು ಸರಕಾರ ಆಸಕ್ತವಾಗಿದೆ ಎಂದರು.
ಮೀನುಗಾರರಿಗೆ ಕ್ರೆಡಿಟ್ ಕಾರ್ಡ್
ಮೀನುಗಾರರ ನೆಮ್ಮದಿ, ಭದ್ರತೆಗೆ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ. ಕೃಷಿ ಮಾದರಿಯಲ್ಲಿ ಎಲ್ಲ ಮೀನುಗಾರ ಕುಟುಂಬಗಳಿಗೂ ಕ್ರೆಡಿಟ್ ಕಾರ್ಡ್ ನೀಡಲಾಗುವುದು ಎಂದರು. ಅಳಿವೆಬಾಗಿಲಿನಲ್ಲಿ ಹೂಳು ತುಂಬಿ ಮೀನುಗಾರರಿಗೆ ತೀವ್ರ ಸಮಸ್ಯೆಯಾಗುತ್ತಿದೆ. 29 ಕೋಟಿ ರೂ. ಅನುದಾನ ಲಭ್ಯವಿದ್ದು, ಶೀಘ್ರವೇ ಡ್ರೆಜ್ಜಿಂಗ್ ಆರಂಭವಾಗ ಲಿದೆ ಎಂದರು.
ಶಾಸಕ ಡಿ. ವೇದವ್ಯಾಸ್ ಕಾಮತ್ ಮಾತನಾಡಿ, ಹಳೆ ಬಂದರು ಪರಿಸರ ದಲ್ಲಿ ಸ್ಥಗಿತಗೊಂಡಿದ್ದ ಮೂರನೇ ಹಂತದ ಜೆಟ್ಟಿ ವಿಸ್ತರಣೆ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ. ಬೆಂಗರೆ ಯಲ್ಲಿ ಪೊಲೀಸ್ ಔಟ್‌ಪೋಸ್ಟ್‌ಗೆ ಬೇಡಿಕೆ ಇದ್ದು, ಈ ಬಗ್ಗೆ ಉಸ್ತುವಾರಿ ಸಚಿವರು ಗೃಹಸಚಿವರ ಗಮನಕ್ಕೆ ತಂದಿದ್ದಾರೆ ಎಂದರು.
ಬೆಂಗರೆ ಮಹಾಸಭಾ ಅಧ್ಯಕ್ಷ ಚೇತನ ಬೆಂಗ್ರೆ, ಬೆಂಗರೆ ಎಸ್‌ಎಂಬಿ ಫೆರಿ ಸರ್ವಿಸ್ ಅಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಸ್ಥಳೀಯ ಕಾರ್ಪೊರೇಟರ್ ಮುನೀಬ್ ಬೆಂಗ್ರೆ ಸುನಿತಾ, ಬಂದರು ಎಂಜಿನಿಯರ್ ಸುಜನ್ ರಾವ್, ಮೊಗವೀರ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದೋಣಿ ಚಲಾಯಿಸಿದ ಸಚಿವ
ಫೆರಿ ದೋಣಿ ಸೇವೆಯನ್ನು ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ವತಃ ದೋಣಿಯನ್ನು ಚಲಾಯಿಸಿದರು. ಬಳಿಕ ಶಾಸಕರ ಜತೆಗೂಡಿ ಬೊಳೂರು ವರೆಗೆ ದೋಣಿಯಲ್ಲಿಯೇ ಪ್ರಯಾಣಿಸಿ ಮೀನುಗಾರರ ಅಹವಾಲು ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.