ವಿಪಕ್ಷ  ಬಿಜೆಪಿಯಿಂದ ಸಭಾತ್ಯಾಗ; ಆಡಳಿತ ಪಕ್ಷದ ಸಮರ್ಥನೆ


Team Udayavani, Apr 1, 2017, 12:53 PM IST

3103kpk12.jpg

ಪುತ್ತೂರು: ಸಾಮಾನ್ಯ ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿಗಳನ್ನು ಮಂಡಿಸದೇ ಕಾನೂನು ಬಾಹಿರವಾಗಿ ಸಭೆ ಆಯೋಜಿಸಿರು ವುದನ್ನು ಮತ್ತು ವಿವಿಧ ಸಭೆಗೆ ಸಲ್ಲಿಸಿದ ಆಕ್ಷೇಪ ಗಳನ್ನು ದಾಖಲಿಸದೆ ಏಕಪಕ್ಷೀಯ ಧೋರಣೆ ತಳೆದಿರುವುದನ್ನು ವಿರೋಧಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ ವಿದ್ಯಾಮಾನ ಶುಕ್ರವಾರದ ನಗರಸಭಾ ಸಾಮಾನ್ಯ ಸಭೆಯಲ್ಲಿ  ನಡೆಯಿತು.

ನಗರಸಭಾ ಸಾಮಾನ್ಯ ಸಭೆ ಅಧ್ಯಕ್ಷೆ ಜಯಂತಿ ಬಲಾ°ಡು ಅಧ್ಯಕ್ಷತೆಯಲ್ಲಿ ನಗರ ಸಭಾಂಗಣದಲ್ಲಿ ನಡೆಯಿತು.ಅಜೆಂಡಾ ವಿಷಯ ಪ್ರಸ್ತಾವನೆ ವೇಳೆ ಮಾತ ನಾಡಿದ ಸದಸ್ಯ ರಾಜೇಶ್‌ ಬನ್ನೂರು, ಫೆ. 9 ಮತ್ತು 10ರಂದು ನಡೆದ ಸಭೆಯ ನಡಾವಳಿಗಳನ್ನು ಈ ಸಭೆಯಲ್ಲಿ ಯಾಕೆ ಮಂಡಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಪುರಸಭಾ ಆ್ಯಕ್ಟ್‌ನಲ್ಲಿ ನಡಾವಳಿ ಮಂಡನೆ ಕುರಿತು ಸ್ಪಷ್ಟವಾಗಿ ಉಲ್ಲೇಖವಿದ್ದರೂ, ನಗರಸಭೆ ಆಡಳಿತ ಅದನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು

ಉತ್ತರಿಸಿದ ಆಡಳಿತ ಪಕ್ಷ ಸದಸ್ಯ ಎಚ್‌. ಮಹಮ್ಮದ್‌ ಆಲಿ ಮಾತನಾಡಿ, ಆಕ್ಷೇಪಣೆ ದಾಖಲಿಸಿಕೊಳ್ಳುವುದು, ಮತ ಹಾಕುವ ನಿರ್ಣಯ ಕೈಗೊಳ್ಳುವುದು ಅಧ್ಯಕ್ಷರ ಪರ ಮಾಧಿಕಾರ. ಅದನ್ನು ಸದಸ್ಯರು ಬಲವಂತವಾಗಿ ಮಾಡಿ ಸುವಂತಿಲ್ಲ. ಈ ಹಿಂದೆ ಬಿಜೆಪಿ ಆಡಳಿತಾ ವಧಿಯಲ್ಲೂ ಕೂಡ ಆಕ್ಷೇಪ ದಾಖಲಿಸಿ ಕೊಳ್ಳದ ಉದಾಹರಣೆಗಳಿವೆ ಎಂದು ಸಮರ್ಥಿಸಿದರು.ಸದಸ್ಯ ಜೀವಂಧರ್‌ ಜೈನ್‌ ಮಾತನಾಡಿ, ನ. 23, 25, ಡಿ.9, 30ರಂದು ನಡೆದ ಸಾಮಾನ್ಯ ಮತ್ತು ವಿಶೇಷ ಸಾಮಾನ್ಯ ಸಭೆಗೆ ನಮ್ಮ ಆಕ್ಷೇಪ ದಾಖಲಿಸಿದ್ದೇವೆ. 

ಮಾ. 9, 10ರ ಸಭೆಯ ಲ್ಲಿಯು ಹಿಂದಿನ ನಡಾವಳಿ ಮಂಡಿಸಿಲ್ಲ. ಈ ಎಲ್ಲದರ ಬಗ್ಗೆ ಆಕ್ಷೇಪ ಸಲ್ಲಿಸಿದ್ದರೂ ದಾಖ ಲಿಸಿಲ್ಲ. ಮತ ಹಾಕುವ ನಿರ್ಣಯಕ್ಕೂ ಒಪ್ಪಿಗೆ ಸೂಚಿಸಿಲ್ಲ. ಹಾಗಾಗಿ ಇಂದಿನ ಸಭೆಯನ್ನು ರದ್ದು ಮಾಡುವಂತೆ ಅವರು ಆಗ್ರಹಿಸಿದರು.

ಆರೋಪ-ಪ್ರತ್ಯಾರೋಪ
ಶುಕ್ರವಾರದ ಸಭೆಯ ನಾಲ್ಕು ಅಜೆಂಡಾಗಳಿಗೆ ವಿಪಕ್ಷ ಸದಸ್ಯರು ಅಧ್ಯಕ್ಷರಿಗೆ ಆಕ್ಷೇಪ ಪತ್ರವನ್ನು ಸಲ್ಲಿಸಿದರು. ಆದರೆ ಅಧ್ಯಕ್ಷರು ಹಿಂಬರೆಹದ ಪ್ರತಿಗೆ ಸಹಿ ಹಾಕದೆ ಇರುವುದಕ್ಕೆ ಗರಂ ಆದ ರಾಜೇಶ್‌ ಬನ್ನೂರು, ಜೀವಂಧರ್‌ ಜೈನ್‌, ವಿನಯ ಭಂಡಾರಿ, ರಮೇಶ್‌ ರೈ ಮೊದಲಾದವರು, ಏಕಪಕ್ಷೀಯ ಧೋರಣೆ ಪ್ರದರ್ಶಿಸುತ್ತಿದ್ದೀರಿ. ಆಕ್ಷೇಪ ಪತ್ರದ ಪ್ರತಿಗೆ ಸಹಿ ಹಾಕಿ ನೀಡುವುದು ನಿಯಮ. ಅದನ್ನು ಉಲ್ಲಂಘಿಸಿದ್ದೀರಿ ಎಂದು ಅವರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಸದಸ್ಯರು, ಬಿಜೆಪಿ ಆಡಳಿತ ಅವಧಿಯಲ್ಲಿ ಹೇಗೆ ಆಡಳಿತ ನಡೆದಿದೆ ಎನ್ನುವುದು ನಮಗೆ ಚೆನ್ನಾಗಿಗೊತ್ತಿದೆ ಎಂದು ಸಮರ್ಥಿಸಿದ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಕೆಲ ಕಾಲ ಆರೋಪ-ಪ್ರತ್ಯಾರೋಪಗಳಲ್ಲಿ ಸಭೆ ಮುಳುಗಿ ಹೋಗಿತ್ತು. ಧಿಕ್ಕಾರವೂ ಮೊಳಗಿತ್ತು.

ಕಾನೂನು ಹೋರಾಟ
ಆಡಳಿತ ಪಕ್ಷದ ಸದಸ್ಯ ಎಚ್‌.ಮಹಮ್ಮದ್‌ ಆಲಿ ಮಾತನಾಡಿ, ಬಿಜೆಪಿ ಅವಧಿಯಲ್ಲಿನ  ಆಡಳಿತ ಭ್ರಷ್ಟಾಚಾರದ ದಾಖಲೆ ನಮ್ಮ ಬಳಿ ಇದೆ. ಅದನ್ನು ಹೊರ ತಂದು ಕಾನೂನಿನ ಮೂಲಕ ಹೋರಾಟ ನಡೆಸುತ್ತೇವೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು, ತನಿಖೆ ಮಾಡಿಸಿ. ನಮ್ಮದೇನೂ ಆಕ್ಷೇಪ ಇಲ್ಲ. ನಿಮ್ಮ ಅವಧಿಯ ಅವ್ಯವಹಾರ ನಮ್ಮ ಬಳಿ ಇದೆ. ನೀವು ಕಾನೂನು ಹೋರಾಟ ಮಾಡಿ ಎಂದು ಅವರು ಉತ್ತರಿಸಿದರು. ಈ ವಿಚಾರಕ್ಕೆ ಸಂಬಂಧಿಸಿ ಕೆಲ ಕಾಲ ಸಭೆ ಗದ್ದಲದ ಗೂಡಾಯಿತು.

ಸ್ಥಾಯೀ ಸಮಿತಿಗೆ ಆಯ್ಕೆ ಚರ್ಚೆ
ಸ್ಥಾಯೀ ಸಮಿತಿ ಸದಸ್ಯರ ಆಯ್ಕೆಗೆ ಪಟ್ಟಿ ನೀಡಲಾಗಿದ್ದರೂ ಆಯ್ಕೆ ಮಾಡಿಲ್ಲ. ಮುಂದೂಡಲಾಗಿದೆ ಎಂಬ ಉತ್ತರ ನೀಡಿದ್ದೀರಿ ಎಂದು ಬಿಜೆಪಿ ಸದಸ್ಯರು ಆರೋಪಿಸಿದಾಗ, ಆಯ್ಕೆ ಬಗ್ಗೆ ಕುಳಿತು ಚರ್ಚಿಸಲು ನೀವು ತಯಾರಿಲ್ಲ. ಹೀಗಾಗಿ ಆಯ್ಕೆ ನಡೆದಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷತೆ ಆಸೆ ನಮಗಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ಸಮರ್ಥಿಸಿದರು. ಈ ವಿಚಾರದಲ್ಲಿ ಸಭೆಯಲ್ಲಿ ದೀಫì ಚರ್ಚೆ ಮುಂದುವರಿಯಿತು.

ಶಾಸಕರ ಆಗಮನ: ಸದಸ್ಯರ ನಿರ್ಗಮನ
ಬಿಜೆಪಿ ಸದಸ್ಯರು ಸಭಾ ಬಹಿಷ್ಕಾರಕ್ಕೆ ಮುಂದಾದ ವೇಳೆಯಲ್ಲಿ ಸಭೆಗೆ ಆಗಮಿಸಿದ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಬಹಿಷ್ಕಾರದ ಬದಲು ವಿಷಯ ತಿಳಿಸುವಂತೆ ಸೂಚಿಸಿದರು. ರಾಜೇಶ್‌ ಬನ್ನೂರು ನಗರಸಭೆ ಆಡಳಿತದ ಏಕಪಕ್ಷೀಯ ಧೋರಣೆ ತಳೆದಿದೆ ಎಂದು ವಿವರಿಸಿದರು. ಇದಕ್ಕೆ ಮರು ಉತ್ತರ ನೀಡಲು ಆಡಳಿತ ಪಕ್ಷದ ಸದಸ್ಯ ಎಚ್‌. ಮಹಮ್ಮದ್‌ ಆಲಿ ಮುಂದಾದಾಗ ಅದಕ್ಕೆ ಬಿಜೆಪಿ ಸದಸ್ಯರು ಸಹಮತ ಸೂಚಿಸದೆ, ಸಭೆ ಯಿಂದ ನಿರ್ಗಮಿಸಿದರು. ಅನಂತರ ಶಾಸಕರ ಉಪಸ್ಥಿತಿಯಲ್ಲಿ ಸಾಮಾನ್ಯ ಸಭೆ ಮುಂದುವರಿಯಿತು.ಪೌರಾಯುಕ್ತೆ ರೂಪಾ ಶೆಟ್ಟಿ, ಉಪಾಧ್ಯಕ್ಷ ವಿಶ್ವನಾಥ ಗೌಡ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಅನುದಾನ ಮೀಸಲಲ್ಲಿ ತಾರತಮ್ಯ: ಆಕ್ಷೇಪ; ಸಮರ್ಥನೆ
ಎಸ್‌ಪಿಸಿ-ಟಿಎಸ್‌ಪಿಯಲ್ಲಿನ 1.5 ಕೋ.ರೂ. ಅನುದಾನದಲ್ಲಿ 75 ಲಕ್ಷ ರೂ. ಅನುದಾನವನ್ನು ಅಧ್ಯಕ್ಷರ ವಾರ್ಡ್‌ಗೆ ಮೀಸಲಿರಿಸಲಾಗಿದೆ. ಇದು ಉಳಿದ ಸದಸ್ಯ ವಾರ್ಡ್‌ಗಳ ಕಡಗಣನೆಗೆ ಉದಾ ಹರಣೆಯಾಗಿದ್ದು, ಈ ತಾರತಮ್ಯ ನೀತಿಗೆ ಉತ್ತರಿಸುವಂತೆ ಸದಸ್ಯರಾದ ರಾಜೇಶ್‌ ಬನ್ನೂರು, ಜೀವಂಧರ್‌ ಜೈನ್‌, ರಾಮಣ್ಣ ಗೌಡ, ವಾಣಿಶ್ರೀಧರ್‌ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮಹಮ್ಮದ್‌ ಆಲಿ, ತಾರತಮ್ಯ ಮಾಡಿಲ್ಲ. ಎಸ್‌ಸಿ-ಎಸ್‌ಟಿ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ ಹಣ ಮೀಸಲಿಟ್ಟಿದ್ದು, ಬಲಾ°ಡು ವಾರ್ಡ್‌ನ ರಸ್ತೆಗೆ ಅಷ್ಟು ಮೊತ್ತದ ಹಣ ಅಗತ್ಯ ಇದ್ದ ಕಾರಣ ಈ ಹಣ ಮೀಸಲಿಡಲಾಗಿದೆ. ಎಲ್ಲ ವಾರ್ಡ್‌ಗಳ ಕಾಲನಿ ಸಂಪರ್ಕ ರಸ್ತೆಗೆ ಹಣ ಇಡಲಾಗಿದೆ ಎಂದರು. ಈ ಉತ್ತರ ಸಮರ್ಥ ನಿಯಲ್ಲ ಎಂದು ವಿಪಕ್ಷ ಸದಸ್ಯರು ವಿರೋಧ ಸೂಚಿಸಿದರು.

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

11

Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ

10

Sullia: ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್‌, ಶೂ ಕಳವು

2(1

Kumbra ಜಂಕ್ಷನ್‌ನಲ್ಲಿ ಈಗ ಸೆಲ್ಫಿ ಪಾಯಿಂಟ್‌ ಆಕರ್ಷಣೆ!

1

Belthangady: ಕಾನನ ವಾಸಿಗಳಿಗೆ ಮೆಸ್ಕಾಂ ಬೆಳಕು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.