ಸೂಕ್ಷ್ಮ ಪರಿಸರ ವಲಯಕ್ಕೆ ವಿರೋಧ, ರಸ್ತೆ ತಡೆ


Team Udayavani, Aug 9, 2017, 8:55 AM IST

digbandana.jpg

ಸುಳ್ಯ: ಕೊಡಗು ಜಿಲ್ಲೆ ವ್ಯಾಪ್ತಿಯ ಪುಷ್ಪಗಿರಿ ವನ್ಯಧಾಮವನ್ನು ಸೂಕ್ಷ್ಮ ಪರಿಸರ ವಲಯವೆಂದು ವಿಸ್ತರಿಸಿ ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ 5 ಕಂದಾಯ ಗ್ರಾಮಗಳನ್ನು ಸೇರ್ಪಡೆಗೊಳಿಸಿರುವು ದರ ವಿರುದ್ಧ ಮಂಗಳವಾರ ಹರಿಹರಪಳ್ಳತ್ತಡ್ಕದಲ್ಲಿ ಪûಾತೀತವಾಗಿ ಬೃಹತ್‌ ಪ್ರತಿಭಟನೆ ನಡೆಯಿತು.

ಸುಮಾರು 5 ಗಂಟೆ ಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಕಾರರು, ಒಂದೂವರೆ ಗಂಟೆ ಕಾಲ ಮಡಿಕೇರಿ ರಕ್ಷಿತಾರಣ್ಯ ಅಧಿಕಾರಿಗಳಾದ ಸಿಸಿಎಫ್ ಸೀಮಾ, ರೇಂಜರ್‌ ಮರಿಸ್ವಾಮಿ ಕೆ.ಎಂ. ಮತ್ತು ಸಿಬಂದಿಗೆ ದಿಗ್ಬಂಧನ ವಿಧಿಸಿ ತರಾಟೆಗೆತ್ತಿಕೊಂಡರು.

ಗ್ರಾಮಕ್ಕೆ ಆಗಮಿಸಲು ಬಿಡೆವು
ತಾ.ಪಂ. ಸದಸ್ಯ ಉದಯ ಕೊಪ್ಪಡ್ಕ ಅವರು ಮಾತನಾಡಿ, 15 ವರ್ಷಗಳಿಂದ ಕಡಮಕಲ್‌ನಲ್ಲಿ ತಮ್ಮ ಇಲಾಖೆಯ ಸಿಬಂದಿ ಗ್ರಾಮಸ್ಥರ ಸಹಕಾರ ದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದು ಬಾರಿಯೂ ಇಲಾಖೆಯ ಸಿಬಂದಿಗೆ ಒಂದಿಷ್ಟೂ ಅಸಹಕಾರ ವ್ಯಕ್ತಪಡಿಸಿಲ್ಲ. ಆದರೆ ಇದೀಗ ಅರಣ್ಯ ಇಲಾಖೆ ಸೂಕ್ಷ್ಮ ಪರಿಸರವನ್ನು 1 ಕಿ.ಮೀ.ನಿಂದ 10 ಕಿ.ಮೀ. ವರೆಗೆ ವಿಸ್ತರಿಸಿ 5 ಗ್ರಾಮಗಳನ್ನು ಸೇರಿಸುವ ಮೂಲಕ ಗ್ರಾಮಸ್ಥರನ್ನು ಓಡಿಸುವ ಷಡ್ಯಂತ್ರ ನಡೆಸಿದೆ. ಸಮಸ್ಯೆ ಇತ್ಯರ್ಥವಾಗುವ ವರೆಗೆ ಇಲಾಖೆಯ ಯಾವುದೇ ಅಧಿಕಾರಿ ಮತ್ತು ಸಿಬಂದಿ ಗ್ರಾಮಕ್ಕೆ ಆಗಮಿಸುವುದನ್ನು ತಡೆಯುವುದ
ರೊಂದಿಗೆ ಆಹಾರ, ವಸತಿ ಸಹಿತ ಇತರ ಅಗತ್ಯಗಳನ್ನು ಪೂರೈಸಲು ಅವಕಾಶ ನೀಡದಿರಲು ನಿರ್ಧರಿಸಿದ್ದೇವೆ ಎಂದು ವಿವರಿಸಿದರು.

ಸಿಸಿಎಫ್ ಸೀಮಾ ಹಾಗೂ ರೇಂಜರ್‌ ಮರಿಸ್ವಾಮಿ ಅವರು ಸೂಕ್ಷ್ಮ ಪರಿಸರ ವ್ಯಾಪ್ತಿಯಿಂದ ಸಮಸ್ಯೆ ಇಲ್ಲವೆಂದು ಸಮಜಾಯಿಷಿ ನೀಡಲು ಯತ್ನಿಸಿದಾಗ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸ್ಥಳದಿಂದ ತೆರಳಲು ಬಿಡೆವು ಎಂದು ಪಟ್ಟುಹಿಡಿದರು.

ವಿಶೇಷ ಗ್ರಾಮಸಭೆಗೆ ನಿರ್ಧಾರ
ಪ್ರತಿಭಟನೆ ವಿಚಾರ ತಿಳಿದು ಶಾಸಕ ಅಂಗಾರ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ್‌ ಪೂಜಾರಿ ಆಗಮಿಸಿ, ಜನರ ಆಕ್ರೋಶ ಮತ್ತು ಭಾವನೆಗಳನ್ನು ಗೌರವಿಸಿ ಮೇಲಾಧಿಕಾರಿಗಳಿಗೆ ವರದಿ ನೀಡಿ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ತಿಳಿಸಿದರು. ಅಂತಿಮವಾಗಿ ಮುಂದೆ ಮೇಲಾಧಿಕಾರಿಗಳನ್ನು ಕರೆಸಿ ವಿಶೇಷ ಗ್ರಾಮ ಸಭೆ ನಡೆಸಲು ಪ್ರಯತ್ನಿಸುವುದಾಗಿ ತಿಳಿಸಿ ಗ್ರಾಮಸ್ಥರ ಮನವಿಯನ್ನು ಸ್ವೀಕರಿಸಿದ ಬಳಿಕ ಅಧಿಕಾರಿಗಳು ಕಡಮಕಲ್‌ ಕಚೇರಿಗೆ ತೆರಳದೇ ಮಡಿಕೇರಿಗೆ ವಾಪಸಾದರು.

ಮೂರು ದಿನಗಳಿಂದ ಹೋರಾಟ
ಜೂ. 6ರಂದು ಕ‌ಲ್ಮಕಾರು ಗ್ರಾಮಸ್ಥರು ದಿಢೀರ್‌ ಸಭೆ ಸೇರಿ ಕಡಮಕಲ್‌ ಸಮೀಪದ ರಕ್ಷಿತಾರಣ್ಯ ಕಚೇರಿಯ ಸಿಬಂದಿಗೆ ಎಚ್ಚರಿಕೆ ನೀಡಿ ಸ್ಥಳದಿಂದ ತೆರಳುವಂತೆ ಸೂಚಿಸಿದ್ದರು. ಬೆದರಿದ ಸಿಬಂದಿ ಕಚೇರಿಗೆ ಬೀಗ ಜಡಿದು ತೆರಳಿದ್ದರು. ಈ ಹಿನ್ನೆಲೆಯಲ್ಲಿ ಜೂ. 7ರಂದು ಫಾರೆಸ್ಟರ್‌ ಹಾಗೂ ರೇಂಜರ್‌ಗಳು ಕಡಮಕಲ್‌ಗೆ ಆಗಮಿಸಿದ್ದರು. ಅವರನ್ನು ಕೂಡ ಸ್ಥಳಕ್ಕೆ ತೆರಳಲು ಕಲ್ಮಕಾರು ಪೇಟೆಯಲ್ಲಿ ಗ್ರಾಮಸ್ಥರು ಅವಕಾಶ ನೀಡದೆ ಹಿಂದಿರುಗುವಂತೆ ಪ್ರತಿರೋಧ ತೋರಿದ್ದರು.

ಜೂ. 8ರಂದು ಮಡಿಕೇರಿಯಿಂದ ಸಿಸಿಎಫ್ ಸೀಮಾ, ರೇಂಜರ್‌ ಮರಿಸ್ವಾಮಿ ಹಾಗೂ ಸಿಬಂದಿ ಆಗಮಿಸುವ ಕುರಿತು ಬೆಳಗ್ಗೆ ಈ ಭಾಗದ ತಾ.ಪಂ. ಸದಸ್ಯ ಉದಯ್‌ ಕೊಪ್ಪಡ್ಕ ಮಾಹಿತಿ ಪಡೆದು, ಗ್ರಾಮಸ್ಥರನ್ನು ಒಗ್ಗೂಡಿಸಿ ಪ್ರತಿಭಟನೆಗೆ ಮುಂದಾದರು. ದೂರವಾಣಿ ಮೂಲಕ ಗ್ರಾಮಸ್ಥರನ್ನು ಸಂಪರ್ಕಿಸಿ ಹರಿಹರಪಳ್ಳತ್ತಡ್ಕ ಪೇಟೆಯಲ್ಲಿ ಮನವಿ ನೀಡಲು ಮುಂದಾದರು. 10.30Ã ವೇಳೆಗೆ ಹರಿಹರ ಜಂಕ್ಷನ್‌ನಲ್ಲಿ ರಸ್ತೆ ತಡೆ ಆರಂಭಗೊಂಡಿತು. ಮೂರು ಗಂಟೆಗಳ ಬಳಿಕ ಸ್ಥಳಕ್ಕಾಗಮಿಸಿದ ಅಧಿಕಾರಿಗಳನ್ನು ಒಂದೂವರೆ ಗಂಟೆಗಳ ಕಾಲ ದಿಗ್ಬಂಧನ ವಿಧಿಸಿ ಮುಖಂಡರು ತರಾಟೆಗೆತ್ತಿಕೊಂಡರು.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.